ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಶೇಕಡ 75 ರಷ್ಟು ಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶ ಇರುವುದರಿಂದ ದಾವಣಗೆರೆ ಜಿಲ್ಲೆಯವರನ್ನು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಮತ್ತು ಐಸಿಸಿ ಸಭೆಯನ್ನು ಕಡ್ಡಾಯವಾಗಿ ದಾವಣಗೆರೆಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾ ರೈತ ಒಕ್ಕೂಟವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಬೇಸಿಗೆ ಹಂಗಾಮಿನಲ್ಲಿ 120 ದಿನ ಸತತವಾಗಿ ಹರಿಸಲು ಡ್ಯಾಂನಲ್ಲಿ ಬಳಸಬಹುದಾದ 35 ಟಿಎಂಸಿ ನೀರು ಸಂಗ್ರಹ ಮೀಸಲಿಡಬೇಕು. ಭದ್ರಾ ಮೇಲ್ದಂಡೆ ಯೋಜನೆ ಷರತ್ತಿನಂತೆ ತುಂಗಾ ನದಿಯಿಂದ ಭದ್ರಾ ಡ್ಯಾಂಗೆ 17.40 ಟಿಎಂಸಿ ನೀರು ಎತ್ತಿ ಹರಿಸುವ ಕಾಮಗಾರಿಯನ್ನು ಅಗತ್ಯ ಅನುದಾನ ಬಿಡುಗಡೆ ಮಾಡಿ, ತ್ವರಿತವಾಗಿ ಪೂರ್ಣಗೊಳಿಸಬೇಕು. ವಿಬಿಜೀ-ರಾಮಜೀ ಯೋಜನೆಯಡಿ ಕಾಲುವೆಗಳಲ್ಲಿ ಬೆಳೆದಿರುವ ಗಿಡ ಗಂಟಿಗಳು ತೆಗೆಸಿ, ಹೂಳು ತೆಗೆದು ಸ್ವಚ್ಛ ಮಾಡಿ, ಕೊನೆ ಭಾಗಕ್ಕೆ ನೀರು ತಲುಪುವಂತೆ ಮಾಡಬೇಕು ಎಂದು ಒತ್ತಾಯಿಸಿದೆ.
ಈಗಾಗಲೇ ಶೇಕಡ 16 ರಷ್ಟು ರೈತರು ನಾಟಿ ಹಚ್ಚಿದ್ದಾರೆ. ಶೇಕಡ 14 ರಷ್ಟು ರೈತರು ಬೀಜ ಚೆಲ್ಲಿದ್ದಾರೆ. ಭದ್ರಾ ನೀರು ಅಂದ್ರೆ ಚಾನಲ್ ನೀರು ಬಂದ ಮೇಲೆ ಶೇಕಡ 50 ರಷ್ಟು ರೈತರು ಭತ್ತದ ಬೀಜ ಚೆಲ್ಲುವವರಿದ್ದಾರೆ. ಇವರೆಲ್ಲರಿಗೂ ಭತ್ತದ ಕೊಯ್ಲು ಆಗುವವರೆಗೂ ನೀರು ಹರಿಸಬೇಕಾಗುತ್ತದೆ. ಅಂದ್ರೆ ಜನವರಿ ತಿಂಗಳ ಕೊನೆಯವರೆಗೆ ನೀರು ಹರಿಸಬೇಕಾಗುತ್ತದೆ. ಆಗ ಡ್ಯಾಂ ನಲ್ಲಿ ನೀರು ಖಾಲಿಯಾಗುತ್ತದೆ. ಈಗ ಬೀಜ ಚೆಲ್ಲಿ ನಾಟಿ ಮಾಡಿದ್ರೆ ಮೂಡು ಗಾಳಿಗೆ ಎಕರೆಗೆ 15 ರಿಂದ 20 ಚೀಲ ಇಳುವರಿ ಬರುತ್ತದೆ. ಈ ದುಬಾರಿ ಗೊಬ್ಬರ-ಕೂಲಿ ಖರ್ಚಿನಲ್ಲಿ ಮಾಡಿದ ಖರ್ಚು ಕೂಡ ಬರುವುದಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ಇತ್ತ ಡ್ಯಾಂ ನೀರು ವ್ಯರ್ಥ ಮತ್ತು ರೈತರ ಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ. ಜೊತೆಗೆ ಡ್ಯಾಂ ಖಾಲಿಯಾಗಿ ಮುಂದಿನ ಬೇಸಿಗೆ ಹಂಗಾಮಿನಲ್ಲಿ ಇಡೀ ಜಿಲ್ಲೆ ಒಣಗಿ ಹೋಗುತ್ತದೆ. ಆದ್ದರಿಂದ ಜನವರಿ 5 ಅಥವಾ 10ನೇ ತಾರೀಖಿನಿಂದ ಮೇ ತಿಂಗಳ ಅಂತ್ಯದವರೆಗೆ ಒಟ್ಟು 130 ದಿನ ಸತತವಾಗಿ ನೀರು ಹರಿಸಿದ್ರೆ ಬೇಸಿಗೆಯಲ್ಲಿ ಭತ್ತದ ಇಳುವರಿ ಎಕರೆಗೆ 50 ಚೀಲ ಬರುತ್ತದೆ, ದರ ಕ್ವಿಂಟಾಲ್ ಒಂದಕ್ಕೆ 4 ಸಾವಿರಕ್ಕಿಂತ ಹೆಚ್ಚು ಆಗುವುದು ಗ್ಯಾರಂಟಿ. ಜೊತೆಗೆ ತೋಟದ ಬೆಳೆಗಳು ಉಳಿಯುತ್ತವೆ ಅಲ್ಲದೆ ಅಂತರ್ಜಲ ಮಟ್ಟ ಕುಸಿಯುವುದಿಲ್ಲ ಅಂದ್ರೆ ಬೋರ್ ವೆಲ್ ಗಳು ಫೇಲ್ ಆಗುವುದಿಲ್ಲ. ಇಡೀ ಜಿಲ್ಲೆ ತಣ್ಣಗೆ ಇರುತ್ತದೆ ಎಂದು ತಿಳಿಸಿದರು.
ಈಗಾಗಲೇ ಭತ್ತದ ಬೀಜ ಚೆಲ್ಲಿ ನಾಟಿ ಮಾಡಿದ ಮತ್ತು ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರು ನೀರು ಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅವರಿಗೆ ವಾಸ್ತವ ಪರಿಸ್ಥಿತಿ ತಿಳಿಸಿ, ಜಾಗೃತಿ ಮೂಡಿಸಿ, ಸಮಾಧಾನ ಪಡಿಸುವುದು ಸರ್ಕಾರದ ಮತ್ತು ರೈತ ಮುಖಂಡರ ಕರ್ತವ್ಯವಾಗಿದೆ. ನಮ್ಮ ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ರೈತರು ಹತ್ತಿಪ್ಪತ್ತು ವರ್ಷಗಳಿಂದ ತೋಟ ಬೆಳೆಸಿಕೊಂಡಿದ್ದಾರೆ. ಸುಮಾರು 3 ಲಕ್ಷ ಎಕರೆ ತೋಟ ಇದ್ದು, ಇದರಲ್ಲಿ ಶೇಕಡ 80 ರಷ್ಟು ಅಡಿಕೆ ಬೆಳೆ ಇದೆ. 2023 ರಲ್ಲಿ ಬೇಸಿಗೆ ಹಂಗಾಮಿನಲ್ಲಿ ನೀರಿನ ಕೊರತೆಯಿಂದಾಗಿ ರೈತರು ತಮ್ಮ ಹೆಂಡತಿ ಕೊರಳಲ್ಲಿನ ತಾಳಿ ಹಡವಿಟ್ಟು ಸಾಲ ಮಾಡಿ, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ, ತೋಟ ಉಳಿಸಿಕೊಂಡಿದ್ದಾರೆ. ಇನ್ನು ಕೆಲ ರೈತರು ಸಾಲ ಸೋಲ ಮಾಡಿ, ಎರಡುಮೂರು ಬೋರ್ ವೆಲ್ ಕೊರೆಸಿ ತೋಟ ಉಳಿಸಿಕೊಂಡಿದ್ದಾರೆ. ಇಂತಹ ಕಹಿ ಅನುಭವ ಮತ್ತೆ ಮರುಕಳಿಸಬಾರದು ಎಂಬುದು ಬಹುತೇಕ ರೈತರ ಇಚ್ಛೆಯಾಗಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬೇಸಿಗೆ ಹಂಗಾಮಿನಲ್ಲಿ 120 ದಿನ ಸತತವಾಗಿ ಹರಿಸಲು ಡ್ಯಾಂನಲ್ಲಿ ಬಳಸಬಹುದಾದ 35 ಟಿಎಂಸಿ ನೀರು ಸಂಗ್ರಹ ಮೀಸಲಿಡಬೇಕು. ಭದ್ರಾ ಮೇಲ್ದಂಡೆ ಯೋಜನೆ ಷರತ್ತಿನಂತೆ ತುಂಗಾ ನದಿಯಿಂದ ಭದ್ರಾ ಡ್ಯಾಂಗೆ 17.40 ಟಿಎಂಸಿ ನೀರು ಎತ್ತಿ ಹರಿಸುವ ಕಾಮಗಾರಿಯನ್ನು ಅಗತ್ಯ ಅನುದಾನ ಬಿಡುಗಡೆ ಮಾಡಿ, ತ್ವರಿತವಾಗಿ ಪೂರ್ಣಗೊಳಿಸಬೇಕು. ವಿಬಿಜೀ-ರಾಮಜೀ ಯೋಜನೆಯಡಿ ಕಾಲುವೆಗಳಲ್ಲಿ ಬೆಳೆದಿರುವ ಗಿಡ ಗಂಟಿಗಳು ತೆಗೆಸಿ, ಹೂಳು ತೆಗೆದು ಸ್ವಚ್ಛ ಮಾಡಿ, ಕೊನೆ ಭಾಗಕ್ಕೆ ನೀರು ತಲುಪುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಶೇಕಡ 75 ರಷ್ಟು ಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶ ಇರುವುದರಿಂದ ದಾವಣಗೆರೆ ಜಿಲ್ಲೆಯವರನ್ನು ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಮತ್ತು ಐ.ಸಿ.ಸಿ ಸಭೆಯನ್ನು ಕಡ್ಡಾಯವಾಗಿ ದಾವಣಗೆರೆಯಲ್ಲಿ ನಡೆಸಬೇಕು ಎಂದು ಆಗ್ರಹಿಸಿದರು.
ಬೇಸಿಗೆ ಹಂಗಾಮಿನಲ್ಲಿ ನೀರು ಹರಿಸಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಜಿಲ್ಲಾ ರೈತರ ಒಕ್ಕೂಟದಿಂದ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್, ರೈತ ಮುಖಂಡರಾದ
ಬೇತೂರು ಸಂಗಣ್ಣಗೌಡ್ರು, ಬಲ್ಲೂರು ರವಿಕುಮಾರ್, ಹುಚ್ಚವ್ವನಳ್ಳಿ ಮಂಜುನಾಥ್, ವೊಡ್ಡಿನಳ್ಳಿ ಲಿಂಗರಾಜು, ಕುಕ್ಕುವಾಡದ ಡಿ.ಸಿ.ದಿನೇಶ್, ಗೋಣಿವಾಡ ಎನ್.ಎಂ.ಮಂಜುನಾಥ್, ಶ್ಯಾಗಲೆ ಜಿ. ಜೆ.ರಮೇಶಗೌಡ್ರು, ಡಿ.ಕೆಪರಮೇಶ್, ಗೋಪನಾಳ್ ಎಸ್ ಆರ್ ರಾಜೇಶ್, ಪರಮೇಶ, ಬೇತೂರು ಬಿ.ವಿರೂಪಾಕ್ಷಪ್ಪ, ಬಿ.ಬಿ.ಪ್ರಭು, ಶಿವಕುಮಾರ್, ಶ್ಯಾಗಲೆ ಕ್ಯಾಂಪ್ ಸತೀಶ್ ಮುಂತಾದವರು ಉಪಸ್ಥಿತರಿದ್ದರು.





Leave a comment