ದಾವಣಗೆರೆ: ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಪ್ರತಿದಿನ 1500 ಕ್ಯೂಸೆಕ್‍ನಂತೆ ಭದ್ರಾ ಡ್ಯಾಂನಿಂದ ಭದ್ರಾ ಬಲದಂಡೆ ನಾಲೆಗೆ ಸೆ.1 ರಿಂದ 10ರವರೆಗೆ ನೀರನ್ನು ಹರಿಸಲಾಗುವುದು.
ಭದ್ರಾ ಬಲದಂಡೆ ನಾಲೆಯಿಂದ ನೀರು ಬಿಡುಗಡೆ: ಪ್ರಮುಖ ಅಂಶಗಳು
ಉದ್ದೇಶ: ದಾವಣಗೆರೆ ಮತ್ತು ಚನ್ನಗಿರಿ ತಾಲೂಕುಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ.
ನೀರು ಬಿಡುಗಡೆ ಅವಧಿ: ಸೆಪ್ಟೆಂಬರ್ 1 ರಿಂದ 10 ರವರೆಗೆ.
ನೀರಿನ ಪ್ರಮಾಣ: ಪ್ರತಿದಿನ 1,500 ಕ್ಯೂಸೆಕ್.
ಕಟ್ಟುನಿಟ್ಟಿನ ನಿಯಮಗಳು (ಅಧೀಕ್ಷಕ ಅಭಿಯಂತರರ ಸೂಚನೆ):
ಬಿಡುಗಡೆಯಾಗುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಬೇಕು, ಕೃಷಿ ಬೆಳೆಗಳಿಗೆ ಬಳಸುವಂತಿಲ್ಲ.
ಕಾಲುವೆಗಳಲ್ಲಿ ಸಾರ್ವಜನಿಕರು ತಿರುಗಾಡುವುದು ಅಥವಾ ದನಕರುಗಳನ್ನು ಇಳಿಸುವುದನ್ನು ನಿರ್ಬಂಧಿಸಲಾಗಿದೆ.
ರೈತರು ಪಂಪ್‌ಸೆಟ್ ಅಥವಾ ಇತರೇ ವಿಧಾನಗಳ ಮೂಲಕ ಅಕ್ರಮವಾಗಿ ನೀರೆತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಾಲೆಯಲ್ಲಿ ಹರಿಸಲಾಗುತ್ತಿರುವ ನೀರು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಬಳಸಬೇಕಾಗಿದ್ದು, ಅಚ್ಚುಕಟ್ಟು ಬೆಳೆಗಳಿಗೆ ಉಪಯೋಗಿಸಬಾರದು. ಕಾಲುವೆಯಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ಕಾಲುವೆಗಳಿಗೆ ಇಳಿಸುವುದಾಗಲಿ ಇತ್ಯಾದಿ ಚಟುವಟಿಕೆ ನಡೆಸಬಾರದು ರೈತಬಾಂದವರು ಕಾಲುವೆಯಿಂದ ಅಕ್ರಮವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ ಎಂದು ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.





Leave a comment