SUDDIKSHANA KANNADA NEWS/ DAVANAGERE/ DATE:30-09-2024
ದಾವಣಗೆರೆ: ದಾವಣಗೆರೆ ನಗರದ ಹಳೆಯ ಭಾಗದ ಬೇತೂರು ರಸ್ತೆಯಲ್ಲಿ ಗಣೇಶನ ವಿಸರ್ಜನೆ ಸಂದರ್ಭದಲ್ಲಿ ಮುಸ್ಲಿಂ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡ ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು ಹಾಗೂ ಬಾಟಲ್ ಗಳನ್ನು ಎಸೆದು ಹಿಂದೂ ಯುವಕರು ಹಲ್ಲೆಗೊಳಗಾಗಿ ಹಾಗೂ ಹಿಂದೂ ಯುವಕರನ್ನು ಬಂಧನಕ್ಕೊಳಗಾದ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಟೀಂ ಧೈರ್ಯ ತುಂಬಿತು.
ಹಿಂದೂಗಳ ಮೇಲೆ ಹಲ್ಲೆ ನಡೆಸಿದ ಪುಂಡರ ವಿರುದ್ಧ ಹೋರಾಟ ಮಾಡುತ್ತೇವೆ. ಕೇಸ್ ವಾಪಸ್ ಪಡೆಯುವಂತೆ ಒತ್ತಾಯ ಮಾಡಿದ್ದೇವೆ. ಕುಟುಂಬಸ್ಥರಿಗೆ ತೊಂದರೆ ನೀಡುತ್ತಿದ್ದರೆ ಹೇಳಿ. ನಿಮ್ಮ ಪರವಾಗಿ ನಾವಿರುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ವಾಳ್ ಹೇಳಿದರು.
ಜೈಲಿಗೆ ಹಾಕಿದ್ದಾರೆ ಎಂಬ ಕಾರಣಕ್ಕೆ ಹೆದರಬೇಡಿ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಈ ರೀತಿ ಮಾಡುವುದು ಸಾಮಾನ್ಯ. ಜಾಮೀನು ಸಿಗುತ್ತದೆ. ಸತೀಶ್ ಪೂಜಾರಿ ಹೊರಗಡೆ ಬರುತ್ತಾರೆ. ಪೊಲೀಸರು ಯಾರದ್ದೋ ಅಣತಿ ಮೇರೆಗೆ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಏನೇ ಸಮಸ್ಯೆ ಇದ್ದರೂ ತಿಳಿಸಿ. ನಾವು ನಿಮ್ಮ ಜೊತೆಗಿರುತ್ತೇವೆ ಎಂದು ಅಭಯ ನೀಡಿದರು.
ಈ ವೇಳೆ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಮೈಸೂರಿನ ಮಾಜಿ ಸಂಸದರಾದ ಪ್ರತಾಪ್ ಸಿಂಹ, ಹರಿಹರ ಶಾಸಕ ಬಿ.ಪಿ.ಹರೀಶ್, ,ದಾವಣಗೆರೆ ಲೋಕಸಭಾ ಕ್ಷೇತ್ರದ ನಾಯಕಿ ಗಾಯಿತ್ರಿ ಸಿದ್ದೇಶ್ವರ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾಧವ್, ವೀರೇಶ್ ಹನಗವಾಡಿ, ಪಾಲಿಕೆ ಸದಸ್ಯ ಎಸ್. ಟಿ, ವೀರೇಶ್, ಶ್ರೀನಿವಾಸ್ ದಾಸಕರಿಯಪ್ಪ, ಮಹಾನಗರ ಪಾಲಿಕೆ ಸದಸ್ಯರು, ವಿವಿಧ ಮೊರ್ಚಾ ಸದಸ್ಯರು, ಪಕ್ಷದ ಕಾರ್ಯಕರ್ತರು, ಸ್ಥಳೀಯ ಮುಖಂಡರು
ಉಪಸ್ಥಿತರಿದ್ದರು.