SUDDIKSHANA KANNADA NEWS/ DAVANAGERE/ DATE:18-10-2024
ದಾವಣಗೆರೆ: ಯಾವುದೇ ತರಗತಿಯ ವಿದ್ಯಾರ್ಥಿಗಳಾದರೂ ಕೇವಲ 10 ದಿನಗಳಲ್ಲಿ ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳನ್ನು ಓದಿ ಅರ್ಥೈಸಿಕೊಂಡು, ಯಾವುದೇ ಪ್ರಶ್ನೆ ಕೇಳಿದರೂ, ನಿಖರವಾಗಿ ಪುಟ ಸಂಖ್ಯೆ ಸಮೇತ ಉತ್ತರಿಸುವಂತಹ ಸಾಮರ್ಥ್ಯ ಬೆಳಸುವ ಅತ್ಯಂತ ಪರಿಣಾಮಕಾರಿ ‘ಫೋಟೋಗ್ರಫಿಕ್ ಮೆಮೊರಿ* ತರಬೇತಿಯು ಸೂಪರ್ ಟ್ರೈನ್ ವತಿಯಿಂದ ನಡೆಸಲಾಗುತ್ತಿದೆ.
ಅಕ್ಟೋಬರ್ 21 ರಿಂದ 10 ದಿನಗಳ ಕಾಲ ಈ ತರಬೇತಿ ಕೊಂಡಜ್ಜಿಯಲ್ಲಿನ 13 ಎಕರೆಯ ವಿಶಾಲವಾದ ಹಚ್ಚಹಸಿರಿನ ಪರಿಸರದಲ್ಲಿ ನಡೆಯಲಿದ್ದು. ತರಬೇತಿಗೆಂದೇ ನಿರ್ಮಿಸಲಾದ ಎಂಎಸ್ಎಸ್ ಕೇಂದ್ರದಲ್ಲಿ
ಏರ್ಪಡಿಸಲಾಗಿದೆ ಎಂದು ಸೂಪರ್ ಬ್ರೈನ್ ಸಂಸ್ಥಾಪಕ ಡಾ. ಜಯಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
6ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾಗಿದೆ 10 ದಿನಗಳ ಸೂಪರ್ ಟ್ರೈನ್ ತರಬೇತಿಯು ಎಂಎಸ್ಎಸ್ ತರಬೇತಿ ಕೇಂದ್ರದಲ್ಲಿ ಬೆಳಗ್ಗೆ, 6 ರಿಂದ ಸಂಜೆ 8 ರ ವರೆಗೆ ನಡೆಯಲಿದ್ದು ಪ್ರತಿದಿನ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ವತಿಯಿಂದ ವಾಹನ ವ್ಯವಸ್ಥೆ ಇರುತ್ತದೆ. ಮಕ್ಕಳಿಗೆ ಉತ್ತಮವಾದ ವಸತಿ ಮತ್ತು ಆರೋಗ್ಯಕರವಾದ ಆಹಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇಲ್ಲಿ ಕಲಿಕೆಗೆ ಪೂರಕವಾದ ವಾತಾವರಣವಿದ್ದು, ಈಗಾಗಲೇ ದಾವಣಗೆರೆ ಸೇರಿದಂತೆ ಬೆಂಗಳೂರು, ಮೈಸೂರು, ಕೋಲಾರ, ಕೊಟ್ಟೂರು, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ಇನ್ನೂ ಮುಂತಾದ ಕಡೆಯಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಅತ್ಯಾಧುನಿಕ ಮನೋವೈಜ್ಞಾನಿಕ ವಿಧಾನಗಳನ್ನು ಅಳವಡಿಸಿ, ಎನ್ಎಲ್ ಪಿ ವಿಧಾನ ಅಲ್ಟ್ರಾ ಕನ್ಸರ್ಟೇಷನ್, ಫೋಟೋಗ್ರಫಿಕ್ ಮೆಮೊರಿ ಇತರೆ ಹತ್ತು ವಿವಿಧ ವಿಧಾನಗಳಿಂದ ಮಕ್ಕಳಲ್ಲಿ ಈ ಅಸಾಧಾರಣ ನೆನಪಿನ ಶಕ್ತಿ ಹಾಗೂ ಮಿಂಚಿನ ಓದಿನ ಸಾಮರ್ಥ್ಯ ಬೆಳೆಸುವಲ್ಲಿ ಸಹಕಾರಿಯಾಗಿವೆ. ಇದರಿಂದ ಮಕ್ಕಳ ಅಂಕಗಳಿಕೆಯೂ ಹೆಚ್ಚಾಗುತ್ತದೆ. ಇದರೊಂದಿಗೆ ಪರಿಣಾಮಕಾರಿ ಎನ್.ಎಲ್.ಪಿ ತಂತ್ರಗಳ ಮೂಲಕ ಮಕ್ಕಳಲ್ಲಿ ಯಾವುದೇ
ವಿಷಯದ ಕುರಿತು ಇರುವ ಅನಗತ್ಯ ಭಯವನ್ನು ತಗೆದುಹಾಕಿ ಆತ್ಮವಿಶ್ವಾಸವನ್ನು ಹೆಚ್ಚಿಸಲಾಗುವುದು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಈ ಸೂಪರ್ ಟ್ರೈನ್ ತರಬೇತಿ ಎಲ್ಲಾ ಪೋಷಕರಿಂದ ಅಪಾರ ಮೆಚ್ಚುಗೆ ಗಳಿಸಿ ಮಕ್ಕಳಲ್ಲಿ ಅದ್ಭುತ ಬೆಳವಣಿಗೆ ಮತ್ತು ಆತ್ಮವಿಶ್ವಾಸ ಮೂಡಿಸಿದೆ ಎಂದರು.
ಈ ತರಬೇತಿಗೆ ಸೇರುವ ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು 8073054295 ಈ ನಂಬರಿಗೆ ವಾಟ್ಸ್ ಆಪ್ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ತರಬೇತಿಯನ್ನು ಟ್ರೈನರ್ ಗಳಾದ ಡಾ. ಜಯಂತ್, ಗಾಯಿತ್ರಿ, ಅನುರಾಧ ಅವರು ನಡೆಸಿಕೊಡಲಿದ್ದಾರೆ. ದಾವಣಗೆರೆಯ ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲವಾಗಲಿದೆ. ಈಗಾಗಲೇ 32 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸೂಪರ್ ಬ್ರೈನ್ ಟ್ರೈನರ್ ಗಳಾದ ಗಾಯಿತ್ರಿ ಚಿಮ್ಮಡ, ಅನುರಾಧ ಹಾಜರಿದ್ದರು.