ಅಪರಿಚಿತ ವ್ಯಕ್ತಿಯೊಬ್ಬ ಮರ ಕತ್ತರಿಸುವ ಯಂತ್ರದಿಂದ ಮನೆಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದ ದುರ್ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕ್ಯಾತನ ಹಳ್ಳಿಯಲ್ಲಿ ನಡೆದಿದೆ.
ಕ್ಯಾತನಹಳ್ಳಿಯ ರಮೇಶ್ ಎಂಬುವರ ತೋಟದ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದು, ಈ ವೇಳೆ ರಮೇಶ್ ಹಾಗೂ ಅವರ ಪತ್ನಿ ಮನೆಯ ಒಳಭಾಗದಲ್ಲಿದ್ದು ಮಗ ಸಂತೋಷ್ ಹಾಲು ಹಾಕಲು ಡೈರಿಗೆ ತೆರಳಿದ್ದ. ಆಗ ಮನೆಯ ಬಾಗಿಲು ತಟ್ಟಿದ ಶಬ್ಧ ಕೇಳಿ ಬಾಗಿಲು ತೆರೆದ ಯಶೋಧಮ್ಮ, ಬ್ಯಾಗ್ ನಿಂದು ಮರ ಕತ್ತರಿಸುವ ಯಂತ್ರವನ್ನ ಹಿಡಿದು ನಿಮಗೆ ಅರ್ಡರ್ ಬಂದಿದೆ ತಗೋಳಿ ಎಂದು ಹೇಳುತ್ತಾನೆ. ಆಗ ಯಶೋಧಮ್ಮ ನಾವು ಯಾವುದೇ ಅರ್ಡರ್ ಅನ್ನು ಮಾಡಿಲ್ಲ ಎಂದು ಅವನನ್ನು ಅಲ್ಲಿಂದ ಕಳಿಸಲು ಮುಂದಾಗುತ್ತಾರೆ.
ಅ ಸಮಯದಲ್ಲಿ ಮರ ಕತ್ತರಿಸುವ ಯಂತ್ರವನ್ನು ಆನ್ ಮಾಡುವ ಮೂಲಕ ಯಶೋಧಮ್ಮರ ಮುಖದ ಭಾಗಕ್ಕೆ ಹಿಡಿದು ವಿಕೃತಿ ಮೆರೆಯುತ್ತಾನೆ.ಯಶೋಧಮ್ಮನ ಕೆನ್ನೆ ಕತ್ತರಿಸಿ ತೀವ್ರವಾಗಿ ರಕ್ತ ಹೋಗಿದ್ದ ಕಾರಣ ಯಶೋಧಮ್ಮ ಸ್ಥಳದಲ್ಲಿಯೇ ಕುಸಿದು ಬೀಳುತ್ತಾರೆ. ನಂತರ ಮನೆಯ ಒಳಭಾಗಕ್ಕೆ ಹೋದ ಆ ಕಿರಾತಕ ಅಲ್ಲಿ ಮಲಗಿದ್ದ ರಮೇಶ್ ಎಂಬುವವರ ಕುತ್ತಿಗೆಗೆ ಯಂತ್ರವನ್ನು ಹಿಡಿಯುತ್ತಾನೆ. ನಂತರ ರಮೇಶ್ ಅವರ ಕೈ ಭಾಗವನ್ನೆಲ್ಲಾ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುತ್ತಾನೆ, ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಯಶೋಧಮ್ಮ ಎಚ್ಚರವಾಗಿ ಮನೆಯ ಬಾಗಲಿನ್ನು ಲಾಕ್ ಮಾಡಿ ಅಕ್ಕ ಪಕ್ಕದ ಸ್ಥಳಿಯರನ್ನು ಕರೆಯುತ್ತಾರೆ, ಅ ಸಂದರ್ಭದಲ್ಲಿ ಮನೆಯ ಬಾಗಿಲನ್ನು ಸಹ ಯಂತ್ರದ ಸಹಾಯದಿಂದ ಕ್ಯೊಯಲು ಯತ್ನಿಸುತ್ತಾನೆ.
ಅತನನ್ನು ಹಿಡಿಯುವಲ್ಲಿ ಸ್ಥಳಿಯರು ಯಶಸ್ವಿಯಾಗಿದ್ದು ಹಿಗ್ಗಾ ಮುಗ್ಗಾ ತಳಿಸಿ ಪೋಲಿಸರ ವಶಕ್ಕೆ ನೀಡಿದ್ದಾರೆ. ಸದ್ಯ ಶ್ರೀರಂಗಪಟ್ಟಣ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.ಇನ್ನು ಗಾಯಗೊಂಡ ಯಶೋಧಮ್ಮರನ್ನು ಮೈಸೂರ್ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.