SUDDIKSHANA KANNADA NEWS/ DAVANAGERE/ DATE:14-03-2024
ಬೆಂಗಳೂರು: ಶಿವಮೊಗ್ಗ, ದಾವಣಗೆರೆ, ಹಾವೇರಿ ಸೇರಿದಂತೆ ಕೆಲ ಲೋಕಸಭಾ ಕ್ಷೇತ್ರಗಳಲ್ಲಿ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ಶಿವಮೊಗ್ಗ, ದಾವಣಗೆರೆಯಲ್ಲಂತೂ ಭಿನ್ನಮತೀಯರ ಸಿಟ್ಟು ಹೊರ ಬರುತ್ತಿದೆ.
ಮೈಸೂರಿನಿಂದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಹಾವೇರಿಯಿಂದ ಬಸವರಾಜ ಬೊಮ್ಮಾಯಿ, ತುಮಕೂರಿನಿಂದ ವಿ. ಸೋಮಣ್ಣ, ದಾವಣಗೆರೆಯಿಂದ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿರುವುದು ವಿಶೇಷ. ಆದ್ರೆ, ಆದರೆ ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಆಗಿದೆ. ಅಚ್ಚರಿ ಎಂಬಂತೆ ಉಡುಪಿ – ಚಿಕ್ಕಮಗಳೂರು ಕ್ಷೇತ್ರಕ್ಕೆ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡಕ್ಕೆ ನಳಿನ್ ಕುಮಾರ್ ಕಟೀಲ್ ಗೆ ಬಿಟ್ಟು ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಘೋಷಿಸಿರುವುದು ಅಚ್ಚರಿ. ಸುಮಾರು ಏಳು ಸಂಸದರಿಗೆ ಟಿಕೆಟ್ ಕೈ ತಪ್ಪಿದೆ.
ಉತ್ತರ ಕನ್ನಡ ಸೇರಿದಂತೆ ಎಂಟು ಕ್ಷೇತ್ರಗಳ ಬಾಕಿ ಉಳಿಸಿಕೊಂಡಿದ್ದು, ಈ ಪೈಕಿ ಮೂರು ಜೆಡಿಎಸ್ ಗೆ ಸಿಗಲಿವೆ. ಮಂಡ್ಯ, ಹಾಸನ, ಕೋಲಾರ ಜೆಡಿಎಸ್ ಗೆ ಬಿಟ್ಟುಕೊಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಕೆ. ಎಸ್. ಈಶ್ವರಪ್ಪ ನಿಗಿ ನಿಗಿ ಕೆಂಡವಾಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪರು ತನ್ನ ಪುತ್ರ ಕೆ. ಇ. ಕಾಂತೇಶ್ ಗೆ ಹಾವೇರಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಮೋಸ ಮಾಡಿದ್ದಾರೆ. ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಡಿ. ವಿ. ಸದಾನಂದಗೌಡ ಸೇರಿದಂತೆ ಹಲವರಿಗೆ ಮೋಸ ಮಾಡಲಾಗಿದೆ. ನಾನು 40 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.
ಯಾರ್ಯಾರಿಗೆ ಎಲ್ಲೆಲ್ಲಿ ಟಿಕೆಟ್..?
- ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ
- ಬಾಗಲಕೋಟೆ: ಗದ್ದಿಗೌಡರ್
- ಬಿಜಾಪುರ – ರಮೇಶ್ ಜಿಗಜಿಣಗಿ
- ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
- ಉಡುಪಿ- ಚಿಕ್ಕಮಗಳೂರು- ಕೋಟಾ ಶ್ರೀನಿವಾಸ ಪೂಜಾರಿ
- ದಕ್ಷಿಣ ಕನ್ನಡ – ಕ್ಯಾ. ಬ್ರಿಜೇಶ್ ಚೌಟ
- ಗುಲ್ಬರ್ಗ -ಡಾ.ಉಮೇಶ್ ಜಿ ಜಾಧವ್
- ಬೀದರ್-ಭಗವಂತ ಖೂಬಾ
- ಕೊಪ್ಪಳ-ಡಾ.ಬಸವರಾಜ ಕ್ಯಾವಟೂರು
- ಬಳ್ಳಾರಿ-ಬಿ.ಶ್ರೀರಾಮುಲು
- ಧಾರವಾಡ-ಪ್ರಹ್ಲಾದ ಜೋಶಿ
- ದಾವಣಗೆರೆ-ಗಾಯತ್ರಿ ಸಿದ್ದೇಶ್ವರ
- ಶಿವಮೊಗ್ಗ-ಬಿ.ವೈ.ರಾಘವೇಂದ್ರ
- ಉಡುಪಿ ಚಿಕ್ಕಮಂಗಳೂರು- ಕೋಟ ಶ್ರೀನಿವಾಸ ಪೂಜಾರಿ
- ದಕ್ಷಿಣ ಕನ್ನಡ- ಕ್ಯಾ.ಬ್ರಿಜೇಶ್ ಚೌಟ
- ತುಮಕೂರು-ವಿ.ಸೋಮಣ್ಣ
- ಚಾಮರಾಜನಗರ-ಎಸ್.ಬಾಲರಾಜ್
- ಬೆಂಗಳೂರು ರೂರಲ್-ಡಾ.ಸಿ.ಎನ್ ಮಂಜುನಾಥ್
- ಬೆಂಗಳೂರು ಉತ್ತರ-ಶೋಭಾ ಕರಂದ್ಲಾಜೆ
- ಬೆಂಗಳೂರು ಸೆಂಟ್ರಲ್-ಪಿ.ಸಿ.ಮೋಹನ್
- ಬೆಂಗಳೂರು ಸೌತ್-ತೇಜಸ್ವಿ ಸೂರ್ಯ”
- ಬೇರೆ ಎಲ್ಲೆಲ್ಲಿ…?
- ದಾದರ್ ಮತ್ತು ನಗರ ಹವೇಲಿ : ಶ್ರೀಮತಿ ಕಲಾಬೆನ್ ದೇಲ್ಕರ್
- ದೆಹಲಿ ಪೂರ್ವ : ಹರ್ಷ್ ಮಲ್ಹೋತ್ರಾ
- ದೆಹಲಿ ವಾಯುವ್ಯ : ಯೋಗೇಂದ್ರ ಚಂದೋಲಿಯಾ
- ಸಬರಕಾಂತ: ಭಿಖಾಜಿ ದುಧಾಜಿ ಠಾಕೋರ್
- ಅಹಮದಾಬಾದ್ ಪೂರ್ವ : ಹಸ್ಮುಖಭಾಯ್ ಸೋಮಾಭಾಯಿ ಪಟೇಲ್
- ಭಾವನಗರ : ನಿಮುಬೆನ್ ಬಂಭನಿಯಾ
- ವಡೋದರಾ : ರಂಜನ್ಬೆನ್ ಧನಂಜಯ್ ಭಟ್
- ಛೋಟಾ ಉದಯಪುರ : ಜಶುಭಾಯಿ ಭಿಲುಭಾಯಿ ರಥ್ವಾ
- ಸೂರತ್ : ಮುಖೇಶಭಾಯಿ ಚಂದ್ರಕಾಂತ ದಲಾಲ್
- ವಲ್ಸಾದ್ : ಧವಲ್ ಪಟೇಲ್
- ಅಂಬಾಲಾ : ಬಾಂಟೊ ಕಟಾರಿಯಾ
- ಸಿರ್ಸಾ : ಅಶೋಕ್ ತನ್ವಾರ್
- ಕರ್ನಾಲ್: ಮನೋಹರ್ ಲಾಲ್ ಖಟ್ಟರ್
- ಗುರ್ಗಾಂವ್ : ರಾವ್ ಇಂದರ್ಜಿತ್ ಸಿಂಗ್ ಯಾದವ್
- ಫರಿದಾಬಾದ್ : ಕ್ರಿಶನ್ ಪಾಲ್ ಗುರ್ಜರ್
- ಭಿವಾನಿ-ಮಹೇಂದ್ರಗಢ: ಚೌಧರಿ ಧರಂಬೀರ್ ಸಿಂಗ್
- ಹಮೀರ್ಪುರ್: ಅನುರಾಗ್ ಸಿಂಗ್ ಠಾಕೂರ್
- ಶಿಮ್ಲಾ : ಸುರೇಶ್ ಕುಮಾರ್ ಕಶ್ಯಪ್
- ಬಾಲಘಾಟ್: ಭಾರತಿ ಪಾರ್ಧಿ
- ಛಿಂದ್ವಾರಾ: ವಿವೇಕ್ ‘ಬಂಟಿ’ ಸಾಹು
- ಉಜ್ಜಯಿನಿ : ಅನಿಲ್ ಫಿರೋಜಿಯಾ
- ಧಾರ್ : ಸಾವಿತ್ರಿ ಠಾಕೂರ್
- ಇಂದೋರ್ : ಶಂಕರ್ ಲಾಲ್ವಾನಿ
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ ಸಿಂಹ ನಾನು ಮೋದಿ ಭಕ್ತ. ನನಗೆ 10 ವರ್ಷಗಳ ಕಾಲ ಸಂಸದನಾಗಿ ಕೆಲಸ ನಿರ್ವಹಿಸಲು ಅವಕಾಶ ಕೊಟ್ಟಿದ್ದಾರೆ ಎಂದರೆ, ಕೆ. ಎಸ್. ಈಶ್ವರಪ್ಪ ಅವರು ನಾನು ಪಕ್ಷದಲ್ಲಿ ಅನ್ಯಾಯಕ್ಕೊಳಗಾಗುತ್ತಿರುವವರ ಪರವಾಗಿದ್ದೇನೆ ಎನ್ನುತ್ತಿದ್ದಾರೆ. ಕುಟುಂಬದ ಕೈಯಿಂದ ಪಕ್ಷ ರಕ್ಷಿಸಬೇಕೆಂಬ ಒತ್ತಡ ಇದೆ. ಈ ನಿಟ್ಟಿನಲ್ಲಿ ಹೋರಾಟ ಮಾಡುತ್ತೇನೆ ಎಂದು ಗುಡುಗಿದ್ದಾರೆ. ಈ ಬೆಳವಣಿಗೆ ನಡುವೆ ಬಿಜೆಪಿ ಕೇಂದ್ರ ವರಿಷ್ಠರು ಯಾರೂ ಪಕ್ಷದ ವಿರುದ್ಧ, ಅಭ್ಯರ್ಥಿ ವಿರುದ್ಧ ಮಾತನಾಡಬಾರದು ಎಂದು ಕಟ್ಟಪ್ಪಣೆ ವಿಧಿಸಿದೆ.