ದಾವಣಗೆರೆ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಾಗೂ ಸಾರ್ವಜನಿಕರಲ್ಲಿ ಸುರಕ್ಷತೆಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಅವರ ನೇತೃತ್ವದಲ್ಲಿ ಇಂದು ನಗರದಲ್ಲಿ ಬೃಹತ್ ಪೊಲೀಸ್ ಪಥ ಸಂಚಲನ ನಡೆಸಲಾಯಿತು.
ಈ ಪಥ ಸಂಚಲನವು ನಗರದ ಮದೀನಾ ಆಟೋ ಸ್ಟ್ಯಾಂಡ್‌ನಿಂದ ಪ್ರಾರಂಭವಾಗಿ ಹಾಸಬಾವಿ ವೃತ್ತ, ಚೌಕಿಪೇಟೆ ರಸ್ತೆ, ಹೊಂಡದ ವೃತ್ತ, ವಸಂತ ಟಾಕೀಸ್ ರಸ್ತೆ, ಗಡಿಯಾರ ಕಂಬ, ಬಿನ್ನಿಕಂಪನಿ ರಸ್ತೆ ಹಾಗೂ ಕೆ.ಆರ್. ರಸ್ತೆ ಮೂಲಕ ಸಾಗಿ ಮಾಗನಹಳ್ಳಿ ರಸ್ತೆಯ ಆಜಾದ್ ನಗರ ಪೊಲೀಸ್ ಠಾಣೆಯ ಬಳಿ ಮುಕ್ತಾಯಗೊಂಡಿತು.
ಈ ಪಥ ಸಂಚಲನದಲ್ಲಿ ಕೆ.ಎಸ್.ಆರ್.ಪಿ (KSRP) ತುಕಡಿಗಳು, ರ್ಯಾಪಿಡ್ ಆಕ್ಷನ್ ಫೋರ್ಸ್ (RAF), ಡಿ ಎ ಆರ್ (DAR) ಪಡೆಗಳು ಹಾಗೂ ನಗರ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಪಥ ಸಂಚಲನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಡಿವೈಎಸ್ಪಿಗಳಾದ ಶರಣಬಸವೇಶ್ವರ ಬಿ., ತಿಪ್ಪೇಸ್ವಾಮಿ, ರುದ್ರಪ್ಪ ಉಜ್ಜನಕೊಪ್ಪ, ಪೊಲೀಸ್ ನಿರೀಕ್ಷಕ ಉಮೇಶ್ ಜಿ.ಬಿ., ವಸಂತ್, ಸುನೀಲ್ ಕುಮಾರ್, ಶಿಲ್ಪಾ, ಮಲ್ಲಮ್ಮ ಚೌಬೆ, ನಂಜುಂಡಸ್ವಾಮಿ, ಮಂಜುನಾಥ ಕುಪ್ಪೇಲೂರು, ಆರ್ ಎಎಫ್ ನಿರೀಕ್ಷಕ ರಾಜು ಹಾಗೂ ಪಿಎಸ್ಐಗಳಾದ ರವಿನಾಯ್ಕ, ಸಚಿನ್, ಶಕುಂತಲಾ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.





Leave a comment