ದಾವಣಗೆರೆ: ದಾವಣಗೆರೆ ಎಂದರೆ ಕೇವಲ ಬೆಣ್ಣೆ ನಗರಿಯಷ್ಟೇ ಅಲ್ಲ, ಅದು ರಾಜಕೀಯದ ದೃಶ್ಯಾವಳಿಗಳೂ ಅಷ್ಟೇ ರೋಚಕವಾಗಿರುವ ರಣರಂಗ. ಇಂತಹ ಜಿಲ್ಲೆಯಲ್ಲಿ ಯಾವುದೇ ಗಾಡ್‌ಫಾದರ್ ಇಲ್ಲದೆ, ಕೇವಲ ಸಿದ್ಧಾಂತ ಮತ್ತು ಕಠಿಣ ಪರಿಶ್ರಮದ ಬಲದಿಂದಲೇ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರವರೆಗೆ ಗಮನ ಸೆಳೆದಿರುವ ಯುವ ಮುಖಂಡ ಎಂದರೆ ಅದು ಆವರಗೆರೆ ರುದ್ರೇಶ್. ಹಿಂದುತ್ವದ ಶಿಸ್ತಿನ ಸಿಪಾಯಿಯಾಗಿ, ಬಿಜೆಪಿಯ ಕಟ್ಟಾ ಕಾರ್ಯಕರ್ತನಾಗಿ ದಾವಣಗೆರೆ ಜಿಲ್ಲಾ ರಾಜಕಾರಣದಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ.
ಹಿಂದುತ್ವದ ಬದ್ಧತೆ, ಅವಿರತ ಶ್ರಮವೇ ಬಂಡವಾಳ
ರಾಜಕೀಯವನ್ನು ಕೇವಲ ಅಧಿಕಾರಕ್ಕಾಗಿ ಬಳಸಿಕೊಳ್ಳದೆ, ತಾನು ನಂಬಿದ ಹಿಂದುತ್ವದ ತತ್ವ ಹಾಗೂ ಸಂಘಟನಾತ್ಮಕ ಮೌಲ್ಯಗಳಿಗಾಗಿ ಆವರಗೆರೆ ರುದ್ರೇಶ್ ಅವರು ಸದಾ ಮುಂಚೂಣಿಯಲ್ಲಿ ನಿಂತಿದ್ದಾರೆ. ದಾವಣಗೆರೆಯ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹಿಂದುತ್ವದ ಸಿದ್ಧಾಂತಗಳನ್ನು ಬಲಪಡಿಸುವಲ್ಲಿ ಇವರ ಪಾತ್ರ ದೊಡ್ಡದಾಗಿದೆ. ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ನಡೆದುಕೊಂಡು, ಅವರ ಪ್ರತಿ ಹೋರಾಟಗಳಲ್ಲೂ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವ ಇವರು, ನಾಯಕರ ಪಾಲಿಗೆ ನಂಬಿಕಸ್ಥ ಬಂಟ ಹಾಗೂ ಕಾರ್ಯಕರ್ತರ ಪಾಲಿಗೆ ಧ್ವನಿಯಾಗಿದ್ದಾರೆ.
ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರ ಶಿಷ್ಯರಾಗಿರುವ ಆವರಗೆರೆ ರುದ್ರೇಶ್ ಅವರು ಬಿಜೆಪಿಯ,ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್ ಸೇರಿದಂತೆ ಎಲ್ಲಾ ನಾಯಕರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಪಕ್ಷ ವಹಿಸಿದ ಜವಾಬ್ದಾರಿಯನ್ನು ಚಾಚೂ ತಪ್ಪದೇ ನಿರ್ವಹಿಸುವ ಆವರಗೆರೆ ರುದ್ರೇಶ್ ಅವರು ಬಿಜೆಪಿ ಶಿಸ್ತಿನ ಸಿಪಾಯಿ.
ಸಾಮಾನ್ಯವಾಗಿ ರಾಜಕೀಯ ಅಂದ ತಕ್ಷಣ ಶ್ರೀಮಂತಿಕೆ, ಪ್ರಭಾವಿ ಹಿನ್ನೆಲೆ ನೆನಪಿಗೆ ಬರುತ್ತದೆ. ಆದರೆ, ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಕೇವಲ ಶ್ರಮ, ಸಿದ್ಧಾಂತ ಮತ್ತು ಜನಸೇವೆಯ ಮೂಲಕ ತಳಮಟ್ಟದಿಂದ ಬೆಳೆದು ನಿಲ್ಲಬಹುದು ಎಂಬುದಕ್ಕೆ ಸಾಕ್ಷಿ ಆವರೆಗೆರೆ ರುದ್ರೇಶ್.
ಶ್ರಮಿಕ ವರ್ಗದ ಕರುಳಿನ ಕುಡಿ
ದಿನಾಂಕ 12-07-1990 ರಂದು ಜನಿಸಿದ ರುದ್ರೇಶ್ ಅವರ ಹಿನ್ನೆಲೆ ತೀರಾ ಸಾಮಾನ್ಯವಾದದ್ದು. ತಂದೆ ಮಹೇಶ್ವರಪ್ಪ ಹಾಗೂ ತಾಯಿ ಕಲ್ಲಮ್ಮ ಇಬ್ಬರೂ ರೈಸ್ ಮಿಲ್ ಕಾರ್ಮಿಕರು. ಬೆವರಿನ ಬೆಲೆ ಬಲ್ಲ, ಕಷ್ಟದ ದಿನಗಳನ್ನು ಹತ್ತಿರದಿಂದ ಕಂಡ ಕುಟುಂಬದಲ್ಲಿ ಬೆಳೆದ ರುದ್ರೇಶ್ ಅವರಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವುಗಳಿಗೆ ಸ್ಪಂದಿಸುವ ಗುಣ ರಕ್ತಗತವಾಗಿಯೇ ಬಂದಿದೆ.
ಆರ್.ಎಸ್.ಎಸ್ ಗರಡಿಯಲ್ಲಿ ಪಳಗಿದ ನಾಯಕ
ರಾಷ್ಟ್ರೀಯ ವಿಚಾರಧಾರೆ ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಂಡಿರುವ ಇವರು, ಆರ್.ಎಸ್.ಎಸ್ (RSS) ಸ್ವಯಂಸೇವಕರಾಗಿ ಸಮಾಜ ಸೇವೆ ಆರಂಭಿಸಿದರು. ಸಂಘದ ಶಿಸ್ತು, ನಿಷ್ಠೆ ಮತ್ತು ನಿಸ್ವಾರ್ಥ ಸೇವಾ ಮನೋಭಾವವೇ ಇಂದು ಅವರನ್ನು ಒಬ್ಬ ಸಮರ್ಥ ನಾಯಕನನ್ನಾಗಿ ರೂಪಿಸಿದೆ.
ಬಿಜೆಪಿ ರೈತ ಮೋರ್ಚಾದಲ್ಲಿ ಮುಂಚೂಣಿ ಜವಾಬ್ದಾರಿ
ರೈತರ ಸಮಸ್ಯೆಗಳಿಗೆ ಸದಾ ಧ್ವನಿಯಾಗುವ ಇವರ ಸಂಘಟನಾ ಶಕ್ತಿಯನ್ನು ಗುರುತಿಸಿ, ಪಕ್ಷವು ಇವರಿಗೆ ರೈತ ಮೋರ್ಚಾ ಉತ್ತರ ಮಂಡಲದ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನೀಡಿದೆ. ಅನ್ನದಾತನ ಸಂಕಷ್ಟಗಳಿಗೆ ಸ್ಪಂದಿಸುತ್ತಾ, ಸರ್ಕಾರದ ಯೋಜನೆಗಳನ್ನು ತಳಮಟ್ಟದ ರೈತರಿಗೆ ತಲುಪಿಸುವಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ.
ನರೇಂದ್ರ ಮೋದಿ ಅವರ ಅಪ್ಪಟ ಭಕ್ತ
ದೇಶವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ‘ರಾಷ್ಟ್ರ ಪ್ರಥಮ’ ನೀತಿಯೇ ರುದ್ರೇಶ್ ಅವರಿಗೆ ಪರಮ ಪ್ರೇರಣೆ. ಮೋದಿ ಅವರ ಅಪ್ಪಟ ಭಕ್ತರಾಗಿ, ಅವರ ಜನಪರ ಯೋಜನೆಗಳನ್ನು ಮನೆಮನೆಗೆ ತಲುಪಿಸುವುದೇ ತಮ್ಮ ಬದುಕಿನ ಧ್ಯೇಯ ಎನ್ನುತ್ತಾರೆ ಈ ಯುವ ನಾಯಕ.
ಶ್ರಮಿಕ ಕುಟುಂಬದಿಂದ ಬಂದು, ಇಂದು ನೂರಾರು ಕಾರ್ಯಕರ್ತರಿಗೆ ಮಾದರಿಯಾಗಿರುವ ಆವರೆಗೆರೆ ರುದ್ರೇಶ್ ಅವರ ರಾಜಕೀಯ ಹಾಗೂ ಸಾಮಾಜಿಕ ಪಯಣ ಯುವ ಪೀಳಿಗೆಗೆ ನಿಜಕ್ಕೂ ಸ್ಫೂರ್ತಿದಾಯಕ.
ಮಹಾನಗರ ಪಾಲಿಕೆ ಚುನಾವಣೆ:
ವಾರ್ಡ್ ಮಟ್ಟದಿಂದಲೇ ಕಾರ್ಯಕರ್ತರನ್ನು ಒಗ್ಗೂಡಿಸಿ, ಮನೆ ಮನೆಗೆ ತೆರಳಿ ಬಿಜೆಪಿ ಪರ ಅಲೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು.
ವಿಧಾನಸಭಾ ಚುನಾವಣೆ:
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಕಾರ್ಯತಂತ್ರ ರೂಪಿಸುವುದರಿಂದ ಹಿಡಿದು ಪ್ರಚಾರದ ಮುಂಚೂಣಿಯಲ್ಲಿದ್ದರು.
ಲೋಕಸಭಾ ಚುನಾವಣೆ:
ಬಿಸಿಲನ್ನೂ ಲೆಕ್ಕಿಸದೆ ಹಗಲಿರುಳು ಕ್ಷೇತ್ರದಾದ್ಯಂತ ಸಂಚರಿಸಿ, ಪಕ್ಷದ ಗೆಲುವಿಗಾಗಿ ನಿರಂತರವಾಗಿ ಶ್ರಮಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ರುದ್ರೇಶ್ ಕಾರ್ಯವೈಖರಿಯೇ ಸ್ಪೆಷಲ್: ಆವರಗೆರೆ ಅಜ್ಜನಗೌಡ
ಚುನಾವಣೆ ಬಂತೆಂದರೆ ಸಾಕು, ಆವರಗೆರೆ ರುದ್ರೇಶ್ ಅವರಲ್ಲಿನ ಸಂಘಟನಾ ಚಾತುರ್ಯ ದುಪ್ಪಟ್ಟಾಗುತ್ತದೆ. ಜಿಲ್ಲೆಯಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡಬೇಕೆಂಬ ಏಕೈಕ ಧ್ಯೇಯದೊಂದಿಗೆ ಅವರು ವಿಶ್ರಾಂತಿ ಇಲ್ಲದೆ ದುಡಿದಿದ್ದಾರೆ. ಯುವಕರಲ್ಲಿ ಪಕ್ಷ, ಹಿಂದುತ್ವ, ಸಂಘಟನೆ ವಿಚಾರದಲ್ಲಿ ಚಿನಕುರುಳಿಯಂತೆ ಆವರಗೆರೆ ರುದ್ರೇಶ್ ಓಡಾಡುತ್ತಾರೆ. ಕೆಲಸ ಮಾಡುತ್ತಾರೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ದುಡಿಯುವ ಜೊತೆಗೆ ಪಕ್ಷ ನಿಷ್ಠೆ ನಮಗೂ ಅಚ್ಚರಿ ತರುವಂತೆ ನಡೆದುಕೊಳ್ಳುತ್ತಾರೆ. ಗಣೇಶೋತ್ಸವ ಸೇರಿದಂತೆ ಯಾವುದೇ ಹಬ್ಬ ಹರಿದಿನಗಳು ಬರಲಿ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಯುವಕರ ಸಂಘಟನೆ ಮಾಡುವ ಪರಿ ಗಮನ ಸೆಳೆಯುತ್ತದೆ ಎನ್ನುತ್ತಾರೆ ಬಿಜೆಪಿ ಮುಖಂಡ ಆವರಗೆರೆ ಅಜ್ಜನಗೌಡರು.
ಯುವ ನಾಯಕನಿಗೆ ಬೇಕಿದೆ ಹಿರಿಯರ ಆಶೀರ್ವಾದ
ಯಾವುದೇ ಸಂಘಟನೆಯಲ್ಲಿ ಯುವ ನಾಯಕರು ಬೆಳೆಯಬೇಕಾದರೆ ಹಿರಿಯರ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಅತ್ಯಂತ ಮುಖ್ಯ. ಪ್ರಸ್ತುತ ದಾವಣಗೆರೆ ಬಿಜೆಪಿಯಲ್ಲಿ ಯುವ ಪಡೆಯನ್ನು ಮುನ್ನಡೆಸುತ್ತಿರುವ ಆವರಗೆರೆ ರುದ್ರೇಶ್ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿಗಳು ಸಿಗಬೇಕಿದೆ ಎಂಬುದು ಕಾರ್ಯಕರ್ತರ ಒಮ್ಮತದ ಅಭಿಪ್ರಾಯ.
ಪಕ್ಷಕ್ಕಾಗಿ, ಹಿಂದುತ್ವಕ್ಕಾಗಿ ಸ್ವಾರ್ಥವಿಲ್ಲದೆ ದುಡಿದಿರುವ ಇಂತಹ ನಿಷ್ಠಾವಂತ ಯುವ ಮುಖಂಡನಿಗೆ ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಹಿರಿಯ ನಾಯಕರ ಆಶೀರ್ವಾದ ಮತ್ತು ಬೆಂಬಲ ದೊರೆತರೆ, ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ನಿರಂತರ ಪರಿಶ್ರಮ, ನಿಷ್ಠೆ ಹಾಗೂ ಜನಸಾಮಾನ್ಯರ ಜೊತೆಗಿನ ಒಡನಾಟವೇ ಆವರಗೆರೆ ರುದ್ರೇಶ್ ಅವರನ್ನು ಭವಿಷ್ಯದ ಆಶಾಕಿರಣವನ್ನಾಗಿ ಮಾಡಿದೆ.
ಜನುಮದಿನಕ್ಕೆ ಶುಭಾಶಯಗಳ ಮಹಾಪೂರ:
ಅಭ್ಯರ್ಥಿ ಯಾರೇ ಇರಲಿ, ಪಕ್ಷದ ಕಮಲದ ಗುರುತೇ ಮುಖ್ಯ ಎಂದು ಕೆಲಸ ಮಾಡುವ ಇವರ ಶೈಲಿ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. 35 ವರ್ಷ ಪೂರೈಸಿ 36ನೇ ವಯಸ್ಸಿಗೆ ಕಾಲಿಡುತ್ತಿರುವ ಆವರಗೆರೆ ರುದ್ರೇಶ್ ಅವರಿಗೆ ಆವರಗೆರೆ ಬಿಜೆಪಿ ನಾಯಕರು. ಹಿರಿಯರು, ಕಿರಿಯರು ಸೇರಿದಂತೆ ಸಾವಿರಾರು ಮಂದಿ ಜನುಮದಿನದ ಶುಭ ಕೋರಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಧಿಕಾರ ಅವರಿಗೆ ಲಭಿಸಲಿ ಎಂದು ಹಾರೈಸಿದ್ದಾರೆ.











Leave a comment