ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಕಾಲುವೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವಿಕೆ, ಗುಟ್ಕಾ ನಿಷೇಧ ವಿರೋಧಿಸಿ ದಾವಣಗೆರೆ ಬಂದ್ ಗೆ ಕರೆ ನೀಡಲಾಗಿದೆ.
ಸೋಮವಾರ ಮುಂದೂಡಿದ್ದಕ್ಕೆ ಕಾರಣ ಪೊಲೀಸರು ಮನವಿ ಮಾಡಿದ್ದರು. ಶಾಲಾ ಕಾಲೇಜು, ಬಸ್ ಮಾಲೀಕರಿಗೆ ಮನವಿ ಮಾಡಲು ಸಮಯ ಬೇಕು. ಸೋಮವಾರ ಸಂಜೆ ನಾಲ್ಕು ಗಂಟೆಗೆ ಬೈಕ್ ರ್ಯಾಲಿ ನಡೆಸಲಾಗುವುದು. ಎಲ್ಲರೂ ದಾವಣಗೆರೆ ಬಂದ್ ಸಹಕರಿಸುವಂತೆ ಮನವಿ ಮಾಡಲಾಗುವುದು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ವಿವರಗಳು
ಬಂದ್‌ಗೆ ಕರೆ: ಚಿತ್ರದುರ್ಗ ಕಾಲುವೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಪ್ರಾಯೋಗಿಕವಾಗಿ ನೀರು ಹರಿಸುವುದನ್ನು ಹಾಗೂ ಗುಟ್ಕಾ ನಿಷೇಧವನ್ನು ವಿರೋಧಿಸಿ ಸೆಪ್ಟಂಬರ್ 1 ರಂದು ದಾವಣಗೆರೆ ಬಂದ್‌ಗೆ ಕರೆ ನೀಡಲಾಗಿದೆ.
ದಿನಾಂಕ ಬದಲಾವಣೆಗೆ ಕಾರಣ: ಪೋಲಿಸರ ಮನವಿ ಮೇರೆಗೆ ಹಾಗೂ ಶಾಲಾ-ಕಾಲೇಜುಗಳು ಮತ್ತು ಬಸ್ ಮಾಲೀಕರಿಗೆ ಮನವಿ ಮಾಡಲು ಸಮಯಾವಕಾಶ ಬೇಕಾಗಿದ್ದರಿಂದ ಬಂದ್ ದಿನಾಂಕವನ್ನು ಮುಂದೂಡಲಾಗಿದೆ.
ಬೈಕ್ ರ್ಯಾಲಿ: ಬಂದ್‌ಗೆ ಬೆಂಬಲ ಕೋರಿ ಸೋಮವಾರ ಸಂಜೆ 4 ಗಂಟೆಗೆ ನಗರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರ ಸ್ಪಷ್ಟನೆ:
ತಾವು ಕೂಡ ರೈತರ ಪರವಾಗಿದ್ದು, ಭದ್ರಾ ಡ್ಯಾಂನಿಂದ ನೀರು ಹರಿಸಲು ವಿರೋಧವಿಲ್ಲ. ಆದರೆ, ಮುಂದಿನ ಬೇಸಿಗೆಗೆ 35 ಟಿಎಂಸಿ ನೀರನ್ನು ಸಂಗ್ರಹಿಸಿಟ್ಟುಕೊಂಡು ನೀರು ಬಿಡಬೇಕು.
ತುಂಗಾಭದ್ರಾ ಜಲಾಶಯದಿಂದ ನೀರು ಲಿಫ್ಟ್ ಮಾಡುವ ಕಾಮಗಾರಿಗೆ ಅಗತ್ಯವಿರುವ 30 ಕೋಟಿ ರೂಪಾಯಿಗಳನ್ನು ಒದಗಿಸಿ, ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಒದಗಿಸಲಿ.
ಚಿತ್ರದುರ್ಗದ ಜನರೊಂದಿಗೆ ಯಾವುದೇ ಸಂಘರ್ಷವಿಲ್ಲ ಮತ್ತು ಭತ್ತದ ಬೆಳೆಗೆ ನೀರು ಬಿಡುವುದಕ್ಕೆ ವಿರೋಧವಿಲ್ಲ. ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.
ನಾವೂ ರೈತರ ಪರ. ಈ ಹಿಂದೆ ನೀರು ಬಿಡುವಂತೆ ಹೋರಾಟ ಮಾಡಿದ್ದೇವೆ. ಭದ್ರಾ ಡ್ಯಾಂನಿಂದ ನೀರು ಹರಿಸಲು ನಮ್ಮ ವಿರೋಧ ಇಲ್ಲ. ಆದರೆ ಮುಂದಿನ ಬೇಸಿಗೆಗೆ 35 ಟಿಎಂಸಿ ನೀರು ಸಂಗ್ರವಿಟ್ಟುಕೊಂಡು ನೀರು ಹರಿಸಲಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಜಲಾಶಯಕ್ಕೆ ತುಂಗಾಭದ್ರಾ ಜಲಾಶಯದಿಂದ ಹಣ ಲಿಫ್ಟ್ ಮಾಡಿ ಕಾಮಗಾರಿಗೆ ಬೇಕಾದ 30 ಕೋಟಿ ರೂಪಾಯಿ ನೀಡಿ ಅಪ್ಪರ್ ಭದ್ರಾ ಯೋಜನೆಯಡಿ ನೀರು ಕೊಡಲಿ ಎಂದು ಹೇಳಿದರು.
ಚಿತ್ರದುರ್ಗದ ಜನರ ಜೊತೆ ಸಂಘರ್ಷ ಇಲ್ಲ. ಭತ್ತಕ್ಕೆ ನೀರು ಬಿಡಲು ನಮ್ಮ ವಿರೋಧ ಇಲ್ಲ. ಆದರೆ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಸತೀಶ್ ಕೊಳೇನಹಳ್ಳಿ, ಮಾಜಿ ಶಾಸಕ ಬಸವರಾಜ್ ನಾಯ್ಕ್ ಮತ್ತಿತರರು ಹಾಜರಿದ್ದರು.





Leave a comment