Home ದಾವಣಗೆರೆ ಜಿ.ಎಂ. ವಿವಿಯಲ್ಲಿ ತ್ರಿವಿಧ ಸಂಭ್ರಮ: ಸ್ವಾತಂತ್ರ್ಯ ದಿನಾಚರಣೆ, ಕುಲಾಧಿಪತಿ ಜಿ.ಎಂ. ಲಿಂಗರಾಜು 58ನೇ ಜನ್ಮದಿನ, ನೂತನ ತಂತ್ರಜ್ಞಾನ ಕೇಂದ್ರಗಳ ಶುಭಾರಂಭ!
ದಾವಣಗೆರೆನವದೆಹಲಿಬೆಂಗಳೂರು

ಜಿ.ಎಂ. ವಿವಿಯಲ್ಲಿ ತ್ರಿವಿಧ ಸಂಭ್ರಮ: ಸ್ವಾತಂತ್ರ್ಯ ದಿನಾಚರಣೆ, ಕುಲಾಧಿಪತಿ ಜಿ.ಎಂ. ಲಿಂಗರಾಜು 58ನೇ ಜನ್ಮದಿನ, ನೂತನ ತಂತ್ರಜ್ಞಾನ ಕೇಂದ್ರಗಳ ಶುಭಾರಂಭ!

Share
ಸ್ವಾತಂತ್ರ್ಯ
Share

ದಾವಣಗೆರೆ: ಇಲ್ಲಿನ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಅವರ 58ನೇ ಜನ್ಮದಿನೋತ್ಸವ ಸಂಭ್ರಮದ ಆಚರಣೆಯೊಂದಿಗೆ ಇದರ ಅಂಗವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ತಂತ್ರಜ್ಞಾನ ಆಧಾರಿತ ನೂತನ ಕೇಂದ್ರಗಳ ಉದ್ಘಾಟನೆ ಹಾಗೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಸ್ತಂಭದ ಬಳಿ ಬೆಳಿಗ್ಗೆ 8 ಗಂಟೆಗೆ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಅವರು ಧ್ವಜಾರೋಹಣ ನೆರವೇರಿಸುವುದರ ಮೂಲಕ ದಿನದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ವಿಶೇಷ ಕಾರ್ಯಕ್ರಮಗಳನ್ನು ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಅವರು ಉದ್ಘಾಟಿಸಿದರು. ಅವುಗಳಲ್ಲಿ ‘ಸಂಸ್ಥಾಪಕರ ಜೀವನಗಾಥೆ’ ಹಾಗೂ ಜಿಎಂ ಶೈಕ್ಷಣಿಕ ಸಮೂಹ ನಡೆದು ಬಂದ ಹಾದಿಯನ್ನು ಬಿಂಬಿಸುವ ಭವ್ಯ ಫಲಕಗಳ ನೂತನವಾಗಿ ನಿರ್ಮಿಸಲಾದ ‘ಗ್ಯಾಲರಿಯಮ್’ (Gallerium) ಉದ್ಘಾಟನೆ. ತಂತ್ರಜ್ಞಾನ ಜಾಗೃತಿ ಕೇಂದ್ರ (TAC) ಚಾಲನೆ: ಅತ್ಯಾಧುನಿಕ ತಂತ್ರಜ್ಞಾನ ಮಾದರಿಗಳನ್ನೊಳಗೊಂಡ ‘ಟೆಕ್ನಾಲಜಿ ಅವೇರ್‌ನೆಸ್ ಸೆಂಟರ್’ ಉದ್ಘಾಟನೆಗೊಳ್ಳಲಿದೆ. ಇದರಲ್ಲಿ ವಿಆರ್-ಬೈಕ್, ಎಗ್ ಟೈಪ್ ವಿಆರ್, ರೋಬೋಟ್, ಸೆಮಿಕಂಡಕ್ಟರ್ ಫ್ಯಾಬ್ ಸಿಸ್ಟಮ್, ಇಸ್ರೋ ರಾಕೆಟ್ ಹಾಗೂ ಉಪಗ್ರಹ ಮಾದರಿಗಳು, ಕ್ವಾಂಟಮ್ ಕಂಪ್ಯೂಟರ್, ಹೈಪರ್‌ಲೂಪ್, ಜೆಟ್ ಎಂಜಿನ್ ಮುಂತಾದ ಅನೇಕ ತಾಂತ್ರಿಕ ಮಾದರಿಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ಮುಕ್ತ ಆವರಣ ಕಲಿಕಾ ಕೇಂದ್ರ (Open Space Learning Centre): ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಅನುಕೂಲಕರವಾಗಲೆಂಬ ಉದ್ದೇಶದಿಂದ ಓಪನ್ ಸ್ಪೇಸ್ ಲರ್ನಿಂಗ್ ಸೆಂಟರ್ ಉದ್ಘಾಟಿಸಲಾಯಿತು.

ಇದರ ವಿಶೇಷವೆಂದರೆ, ಜಿಎಂಯು ಕ್ಯಾಂಪಸ್ ನಲ್ಲಿರುವ ಎಲ್ ಇಡಿ ಸ್ಕ್ರೀನ್ ನಲ್ಲಿ ಟೆಕ್ನಾಲಜಿ, ಕಲ್ಚರಲ್, ಸ್ಪೋರ್ಟ್ಸ್, ಹಿಸ್ಟರಿ, ಬಯೋಗ್ರಫಿ, ಜಿಯೋಗ್ರಫಿ, ಫುಡ್ ಟೆಕ್ ಹೀಗೆ ವಿವಿಧ ಕ್ಷೇತ್ರಗಳ ಮಾಹಿತಿಯ ವಿಡಿಯೋ ಪ್ರದರ್ಶನವನ್ನೊಳಗೊಂಡಿದೆ.
‘ಮೆಂಟೋರಾ’ಆ್ಯಪ್ ಬಿಡುಗಡೆ: ವಿದ್ಯಾರ್ಥಿಗಳ ಮಾರ್ಗದರ್ಶನ ಹಾಗೂ ಪ್ರಗತಿಗಾಗಿ ‘Mentora’ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು.

ಗಮನ ಸೆಳೆದ BVoC ಡಿಗ್ರಿ ಇವಿ ಬೈಕ್ ಗಳು: ಬ್ಯಾಚುಲರ್ ಆಫ್ ವೊಕೇಶನಲ್ ಟ್ರೈನಿಂಗ್ (B.Voc Digree) ಪದವಿಯ ಎಲೆಕ್ಟ್ರಿಕಲ್ ವೆಹಿಕಲ್ (EV) ಪ್ರಯೋಗಾಲಯಗಳ ಉದ್ಘಾಟಿಸಲಾಯಿತು.

ಬ್ಯಾಚುಲರ್ ಆಫ್ ವೊಕೇಶನಲ್ ಟ್ರೈನಿಂಗ್ ಡಿಗ್ರಿ ಪ್ರೋಗ್ರಾಮ್ (B.Voc Digree) ನಿರ್ದೇಶಕರಾದ ಡಾ. ಬಿ.ಆರ್. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ, ಕಾರ್ಯಕ್ರಮ ಸಂಯೋಜಕರಾದ ಎಸ್.ಯು. ಸುರೇಶ್ ಬಾಬು ಅವರ ನೇತೃತ್ವದಲ್ಲಿ ಬಿಓಕ್ (BVOC) ಎಲೆಕ್ಟ್ರಿಕಲ್ ವೆಹಿಕಲ್ ಟೆಕ್ನಾಲಜಿಯ ಪದವಿ ಓದುತ್ತಿರುವ ಮುಗಜ್ಜ ಎಲ್.ವೈ, ವರುಣ್ ಕುಮಾರ್, ದೀಪಕ್, ದಾಹುದ್ ಮಲ್ಲಿಕ್, ಧನ್ವಂತ್ ಎಂಬ ಐವರು ವಿದ್ಯಾರ್ಥಿಗಳ ತಂಡ ತಯಾರಿಸಲ್ಪಟ್ಟ ಭಾರತ್ ಇವಿ ಮೋಟಾರ್ಸ್ ನ Strom ಮತ್ತು Beast ಎಂಬ ಹೆಸರಿನ ಎಲೆಕ್ಟ್ರಿಕಲ್ ಬೈಕ್ ಗಳು ಗಮನ ಸೆಳೆದವು.

ಇದೇ ವೇಳೆ ವೃತ್ತಿಪರ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಕುಲಾಧಿಪತಿಗಳ ಜನ್ಮದಿನ ಸಂಭ್ರಮಾಚರಣೆ : ಕೇಕ್ ಕತ್ತರಿಸಿ ಶುಭಾಶಯಗಳೊಂದಿಗೆ ಸಿಹಿ ವಿನಿಮಯ ಮೂಲಕ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಅವರ ಹುಟ್ಟುಹಬ್ಬವನ್ನು ಸಂಭ್ರಮಿಸಲಾಯಿತು.

ಈ ಎಲ್ಲ ವಿಶೇಷ ಕಾರ್ಯಕ್ರಮಗಳ ವೇಳೆ ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್, ಸಹ ಉಪಕುಲಪತಿಗಳಾದ ಡಾ. ಎಂ. ವೇಣುಗೋಪಾಲ ರಾವ್, ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್, ಆಡಳಿತಾಧಿಕಾರಿಗಳಾದ ವೈ.ಯು. ಸುಭಾಷ್, ವೃತ್ತಿಪರ ತರಬೇತಿ ಶಾಲೆಯ ನಿರ್ದೇಶಕರಾದ ಡಾ. ಬಿ.ಆರ್. ಶ್ರೀಧರ್ ಸೇರಿದಂತೆ ಪ್ರಾಂಶುಪಾಲರು, ಡೀನ್ ಗಳು, ನಿರ್ದೇಶಕರು, ಮುಖ್ಯಸ್ಥರು, ಜಿಎಂ ಶೈಕ್ಷಣಿಕ ಸಮೂಹದ ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles