SUDDIKSHANA KANNADA NEWS/ DAVANAGERE/ DATE:27-07-2023
ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ತುಸು ಮಳೆ ಹೆಚ್ಚಾಗಿದ್ದು, ಬುಧವಾರ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ 28,296 ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ. ಭದ್ರಾ ಡ್ಯಾಂ (Bhadra Dam)ಗೆ ಒಂದೇ ಎರಡು ಮುಕ್ಕಾಲು ಅಡಿ ನೀರು ಬಂದಿದೆ. ಮಂಗಳವಾರ 24,704 ಕ್ಯೂಸೆಕ್ ಗೆ ಇಳಿದಿದ್ದ ಒಳಹರಿವು ಹೆಚ್ಚಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಿಂದ ತಗ್ಗಿತ್ತು. ಮತ್ತೆ ನಿನ್ನೆ ವರುಣನ ತುಸು ಆರ್ಭಟ ಹೆಚ್ಚಿದ್ದು, ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳು ತುಂಬಿ ಹರಿಯುವುದು ಮುಂದುವರಿದಿದೆ. ಮೂರು ದಿನಗಳ ಹಿಂದೆ 39 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಹರಿದು ಬರುತ್ತಿತ್ತು. ನಿನ್ನೆ ಕಡಿಮೆಯಾಗಿತ್ತು. ಇಂದೂ ಸಹ ಸ್ವಲ್ಪ ಏರಿಕೆಯಾಗಿದ್ದು, ರೈತರು ಖುಷಿಪಡುತ್ತಿದ್ದಾರೆ.
ಬುಧವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಭದ್ರಾ ಡ್ಯಾಂ (Bhadra Dam)ನೀರಿನ ಮಟ್ಟ 155.3 ಅಡಿ ಇತ್ತು. ಒಳಹರಿವು 24,704 ಕ್ಯೂಸೆಕ್ ಇತ್ತು, ಹೊರ ಹರಿವು 170 ಕ್ಯೂಸೆಕ್ ಇದೆ. ಕಳೆದ ವರ್ಷ 184.6 ಅಡಿ ಇತ್ತು. ಇಂದು ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ 158ಕ್ಕೆ ಏರಿಕೆಯಾಗಿದೆ. ಹೊರ ಹರಿವು 183 ಕ್ಯೂಸೆಕ್ ಇದೆ.
ಈ ಸುದ್ದಿಯನ್ನೂಓದಿ:
Areca: ಖೇಣಿ ಮನೆಯಲ್ಲಿ ಅಡಿಕೆ ಇಟ್ಟಿದ್ದೀರಾ… ಹಾಗಾದ್ರೆ ಹುಷಾರಾಗಿರಿ.. ಯಾಕೆಂದರೆ ನಲ್ಲೂರಲ್ಲಿ ಅಡಿಕೆ ಕದ್ದ ಮೂವರು ಸಿಕ್ಕಿಬಿದ್ದಿದ್ದು ಹೇಗೆ…?
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ಸೇರಿದಂತೆ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ಹೆಚ್ಚಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಈ ವರ್ಷವೂ ಭದ್ರಾ ಡ್ಯಾಂ (Bhadra Dam) ಅಥಾರಿಟಿ ಅಧಿಕಾರಿಗಳು ಹೇಳುವ ಪ್ರಕಾರ ಭದ್ರೆ ಒಡಲು ತುಂಬಲಿದೆ. ಮುಂಗಾರು ಮಳೆ ಕೈ ಕೊಟ್ಟರೂ ಈಗ ಮಳೆ ಚೆನ್ನಾಗಿಯೇ ಬರುತ್ತಿದೆ. ನಾಳೆ ಹೊತ್ತಿಗೆ 160 ಅಡಿ ದಾಟುವ ನಿರೀಕ್ಷೆ ಹೊಂದಲಾಗಿದೆ.
ಕಳೆದ ವರ್ಷ ಇಷ್ಟೊತ್ತಿಗೆ ಡ್ಯಾಂ ಬಹುತೇಕ ತುಂಬಿ ತುಳುಕುತಿತ್ತು. ಆದ್ರೆ, ಈ ವರ್ಷ ಇನ್ನೂ 28 ಅಡಿ ನೀರು ಹರಿದು ಬರಬೇಕು. ಕಳೆದ ಎರಡ್ಮೂರು ದಿನಗಳಿಂದ 15 ಅಡಿ ನೀರು ಡ್ಯಾಂಗೆ ಹರಿದು ಬಂದಿದೆ. ಮಳೆ ಉತ್ತಮವಾಗಿ ಸುರಿದರೆ ಮತ್ತಷ್ಟು ನೀರು ಅಣೆಕಟ್ಟಿಗೆ ಬರುತ್ತದೆ. ಸದ್ಯದ ಮಾಹಿತಿ ಪ್ರಕಾರ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಆದ್ರೆ, ಮಳೆ ಸುರಿಯುವ ಪ್ರಮಾಣ ಕ್ಷೀಣಿಸಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ:
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
ದಿನಾಂಕ: 27- 07 -2023
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 158 ಅಡಿ
ಎಂಎಸ್ ಎಲ್ : 2124.75 ft
ಕೆಪಾಸಿಟಿ: 41081- 36901 tmc
ಒಳಹರಿವು: 29296 ಕ್ಯೂಸೆಕ್
ಒಟ್ಟು ಹೊರಹರಿವು: 183 ಕ್ಯೂಸೆಕ್
ಕಳೆದ ವರ್ಷ ಇದೇ ದಿನ: 184.7 ಅಡಿ
ಕೆಪಾಸಿಟಿ: 69657 ಟಿಎಂಸಿ
Bhadra Dam Water Level, Bhadra Dam, Bhadra Dam Water Level Today, Bhadra Dam Inflow, Bhadra Dam OutFlow