SUDDIKSHANA KANNADA NEWS/ DAVANAGERE/ DATE:21-10-2023
ಕಲಬುರಗಿ: ಕಲಬುರಗಿ (Kalaburagi)ಯ ಹೈಕೋರ್ಟ್ ಬಳಿಯ ಖಾಸಗಿ ಹೊಟೇಲ್ ನಲ್ಲಿ ಕಂಠಪೂರ್ತಿ ಮದ್ಯಪಾನ ಮಾಡಿದ್ದ ಬ್ರಿಟಿಷ್ ಪ್ರಜೆಯೊಬ್ಬರು ಕೊಠಡಿಯಲ್ಲಿ ಬಿದ್ದು ಸಾವು ಕಂಡ ಘಟನೆ ನಡೆದಿದೆ.
Read Also This Story:
ವಿಚ್ಚೇದನ ಕುರಿತ ರಾಜ್ ಕುಂದ್ರಾ ಪೋಸ್ಟ್ ಹುಟ್ಟುಹಾಕಿದ ಗೊಂದಲದ ಸ್ಫೋಟಕತೆ: 2 ಗಂಟೆಗಳ ಹಿಂದೆ ಶಿಲ್ಪಾ ಶೆಟ್ಟಿ (Shilpa Shetty) ಮಾಡಿರುವ ಟ್ವೀಟ್ ನಲ್ಲೇನಿದೆ…?
ಯುನೈಟೆಡ್ ಕಿಂಗ್ಡಮ್ ದೇಶದ ಲೀ ಜೀಮ್ಸ್ ಪ್ಯಾಲಿನ್ (53) ಮೃತ ವಿದೇಶಿ ಪ್ರಜೆ. ಕಂಪನಿಯಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲು ಆಗಮಿಸಿದ್ದ ಬ್ರಿಟಿಷ ಪ್ರಜೆಯೊಬ್ಬರು ಕಂಠಪೂರ್ತಿ ಕುಡಿದಿದ್ದರು. ಈ ವೇಳೆ ಕೊಠಡಿಗೆ ಬಂದಾಗ ಕುಡಿದ ನಶೆಯಲ್ಲಿ ಬಿದ್ದಿದ್ದಾರೆ. ಬಳಿಕ ಅಸ್ವಸ್ಥರಾಗಿದ್ದ ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ದುಬೈ ಮುಲದ ಹೈಟ್ ರೈಡರ್ಸ್ ಇಡರ್ಸ್ಟ್ರೀಯಲ್ ಸ್ಪೆಷಲಿಸ್ಟ್ ಕಂಪನಿಯಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಲೀ ಜೀಮ್ಸ್ ಪ್ಯಾಲಿನ್, ತಮ್ಮ ಕಂಪನಿಯಲ್ಲಿನ ಖಾಲಿ ಹುದ್ದೆಗೆ ಇಂಟರ್ವ್ಯೂ ಮಾಡಲು ಅ.16 ರಂದು ರಾತ್ರಿ ಹೈದ್ರಾಬಾದ್ ಮೂಲಕ ಕಲಬುರಗಿಗೆ ಆಗಮಿಸಿದ್ದರು. ಇವರೊಟ್ಟಿಗೆ ಹೈಟ್ ರೈಡರ್ಸ್ ಇಡರ್ಸ್ಟ್ರೀಯಲ್ ಸ್ಪೆಷಲಿಸ್ಟ್ ಕಂಪನಿಯ ಸೇಫ್ಟಿ ಮ್ಯಾನೇಜರ್ ಕೇರಳದ ಜೀಯಾದ್ ಮೈದನ್ ಹಾಗೂ ಮುಂಬೈನ ರದೀಶ ಕುಮಾರ ಆಗಮಿಸಿದ್ದರು.
ಮೂವರು ಹೊಟೇಲ್ ನಲ್ಲಿ ತಂಗಿದ್ದರು. ಮಾರನೆ ದಿನ ಕೆಲಸ ಮುಗಿಸಿ ರಾತ್ರಿ ಹತ್ತಿರದ ಬಾರ್ ವೊಂದರಲ್ಲಿ ಮೂವರು ಸೇರಿ ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದಾರೆ. ಮದ್ಯ ಸೇವನೆ ಬಳಿಕ ಇಬ್ಬರು ತಮ್ಮ ಕೊಣೆಗಳಿಗೆ ಹೋಗಿದ್ದಾರೆ. ಆದ್ರೆ ನಶೆಯಲ್ಲಿ ಲೀ ಜೀಮ್ಸ್ ಪ್ಯಾಲಿನ್ ಅಲ್ಲಿಯೇ ಕುಸಿದು ಬಿದ್ದು ಮುಖಕ್ಕೆ ರಕ್ತಗಾಯ ಮಾಡಿಕೊಂಡಿದ್ದಾರೆ. ಅಲ್ಲಿನ ಸಿಬ್ಬಂದಿ ವ್ಹೀಲ್ ಚೇರ್ ಸಹಾಯದಿಂದ ಹೊಟೇಲ್ ರೂಮ್ ಗೆ ತಂದು ಬಿಟ್ಟಿದ್ದಾರೆ.
ಆದ್ರೆ ಅ.19 ರಂದು ರೂಮ್ ಖಾಲಿ ಮಾಡುವ ಸಮಯಕ್ಕೆ ಸಹಪಾಠಿಗಳು ಕರೆಯಲು ಹೋದಾಗ ಲೀ ಜೀಮ್ಸ್ ಪ್ಯಾಲಿನ್ ಅಸ್ವಸ್ಥರಾಗಿದ್ದು ಗೊತ್ತಾಗಿದೆ. ತಕ್ಷಣ 108 ಅಂಬುಲೆನ್ಸ್ ಕರೆಸಿದಾಗ ವೈದ್ಯರು ಲೀ ಜೀಮ್ಸ್ ಪ್ಯಾಲಿನ್ ಮೃತಪಟ್ಟಿರುವುದನ್ನು
ಖಚಿತ ಪಡಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೃತ ದೇಹ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇಡಲಾಗಿದ್ದು ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗಿದೆ. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು:
ವಧು ವರ ಮಾಹಿತಿ ಕೇಂದ್ರ
ನಮ್ಮಲ್ಲಿ ಎಲ್ಲಾ ಜಾತಿಯವರು ಹಾಗೂ ಎಲ್ಲಾ ವರ್ಗವದರು ಇದ್ದಾರೆ. ಮೊದಲ ಹಾಗೂ ಎರಡನೇ ಮದುವೆಗೆ ಹಾಗೂ ನಮ್ಮಲ್ಲಿ 2 ಲಕ್ಷ ಪ್ರೊಫೈಲ್ ಇದೆ. ನಿಮ್ಮಲ್ಲಿ ಎಂಥ ಸಮಸ್ಯೆ ಇದ್ದರೂ ಕೇವಲ ಮೂರು ತಿಂಗಳಲ್ಲಿ ಮದುವೆ ಹೊಂದಿಸಿ ಕೊಡುತ್ತೇವೆ ಹಾಗೂ ಅಂತರಜಾತಿ ಮದುವೆ ಹೆಚ್ಚಾಗಿ ಮಾಡಿಸುತ್ತೇವೆ. ಒಮ್ಮೆ ಭೇಟಿ ಕೊಡಿ ಅಥವಾ ಕರೆ ಮಾಡಿ ಮೊಬೈಲ್ ನಂಬರ್: 99455 00051, ವಾಟ್ಸಪ್ ನಂಬರ್ 98443 50220.