Home ದಾವಣಗೆರೆ ಸಿಜೆಪಿ ಸಂಸ್ಥಾಪಕರಿಗೆ ಅಮೆರಿಕ, ಪಾಕಿಸ್ತಾನದಿಂದ ವಿದೇಶಿ ದೇಣಿಗೆ: ಜಿತೇಂದ್ರ ಸಿಂಗ್ ಗಂಭೀರ ಆರೋಪಕ್ಕೆ ಸಿಜೆಪಿ ಕೌಂಟರ್!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರುವಾಣಿಜ್ಯ

ಸಿಜೆಪಿ ಸಂಸ್ಥಾಪಕರಿಗೆ ಅಮೆರಿಕ, ಪಾಕಿಸ್ತಾನದಿಂದ ವಿದೇಶಿ ದೇಣಿಗೆ: ಜಿತೇಂದ್ರ ಸಿಂಗ್ ಗಂಭೀರ ಆರೋಪಕ್ಕೆ ಸಿಜೆಪಿ ಕೌಂಟರ್!

Share
ಸಿಜೆಪಿ
Share

ನವದೆಹಲಿ: ಕಾಕರೂಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಹಾಗೂ ಆಶುತೋಷ್ ರಾಂಕಾ ಅವರು ವಿದೇಶಿ ನೆರವು ಪಡೆದು ಭಾರತ ವಿರೋಧಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಅಮೆರಿಕದ ದೇಣಿಗೆದಾರರಿಂದ ಮತ್ತು ಆಶುತೋಷ್ ರಾಂಕಾ ಪಾಕಿಸ್ತಾನದ ರಾಜಕಾರಣಿಗಳಿಂದ ಹಣಕಾಸಿನ ನೆರವು ಪಡೆದಿದ್ದಾರೆ ಎಂದು ಕೇಂದ್ರ ಸಚಿವರು ಆರೋಪಿಸಿದ್ದು, ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಕೇಂದ್ರ ಸರ್ಕಾರದ ವಿರುದ್ಧ ತಪ್ಪು ಮಾಹಿತಿ ಹಾಗೂ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸಲು ವಿದೇಶಿ ಅನುದಾನಿತ ಎನ್‌ಜಿಒಗಳು, ‘ಡೀಪ್-ಸ್ಟೇಟ್’ ಏಜೆಂಟ್‌ಗಳು ಮತ್ತು ಭಾರತ ವಿರೋಧಿ ಶಕ್ತಿಗಳು ಒಂದಾಗಿ ಕೆಲಸ ಮಾಡುತ್ತಿವೆ ಎಂದು ಸಚಿವ ಜಿತೇಂದ್ರ ಸಿಂಗ್ ದೂರಿದ್ದಾರೆ. ಇಂತಹ ಅನಾರ್ಕಿಸ್ಟ್ ಶಕ್ತಿಗಳಿಗೆ ಅನಧಿಕೃತ ಮೂಲಗಳಿಂದ ಹಣಕಾಸು ಹರಿಯುತ್ತಿರುವುದಕ್ಕೆ ಸಾಕಷ್ಟು ಆಧಾರಗಳಿವೆ ಎಂದು ಹೇಳಿರುವ ಅವರು, ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಆರೋಪಗಳ ಬೆನ್ನಲ್ಲೇ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಚಿವರ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ನೀಡುವಂತೆ ಆಗ್ರಹಿಸುವುದರೊಂದಿಗೆ ರಾಜಕೀಯ ಕದನ ಮತ್ತಷ್ಟು ತೀವ್ರಗೊಂಡಿದೆ.

ವಿದೇಶಿ ನಿಧಿ ಆರೋಪ: ಸಿಜೆಪಿ ಸಂಸ್ಥಾಪಕರಾದ ಅಭಿಜಿತ್ ದಿಪ್ಕೆಗೆ ಅಮೆರಿಕ ಮೂಲದಿಂದ ಹಾಗೂ ಆಶುತೋಷ್ ರಾಂಕಾಗೆ ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಂದ ಹಣಕಾಸು ನೆರವು ಲಭಿಸಿದೆ ಎಂಬ ಆರೋಪ.

ಎಫ್‌ಸಿಆರ್‌ಎ ಸಮರ್ಥನೆ: ವಿದೇಶಿ ಅನುದಾನ ನಿಯಂತ್ರಣಕ್ಕೆ FCRA ಕಾಯ್ದೆ ಅಗತ್ಯ ಎಂದ ಸಚಿವ ಜಿತೇಂದ್ರ ಸಿಂಗ್; ರಾಜಕೀಯ ಮುಖಂಡರು ತಮ್ಮ ನಿಧಿ ಸಂಗ್ರಹಣೆ ಮೂಲ ಬಹಿರಂಗಪಡಿಸಲು ಸವಾಲು.

ಸಿಜೆಪಿ ತಿರುಗೇಟು: ಕೇಂದ್ರ ಸಚಿವರ ಹೇಳಿಕೆಯನ್ನು ಸೋಷಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ಖಂಡಿಸಿದ ಸಿಜೆಪಿ, ಉನ್ನತ ಹುದ್ದೆಯಲ್ಲಿರುವವರ ಮಾತುಗಳಿಗೆ ಮೌಲ್ಯವೇ ಇಲ್ಲದಂತಾಗಿದೆ ಎಂದು ವಾಗ್ದಾಳಿ.

ಈ ಗಂಭೀರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಕಾಕರೂಚ್ ಜನತಾ ಪಾರ್ಟಿ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದೆ. “ಕೇಂದ್ರ ಸಚಿವರು ಏನೆಂದರೂ ಹೇಳಿ ನುಣುಚಿಕೊಳ್ಳಬಹುದು ಎಂಬುದಕ್ಕೆ ಇದು ಶೋಚನೀಯ ಉದಾಹರಣೆಯಾಗಿದೆ. ಇದೇ ಕಾರಣಕ್ಕೆ ಇಂದು ಅತ್ಯುನ್ನತ ಹುದ್ದೆಗಳಲ್ಲಿರುವವರ ಮಾತುಗಳಿಗೆ ಯಾವುದೇ ಮೌಲ್ಯವಿಲ್ಲದಂತಾಗಿದೆ” ಎಂದು ಸಿಜೆಪಿ ತಿರುಗೇಟು ನೀಡಿದೆ.

Share

Leave a comment

Leave a Reply

Your email address will not be published. Required fields are marked *