SUDDIKSHANA KANNADA NEWS/ DAVANAGERE/ DATE:13-02-2024
ದಾವಣಗೆರೆ: ಕೇಂದ್ರದ ಒಬಿಸಿ ಸೌಲಭ್ಯಕ್ಕೆ ಲಿಂಗಾಯತರಿಗೆ ಶಿಫಾರಸ್ಸು ಮಾಡಬೇಕು ಮತ್ತು ಹಿಂದಿನ ಸರ್ಕಾರ ನೀಡಿದ್ದ 2’ಡಿ’ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಫೆ. 14 ರಂದು ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಪಂಚಮಸಾಲಿ ಸಮಾಜ ತಿಳಿಸಿದೆ.
ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ
ಹೆಚ್.ಎಸ್. ಶಿವಶಂಕರ್, ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ.ಜಿ ಅಜಯಕುಮಾರ್ ಇವರುಗಳು ಭಾಗವಹಿಸುವರು. ದಾವಣಗೆರೆ ಜಿಲ್ಲೆಯ ಮತ್ತು ರಾಜ್ಯದ ಸಮಸ್ತ ಪಂಚಮಸಾಲಿ ಸಮಾಜದ ಬಾಂಧವರು ಭಾಗವಹಿಸಲು ಜಿಲ್ಲಾ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಆರ್.ಪಿ. ಅಶೋಕ ಗೋಪನಾಳ ಕೋರಿದ್ದಾರೆ.
ಜ್ಞಾನ ಕಾರಂಜಿ ಕಾರ್ಯಕ್ರಮ: ನಿಟುವಳ್ಳಿಯ ಎಸ್ ಜೆಎಂ ಪಬ್ಲಿಕ್ ಶಾಲೆಯ 19 ನೇ ವಾರ್ಷಿಕೋತ್ಸವ ಅಂಗವಾಗಿ ಜ್ಞಾನ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿರಕ್ತಮಠದ ಬಸವಪ್ರಭುಶ್ರೀಗಳ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಿ. ಮಹೇಶ್ವರಪ್ಪ ವಹಿಸಿದ್ದರು. ಕಾರ್ಯಮವನ್ನು ಸಂಸ್ಥೆಯ ಅಧ್ಯಕ್ಷೆ ಪುಷ್ಪ ಮಹೇಶ್ಚರಪ್ಪ
ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾಂತೇಶ್ ವಿ. ಒಣರೊಟ್ಟಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು, ಸಿಆರ್ ಪಿ ಭರತ್, ಇ.ಎಂ. ಮಂಜುನಾಥ, ರಾಘು ದೊಡ್ಡಮನಿ ಉಪಸ್ಥಿತರಿದ್ದರು.