SUDDIKSHANA KANNADA NEWS/ DAVANAGERE/ DATE:12-08-2024
ದಾವಣಗೆರೆ: ಭದ್ರಾ ಡ್ಯಾಂನಿಂದ ನೀರು ಹರಿಸಬೇಡಿ ಎಂಬ ರೈತರ ಮನವಿಗೆ ಭದ್ರಾ ಡ್ಯಾಂನ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಜಲಾಶಯಕ್ಕೆ ಬರುತ್ತಿರುವ ಒಳಹರಿವಿಗಿಂತ ಹೆಚ್ಚು ಹೊರ ಹರಿವು ಇದ್ದು, ರೈತರು ಕೆರಳುವಂತೆ ಮಾಡಿದೆ.
ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ 180.3 ಅಡಿ ಆಗಿದೆ. ಒಳಹರಿವು 7683 ಕ್ಯೂಸೆಕ್ ಇದ್ದರೆ, ಹೊರ ಹರಿವು 8841 ಕ್ಯೂಸೆಕ್ ಇದೆ. ಅಂದರೆ ಸುಮಾರು 1200 ಕ್ಯೂಸೆಕ್ ಹೊರ ಹರಿವು ಹೆಚ್ಚಾಗಿದೆ. ಇದರಿಂದಾಗಿ ಭದ್ರಾ ಡ್ಯಾಂ ನೀರಿನ ಮಟ್ಟ ಕುಸಿತ ಕಂಡಿದೆ.
ಕಳೆದ ಹತ್ತು ದಿನಗಳಿಂದ ಭದ್ರಾ ಜಲಾನಯನ, ಭದ್ರಾ ಹಿನ್ನೀರು ಪ್ರದೇಶದಲ್ಲಿ ಮಳೆ ಕುಂಠಿತಗೊಂಡಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವು ಕಡಿಮೆ ಆಗಿದೆ. ಭದ್ರಾ ಡ್ಯಾಂ 184 ಅಡಿ ತುಂಬಿದ ನಂತರ ನೀರು ಹರಿಸಬೇಕು ಎಂಬ ರೈತರ ಒತ್ತಾಯಕ್ಕೆ ಮನ್ನಣೆ ಸಿಗುತ್ತಿಲ್ಲ. ಇದರಿಂದಾಗಿ ರೈತರು ಆಕ್ರೋಶಗೊಳ್ಳುವಂತೆ ಮಾಡಿದೆ.
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 180.3 ಅಡಿ ನೀರು ಸಂಗ್ರಹವಿದೆ. ಡ್ಯಾಂನಿಂದ 8841 ಕ್ಯೂಸೆಕ್ ಹೊರ ಹರಿವಿದೆ. ಜಲಾಶಯಕ್ಕೆ ಇನ್ನೂ 5.7 ಅಡಿ ನೀರು ಬೇಕಿದ್ದರೂ ಅಧಿಕಾರಿಗಳೂ ಮಾತ್ರ ಭದ್ರಾ ಅಚ್ಚುಕಟ್ಟುದಾರ ರೈತರ ಹಿತ ಕಾಪಾಡದೇ ನೀರು ಹರಿಸುತ್ತಿರುವುದು ಸರಿಯಲ್ಲ. ಕೂಡಲೇ ಕ್ರಸ್ಟ್ ಗೇಟ್ ಮೂಲಕ ಹರಿಸಲಾಗುತ್ತಿರುವ ನೀರು ಬಂದ್ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಜುಲೈ ತಿಂಗಳಿನಲ್ಲಿ ಅಬ್ಬರಿಸಿ ಬೊಬ್ಬಿರಿದದ್ದ ವರುಣ ಶಾಂತವಾಗಿದ್ದಾನೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ತಿಂಗಳು ಉತ್ತಮ ಮಳೆಯಾಗಿತ್ತು. ಆದ್ರೆ, ಕಳೆದ ವಾರದಿಂದೀಚೆಗೆ ಮಳೆ ಕುಸಿತ ಕಂಡಿದೆ. ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದ್ದು, ಹೊರ ಹರಿವು ಜಾಸ್ತಿಯಾಕೆ ಎಂಬ ಪ್ರಶ್ನೆ ಎದ್ದಿದೆ.
ಭದ್ರಾ ಜಲಾಶಯದಿಂದ ನೀರು ಹೊರಗಡೆ ಬಿಡುತ್ತಿರುವ ಕಾರಣ ಜಲಾಶಯದ ನೀರಿನ ಮಟ್ಟ ನಿಧಾನವಾಗಿ ಏರುಮುಖವಾಗುತ್ತಿದೆ. ಕೃಷಿ ಚಟುವಟಿಕೆಗಳು ಒಂದೆಡೆ ಗರಿಗೆದರಿದ್ದರೆ, ಮತ್ತೊಂದೆಡೆ ಜಲಾಶಯಕ್ಕೆ ನೀರು ಹೆಚ್ಚು ಬರಲಿ, ಮತ್ತಷ್ಟು ಸಂಗ್ರಹವಾಗಲಿ ಎಂಬ ಆಶಯ ರೈತರದ್ದಾಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದ್ದು, ಈ ಬಾರಿ ಭಾರೀ ಮಳೆಯಾದ ಪರಿಣಾಮ ಜಲಾಶಯವು ಜುಲೈ ತಿಂಗಳಿನಲ್ಲಿ ಭರ್ತಿಯಾಗಿತ್ತು. ಇದರಿಂದಾಗಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿತ್ತು. ಈಗ ಒಳಹರಿವು ಕಡಿಮೆ ಆಗಿದ್ದು, ಹೊರ ಹರಿವು ಕಡಿಮೆಯಾಗಿದೆ. ಇದರಿಂದಾಗಿ ತಲೆದೋರಿದ್ದ ಪ್ರವಾಹ ಭೀತಿ ದೂರವಾಗಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: 12-08-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 180.3 ಅಡಿ
-
ಕೆಪಾಸಿಟಿ: 64.478 ಟಿಎಂಸಿ
-
ಒಳಹರಿವು: 7683 ಕ್ಯೂಸೆಕ್
-
ಕ್ರಸ್ಟ್ ಗೇಟ್ ಹೊರಹರಿವು: 3000 ಕ್ಯೂಸೆಕ್
-
ಭದ್ರಾ ಎಡದಂಡೆ ನಾಲೆ: 380 ಕ್ಯೂಸೆಕ್
-
ಭದ್ರಾ ಬಲದಂಡೆ ನಾಲೆ: 2650 ಕ್ಯೂಸೆಕ್
-
ಅಪ್ಪರ್ ಭದ್ರಾ ಪ್ರಾಜೆಕ್ಟ್: 700 ಕ್ಯೂಸೆಕ್
-
ಒಟ್ಟು ಹೊರ ಹರಿವು: 8841 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನ ಮಟ್ಟ: 167 ಅಡಿ
-
ಕಳೆದ ವರ್ಷ ಇದೇ ದಿನ ಒಳಹರಿವು: 2702 ಕ್ಯೂಸೆಕ್