ಮಹಾರಾಷ್ಟ್ರ : ಇನ್ಮುಂದೆ ನೀವು ತಿನ್ನೋ ಬೆಳ್ಳುಳ್ಳಿ ಒರಿಜಿನಲ್ಲಾ ಅಂತ ಒಮ್ಮೆ ಚೆಕ್ ಮಾಡಿಕೊಳ್ಳಿ. ಏಕೆಂದ್ರೆ ಪ್ಲಾಸ್ಟಿಕ್ ರೈಸ್, ಪ್ಲಾಸ್ಟಿಕ್ ಮೊಟ್ಟೆ ಬಳಿಕ ಈಗ ನಕಲಿ ಬೆಳ್ಳುಳ್ಳಿ ಮಾರ್ಕೆಟ್ಗೆ ಲಗ್ಗೆ ಇಟ್ಟಿದೆ. ಸಿಮೆಂಟ್ನಿಂದ ಮಾಡಿದ ಬೆಳ್ಳುಳ್ಳಿ ಮಾರಾಟ ದಂಧೆ ಶುರುವಾಗಿದೆ. ಮಹಾರಾಷ್ಟ್ರದ ಅಕೋಲದಲ್ಲಿ ಸಿಮೆಂಟ್ ಬೆಳ್ಳುಳ್ಳಿ ಮಾರಾಟ ಜಾಲ ಪತ್ತೆಯಾಗಿದೆ. ಮಹಿಳೆಯೊಬ್ಬರು ಬೀದಿ ಬದಿ ವ್ಯಾಪಾರಿ ಬಳಿ 250 ಗ್ರಾಂ ಬೆಳ್ಳುಳ್ಳಿಯನ್ನ ಖರೀದಿಸಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಸುಭಾಷ್ ಪಾಟೀಲ್ ಪತ್ನಿ ಹೀಗೆ ಬೆಳ್ಳುಳ್ಳಿ ಖರೀದಿಸಿದ್ರು. ಬಳಿಕ ಮನೆಗೆ ತಂದು ಸಿಪ್ಪೆಯನ್ನು ತೆಗೆಯಲು ಪ್ರಯತ್ನಿಸಿದಾಗ ಬೆಳ್ಳುಳ್ಳಿ ಬೇರ್ಪಟ್ಟಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಬೆಳ್ಳುಳ್ಳಿಯನ್ನ ಸಿಮೆಂಟ್ನಿಂದ ತಯಾರಿಸಿದ್ದು ಎಂದು ಪತ್ತೆಯಾಗಿದೆ. ಇದಷ್ಟೇ ಅಲ್ಲದೆ ಬರೀ ಒಂದು ಬೆಳ್ಳುಳ್ಳಿ ಸುಮಾರು 100 ಗ್ರಾಂ ತೂಕ ಹೊಂದಿದೆ. ಇನ್ನೊಂದು ಮಾಹಿತಿ ಪ್ರಕಾರ, ಮಧ್ಯವರ್ತಿಗಳು ತೂಕ ಹೆಚ್ಚಿಸಲು ಈ ರೀತಿ ಸಿಮೆಂಟ್ ಬೆಳ್ಳುಳ್ಳಿಗಳನ್ನು ನಿಜವಾದ ಬೆಳ್ಳುಳ್ಳಿಗಳ ಜೊತೆ ಮಿಕ್ಸ್ ಮಾಡ್ತಿದ್ದಾರೆ ಎಂದು ತಿಳಿದು ಬಂದಿದೆ. ನಕಲಿ ಬೆಳ್ಳುಳ್ಳಿ ಪತ್ತೆಯಾಗಿದ್ದರಿಂದ ಆತಂಕಕ್ಕೆ ಕಾರಣವಾಗಿದ್ದು, ಮಾರುಕಟ್ಟೆಯಲ್ಲಿ ಏನೇ ಪದಾರ್ಥ ಖರೀದಿಸುವ ಮುನ್ನ ಮೈ ಎಲ್ಲಾ ಕಣ್ಣಾಗಿಟ್ಟುಕೊಳ್ಳದಿದ್ರೆ ಯಾಮಾರೋದು ಪಕ್ಕಾ. ಸದ್ಯ ಈ ವಿಡಿಯೋ ವೈರಲ್ ಆಗಿದೆ..