Home ಕ್ರೈಂ ನ್ಯೂಸ್ 31 ಕ್ರಿಮಿನಲ್ ಪ್ರಕರಣಗಳಿರುವ ಹಿನ್ನೆಲೆ ಮಾತು ನಿಲ್ಲಿಸಿದ ಯುವತಿ: ಮನೆಗೆ ಸೀಮೆಎಣ್ಣೆ ಬಾಂಬ್ ಎಸೆದ ಪ್ರೇಮಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

31 ಕ್ರಿಮಿನಲ್ ಪ್ರಕರಣಗಳಿರುವ ಹಿನ್ನೆಲೆ ಮಾತು ನಿಲ್ಲಿಸಿದ ಯುವತಿ: ಮನೆಗೆ ಸೀಮೆಎಣ್ಣೆ ಬಾಂಬ್ ಎಸೆದ ಪ್ರೇಮಿ!

Share
ಯುವತಿ
Share

ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನಲ್ಲಿ ಪ್ರೀತಿಯನ್ನು ನಿರಾಕರಿಸಿದ ಯುವತಿಯ ಮನೆಗೆ ಕಾರ್ತಿಕ್ ಎಂಬಾತ ಸೀಮೆಎಣ್ಣೆ ಬಾಂಬ್ ಎಸೆದಿರುವ ಘಟನೆ ನಡೆದಿದೆ.

ಆರೋಪಿ ಕಾರ್ತಿಕ್ ವಿರುದ್ಧ ಈಗಾಗಲೇ 31 ಕ್ರಿಮಿನಲ್ ಪ್ರಕರಣಗಳು ಬಾಕಿ ಇರುವುದನ್ನು ತಿಳಿದ ಯುವತಿ, ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿಯು ಯುವತಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಆಕೆಯ ಮನೆಗೆ ಸೀಮೆಎಣ್ಣೆ ತುಂಬಿದ ಉರಿಯುವ ಬಾಟಲಿಗಳನ್ನು ಎಸೆದಿದ್ದಾನೆ.

ಈ ದಾಳಿಯಿಂದಾಗಿ ಮನೆಯ ಮುಂಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಪೋರ್ಚ್‌ನಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್‌ಗೂ ಬೆಂಕಿ ಆವರಿಸಿದೆ.

ತಕ್ಷಣವೇ ಕುಟುಂಬಸ್ಥರು ಮತ್ತು ನೆರೆಹೊರೆಯವರು ಬಂದು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles