ದಾವಣಗೆರೆ: ಇಲ್ಲಿನ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜುಲೈ 27ರಂದು ಬೆಳಿಗ್ಗೆ 10:30ಕ್ಕೆ ಕಾಲೇಜಿನ ಪ್ಲೇಸ್‌ಮೆಂಟ್ ಸೆಮಿನಾರ್ ಹಾಲ್‌ನಲ್ಲಿ 90 ಗಂಟೆಗಳ ಚಿಪ್ ಕ್ರಾಫ್ಟ್: ಆರ್‌ಟಿಎಲ್, ಐಪಿ ಇಂಟಿಗ್ರೇಷನ್ ಅಂಡ್ ಎಸ್‌ಒಸಿ ಸೈನ್‌ಆಫ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇಲ್ಲಿನ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗ, ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ, ಚಿತ್ರದುರ್ಗ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಇ-ಚಿಪ್-ಹಬ್ ಸಹಯೋಗದಲ್ಲಿ ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಹಬ್ ಆಗಿ ರೂಪಿಸುವ ರಾಷ್ಟ್ರೀಯ ದೃಷ್ಟಿಕೋನಕ್ಕೆ ಬಲ ತುಂಬುವ ಉದ್ದೇಶದಿಂದ ಈ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಐಇಟಿ ಪ್ರಾಂಶುಪಾಲರಾದ ಡಾ. ಹೆಚ್. ಬಿ. ಅರವಿಂದ್ ವಹಿಸಲಿದ್ದು, ನಿರ್ದೇಶಕ ವೈ. ವೃಷಭೇಂದ್ರಪ್ಪ ವೈ ಗೌರವ ಅತಿಥಿಯಾಗಿ ಉಪಸ್ಥಿತರಿರುತ್ತಾರೆ. ಎನ್‌ಐಇಎಲ್‌ಐಟಿ ಚಿತ್ರದುರ್ಗದ ಅಕಾಡೆಮಿಕ್ ಹೆಡ್ ವಿಶ್ವನಾಥ್ ನಾಯಕ್ ಎಸ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದ ಸಂಯೋಜನೆಯನ್ನು ಇ&ಸಿಇ ವಿಭಾಗದ ಮುಖ್ಯಸ್ಥೆ ಜಿ.ಎಸ್. ಸುನೀತಾ ವಹಿಸಿಕೊಂಡಿದ್ದಾರೆ.
90 ಗಂಟೆಗಳ ತರಬೇತಿ ಕಾರ್ಯಕ್ರಮವು ಬಿಐಇಟಿ ಹಾಗೂ ಯು ಬಿ ಡಿ ಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ಸೇರಿದಂತೆ ಸಂಬಂಧಿತ ವಿಭಾಗಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. ಜುಲೈ 27ರಿಂದ ಆರಂಭವಾಗುವ ತರಬೇತಿ, ಚಿಪ್ ವಿನ್ಯಾಸ ಕ್ಷೇತ್ರದ ಆಧುನಿಕ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಉದ್ಯಮಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸಲಿದೆ.
ಆರ್‌ಟಿಎಲ್ ಡಿಸೈನ್, ಐಪಿ ಇಂಟಿಗ್ರೇಷನ್ ಹಾಗೂ ಎಸ್‌ಒಸಿ ಸೈನ್‌ಆಫ್ ವಿಷಯಗಳ ಕುರಿತು ಉದ್ಯಮದ ಪರಿಣಿತರಿಂದ ತರಬೇತಿ ನೀಡಲಾಗುತ್ತದೆ. ತರಬೇತಿಯ ಭಾಗವಾಗಿ ಇ-ಚಿಪ್-ಹಬ್ ವೇದಿಕೆಯಲ್ಲಿ ಲಭ್ಯವಿರುವ ದಾಖಲಿತ ಆನ್‌ಲೈನ್ ವಿಡಿಯೊ ಉಪನ್ಯಾಸಗಳನ್ನು ವಿದ್ಯಾರ್ಥಿಗಳು ತಮ್ಮ ಅನುಕೂಲಕರ ಸಮಯದಲ್ಲಿ ವೀಕ್ಷಿಸಿ ವಿಷಯವನ್ನು ಪುನರಾವರ್ತಿಸಬಹುದಾಗಿದೆ. ಇದರಿಂದ ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ, ಸೆಮಿಕಂಡಕ್ಟರ್ ಮತ್ತು ವಿಎಲ್‌ಎಸ್‌ಐ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ನೆರವಾಗಲಿದೆ.
ತರಬೇತಿ ಕಾರ್ಯಕ್ರಮದ ವಿಶೇಷತೆಯೆಂದರೆ, ಇ-ಚಿಪ್-ಹಬ್ ವೇದಿಕೆಯಲ್ಲಿ ಲಭ್ಯವಿರುವ ಎಲ್ಲಾ ತರಬೇತಿ ವಿಡಿಯೊಗಳನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ವೀಕ್ಷಿಸಬೇಕಿದ್ದು, ಪ್ರತಿ ಮಾಡ್ಯೂಲ್‌ನ ಅಂತ್ಯದಲ್ಲಿ ನಡೆಯುವ ಕ್ವಿಜ್‌ಗಳು ಹಾಗೂ ಅಂತಿಮ ಮೌಲ್ಯಮಾಪನದಲ್ಲಿ ಯಶಸ್ವಿಯಾಗಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮಾತ್ರ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
- BIET Davanagere
- Chip Craft Training
- DAVANAGERE NEWS
- e Chip Hub
- Engineering Job Opportunities Karnataka
- NIELIT Chitradurga
- RTL Design Training
- Semiconductor Training Karnataka
- UBDT Engineering College Davanagere
- VLSI Course Davanagere
- ಇ ಚಿಪ್ ಹಬ್
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ
- ಎನ್‌ಐಇಎಲ್‌ಐಟಿ ಚಿತ್ರದುರ್ಗ
- ಚಿಪ್ ಕ್ರಾಫ್ಟ್ ತರಬೇತಿ
- ದಾವಣಗೆರೆ ಇಂಜಿನಿಯರಿಂಗ್ ಕಾಲೇಜು
- ದಾವಣಗೆರೆ ಲೇಟೆಸ್ಟ್ ನ್ಯೂಸ್
- ದಾವಣಗೆರೆ ಸುದ್ದಿ
- ಬಿಐಇಟಿ ದಾವಣಗೆರೆ
- ಯುಬಿಡಿಟಿ ಕಾಲೇಜು ದಾವಣಗೆರೆ
- ವಿಎಲ್‌ಎಸ್‌ಐ ಕೋರ್ಸ್
- ಸೆಮಿಕಂಡಕ್ಟರ್ ಉದ್ಯೋಗಾವಕಾಶ





Leave a comment