ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Kalaburagi: ಡ್ರಾಮಾ ಮಾಡೋದು ಬಿಡಿ, ರಾಜಕಾರಣ ಮಾಡಬೇಡಿ: ಸಂಸದ ಉಮೇಶ್ ಜಾಧವ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗುಡುಗು

On: October 21, 2023 2:11 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:21-10-2023

ಕಲಬುರಗಿ: ಕಲಬುರಗಿ (Kalaburagi) ಸಂಸದ ಉಮೇಶ್ ಜಾಧವ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಡ್ರಾಮಾ ಮಾಡೋದು ಬಿಡಿ, ರಾಜಕಾರಣ ಮಾಡಬೇಡಿ ಎಂದು ಹೇಳಿದರು.

Read Also This Story:

ವಿಚ್ಚೇದನ ಕುರಿತ ರಾಜ್ ಕುಂದ್ರಾ ಪೋಸ್ಟ್ ಹುಟ್ಟುಹಾಕಿದ ಗೊಂದಲದ ಸ್ಫೋಟಕತೆ: 2 ಗಂಟೆಗಳ ಹಿಂದೆ ಶಿಲ್ಪಾ ಶೆಟ್ಟಿ (Shilpa Shetty) ಮಾಡಿರುವ ಟ್ವೀಟ್ ನಲ್ಲೇನಿದೆ…?

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಲಬುರಗಿ ಅಭಿವೃದ್ಧಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ. ನಿಮ್ಮ ಪ್ರಧಾನ ಮಂತ್ರಿಯವರು ಕೊಟ್ಟ ವರದಿಯಲ್ಲಿಯೇ ಇದು ಗೊತ್ತಾಗಿದೆ ಎಂದು ಟಾಂಗ್ ನೀಡಿದರು.

ಸಂಸದ ಉಮೇಶ್ ಜಾಧವ್ ಪ್ರತಿನಿಧಿಸುವ ಕಲಬರುಗಿ ಜಿಲ್ಲೆ ಅಭಿವೃದ್ಧಿಯಲ್ಲಿ ಕೊನೆ ಸ್ಥಾನದಲ್ಲಿದೆ. ಇದು ನಿಮ್ಮ ಮೋದಿ ಸರ್ಕಾರ ಕೊಟ್ಟಿರೋ ವರದಿ. ಆಶ್ರಯ ಕಾಲೋನಿಯಲ್ಲಿ ಅಕ್ರಮ ಮನೆಗಳ ತೆರವಿನ ಬಳಿಕ ಧರಣಿ ಮಾಡಿದ್ದ ಸಂಸದ ಜಾಧವ್ ನಾಟಕ ಆಡುವುದರಲ್ಲಿ ನಿಸ್ಸೀಮರು. ಇವರಿಗೆ ಜನರ ಸಮಸ್ಯೆ ಬಗೆಹರಿಸೋದು ಬೇಕಿಲ್ಲ, ಸಮಸ್ಯೆ ಉಲ್ಬಣ ಆಗಬೇಕು. ನೀವು ಇದರಲ್ಲಿ ರಾಜಕೀಯ ಮಾಡೋದು ಬಿಡಿ ಎಂದು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ ಕೆಡಿಪಿ ಸಭೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದ ಜಾಧವ್ ಅವರು ನಮ್ಮ ಸರ್ಕಾರ ಬಂದ ಮೇಲೆ ಆಕ್ಟೀವ್ ಆಗಿದ್ದಾರೆ. ನಾನು ಕೆಡಿಪಿ ಸಭೆ ಮಾಡಿಲ್ಲ, ಏನ್ ಮಾಡ್ತಿರಾ ? ಕೋರ್ಟ್ ಗೆ ಹೋಗ್ತೀರಾ,ಹೋಗಿ. ನಾನು ಸಚಿವನಾದ ಮೇಲೆ ಕಲಬುರಗಿಯಲ್ಲಿ ಈವರೆಗೆ 43 ಸಭೆಗಳನ್ನು ಮಾಡಿದ್ದೇನೆ. ನಿಮ್ಮ ಸರ್ಕಾರ ಇದ್ದಾಗ ಕಲಬುರಗಿಯಲ್ಲಿ ನೀವು ಮಾಡಿದ್ದು ಕೇವಲ 46 ಮೀಟಿಂಗ್. ಎಲ್ಲಿಹೋಯ್ತು ನಿಮ್ಮ 20-50 ವಿಜನ್ ಎಂದು ಪ್ರಶ್ನಿಸಿದರು.

ಅಮೆರಿಕಾಕ್ಕೆ ಹೋಗಿದ್ದೇನೆ, ನಾನೇನು ನಾಪತ್ತೆ ಆಗಿದ್ದೆನಾ ? ಅಮೇರಿಕಾಕ್ಕೂ ಹೊಗ್ತೇನೆ, ಸರ್ಕಾರದ ಪರವಾಗಿ ಬೇರೆ ದೇಶಕ್ಕೂ ಹೋಗ್ತೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಇದ್ದಾಗ ಕಲಬುರಗಿ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಕೊಡಲಿಲ್ಲ. ನಿಮ್ಮ ಸರ್ಕಾರದಲ್ಲಿ ಕಲಬುರಗಿಗೆ ದನಕಾಯೋ ಮಂತ್ರಿ ಫಿಕ್ಸ್ ಆಗಿದ್ದು ಗೊತ್ತಿರಲಿಲ್ಲವೇ ಎಂದು ಹೇಳುವ ಮೂಲಕ ಪಶುಸಂಗೋಪನಾ ಇಲಾಖೆಯ ಬಗ್ಗೆ ಕೇವಲವಾಗಿ ಮಾತನಾಡಿದರು.

ಬಿಜೆಪಿ ಅವರೇ ನೀವು ಯಾಕೆ ಇಷ್ಟೊಂದು ಹತಾಶರಾಗಿದ್ದೀರಾ ?, ನಿಮ್ಮ 25 ಸಂಸದರ ಯೋಗ್ಯತೆಗೆ ರಾಜ್ಯದ ಹಿತ ಕಾಪಾಡಲು ಆಗುತ್ತಿಲ್ಲ. ಉದ್ಯೋಗ ಖಾತ್ರಿಯಲ್ಲಿ ನೀವು ಮೊದಲೇ ಅನುದಾನ ಕಟ್ ಮಾಡಿದ್ದೀರಿ‌. 540 ಕೋಟಿ ರೂಪಾಯಿ
ನೀಡಬೇಕಿದೆ. ಜನರ ಉಳಿದಿರೋ ಉದ್ಯೋಗ ಖಾತ್ರಿ ದುಡ್ಡು ಕೊಡಬೇಕು. ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಎಂದು ತಿರುಗೇಟು ನೀಡಿದರು.


ಜಾಹೀರಾತು: 

ವಧು ವರ ಮಾಹಿತಿ ಕೇಂದ್ರ

ನಮ್ಮಲ್ಲಿ ಎಲ್ಲಾ ಜಾತಿಯವರು ಹಾಗೂ ಎಲ್ಲಾ ವರ್ಗವದರು ಇದ್ದಾರೆ. ಮೊದಲ ಹಾಗೂ ಎರಡನೇ ಮದುವೆಗೆ ಹಾಗೂ ನಮ್ಮಲ್ಲಿ 2 ಲಕ್ಷ ಪ್ರೊಫೈಲ್ ಇದೆ. ನಿಮ್ಮಲ್ಲಿ ಎಂಥ ಸಮಸ್ಯೆ ಇದ್ದರೂ ಕೇವಲ ಮೂರು ತಿಂಗಳಲ್ಲಿ ಮದುವೆ ಹೊಂದಿಸಿ ಕೊಡುತ್ತೇವೆ ಹಾಗೂ ಅಂತರಜಾತಿ ಮದುವೆ ಹೆಚ್ಚಾಗಿ ಮಾಡಿಸುತ್ತೇವೆ. ಒಮ್ಮೆ ಭೇಟಿ ಕೊಡಿ ಅಥವಾ ಕರೆ ಮಾಡಿ ಮೊಬೈಲ್ ನಂಬರ್: 99455 00051, ವಾಟ್ಸಪ್ ನಂಬರ್ 98443 50220.


 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment