ದಾವಣಗೆರೆ: ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನೆಯ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಭದ್ರಾ ಡ್ಯಾಂನಿಂದ ನೀರು ಹರಿಸುವ ಸಂಬಂಧ ಆ.18 ರಂದು ಸಂಜೆ 5 ಗಂಟೆಗೆ ಮಹತ್ವದ ಸಭೆಯನ್ನು ಕರೆಯಲಾಗಿದೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಈ 89ನೇ ಸಭೆಯು ಬೆಂಗಳೂರಿನ ವಿಕಾಸ ಸೌಧದ ಕೊಠಡಿ ಸಂಖ್ಯೆ 318ರಲ್ಲಿ ನಡೆಯಲಿದೆ.
ಸಭೆಯ ಪ್ರಮುಖ ಅಜೆಂಡಾಗಳು:
ನೀರಿನ ಸ್ಥಿತಿಗತಿ ಪರಿಶೀಲನೆ:
ಭದ್ರಾ ಜಲಾಶಯದ ಪ್ರಸ್ತುತ ನೀರಿನ ಮಟ್ಟ ಮತ್ತು ಒಳಹರಿವನ್ನು ಪರಿಶೀಲಿಸುವುದು.
ಮುಂಗಾರು ಹಂಗಾಮಿನ ನೀರು ಬಿಡುಗಡೆ:
ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನಾಲೆಗಳ ಮೂಲಕ ನೀರು ಹರಿಸುವ ದಿನಾಂಕ ಹಾಗೂ ವೇಳಾಪಟ್ಟಿಯನ್ನು ನಿಗದಿಪಡಿಸುವುದು.
ಇತರ ವಿಷಯಗಳು: ಅಧ್ಯಕ್ಷರ ಅನುಮತಿಯೊಂದಿಗೆ ನೀರಾವರಿ ಮತ್ತು ಕುಡಿಯುವ ನೀರಿನ ನಿರ್ವಹಣೆಗೆ ಸಂಬಂಧಿಸಿದ ಇತರ ವಿಷಯಗಳ ಚರ್ಚೆ.
ಈ ಸಭೆಯಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜನಪ್ರತಿನಿಧಿ ರೈತ ಮುಖಂಡರು, ಸಂಸದರು, ಶಾಸಕರು ಹಾಗೂ ಕಾಡಾ ಮತ್ತು ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.





Leave a comment