Home ದಾವಣಗೆರೆ ಹಾಲು, ಮೊಸರಿನ ಬೆನ್ನಲ್ಲೇ ಕನ್ನಡಿಗರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ: ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ದರ ಶೇ.20ರಷ್ಟು ಹೆಚ್ಚಳ!
ದಾವಣಗೆರೆಬೆಂಗಳೂರುವಾಣಿಜ್ಯ

ಹಾಲು, ಮೊಸರಿನ ಬೆನ್ನಲ್ಲೇ ಕನ್ನಡಿಗರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ: ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ದರ ಶೇ.20ರಷ್ಟು ಹೆಚ್ಚಳ!

Share
ಹಾಲು
Share

ಬೆಂಗಳೂರು: ಇತ್ತೀಚೆಗಷ್ಟೇ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿದ್ದ ಕರ್ನಾಟಕ ಹಾಲು ಮಹಾಮಂಡಳ (KMF) ಹಾಗೂ ಬೆಂಗಳೂರು ಹಾಲೊಕ್ಕೂಟ, ಇದೀಗ ಸಾರ್ವಜನಿಕರಿಗೆ ಮತ್ತೊಂದು ಆಘಾತ ನೀಡಿದೆ. ನವೆಂಬರ್ 4ರಿಂದ ಜಾರಿಗೆ ಬರುವಂತೆ ನಂದಿನಿ ಬ್ರಾಂಡ್‌ನ ತುಪ್ಪ, ಬೆಣ್ಣೆ ಮತ್ತು ಪನೀರ್ ಬೆಲೆಗಳನ್ನು ಗಣನೀಯವಾಗಿ ಏರಿಕೆ ಮಾಡಲಾಗಿದೆ. ಹಬ್ಬದ ಋತುವಿನ ಬೇಡಿಕೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಿರುವುದನ್ನು ಈ ದರ ಪರಿಷ್ಕರಣೆಗೆ ಮುಖ್ಯ ಕಾರಣ ಎಂದು ತಿಳಿಸಲಾಗಿದೆ.

ಕಳೆದ ವಾರವಷ್ಟೇ ಹಾಲಿನ ದರ ಲೀಟರ್‌ಗೆ 8 ರೂ. ಹಾಗೂ ಮೊಸರಿನ ದರ ಲೀಟರ್‌ಗೆ 14 ರೂ. ಹೆಚ್ಚಿಸಲಾಗಿತ್ತು. ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊಸರಿನ ದರದಲ್ಲಿ 2 ರೂ. ಇಳಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಭರವಸೆ ನೀಡಿದ ಎರಡೇ ದಿನಗಳಲ್ಲಿ ತುಪ್ಪ ಹಾಗೂ ಬೆಣ್ಣೆಯ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಿರುವುದು ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.

ನಂದಿನಿ ತುಪ್ಪ: 1 ಲೀಟರ್ ಪೌಚ್ ತುಪ್ಪದ ಬೆಲೆ 715 ರೂ.ನಿಂದ ನೇರವಾಗಿ 850 ರೂ.ಗೆ ಏರಿಕೆಯಾಗಿದೆ (ಬೆಟ್ ಜಾರ್‌ನಲ್ಲಿ 1 ಲೀಟರ್ ತುಪ್ಪ 870 ರೂ.). 500 ಮಿ.ಲೀ. ಪೌಚ್ ತುಪ್ಪದ ದರ 425 ರೂ. ಆಗಿದೆ.

ಬೆಣ್ಣೆ: 500 ಗ್ರಾಂ ಅನ್‌ಸಾಲ್ಟೆಡ್ (ಉಪ್ಪಿಲ್ಲದ) ಬೆಣ್ಣೆಯ ದರ 285 ರೂ.ನಿಂದ 390 ರೂ.ಗೆ ಹೆಚ್ಚಾಗಿದೆ. 100 ಗ್ರಾಂ ಸಾಲ್ಟೆಡ್ ಬೆಣ್ಣೆಯ ಬೆಲೆ 90 ರೂ. ತಲುಪಿದೆ.

ಪನೀರ್ : 1 ಕೆಜಿ ಪನೀರ್ ದರ 408 ರೂ.ನಿಂದ 485 ರೂ.ಗೆ ಏರಿಕೆಯಾಗಿದ್ದು, 200 ಗ್ರಾಂ ಪನೀರ್ ಪ್ಯಾಕ್ ಬೆಲೆ 115 ರೂ. ಹಾಗೂ 500 ಗ್ರಾಂ ಪ್ಯಾಕ್ 260 ರೂ.ಗೆ ನಿಗದಿಪಡಿಸಲಾಗಿದೆ.

ತೃಪ್ತಿ ಹಾಲು: 135 ಮಿ.ಲೀ. ಪ್ಯಾಕ್ ಬೆಲೆ 11 ರೂ. ಹಾಗೂ 450 ಮಿ.ಲೀ. ಪ್ಯಾಕ್ 33 ರೂ.ಗೆ ಪರಿಷ್ಕರಣೆಯಾಗಿದೆ.

ಅಮೂಲ್ ಕಂಪನಿಯು ಇತ್ತೀಚೆಗಷ್ಟೇ ತುಪ್ಪ ಹಾಗೂ ಬೆಣ್ಣೆ ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಕೆಎಂಎಫ್ ಕೂಡ ಈ ನಿರ್ಧಾರ ತಳೆದಿದ್ದು, ರಾಜ್ಯಾದ್ಯಂತ ಸಾರ್ವಜನಿಕರು ಹಾಗೂ ಗೃಹಿಣಿಯರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
Share

Leave a comment

Leave a Reply

Your email address will not be published. Required fields are marked *

Related Articles