SUDDIKSHANA KANNADA NEWS/ DAVANAGERE/ DATE:21-10-2023
ಬೆಂಗಳೂರು (Bangalore): ದಕ್ಷಿಣ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಕಾಂಗ್ರೆಸ್ ಸರ್ಕಾರದ ನಾಲ್ಕು ತಿಂಗಳ ಆಡಳಿತ ಮರಣಶಾಸನವಾಗಿದೆ. ಕೈ ಸರ್ಕಾರ ಹೇರುತ್ತಿರುವ ನಿರಂತರ
ಲೋಡ್ ಶೆಡ್ಡಿಂಗ್ ಹಾಗೂ ಅವೈಜ್ಞಾನಿಕ ದರ ಏರಿಕೆಯಿಂದ ಪೀಣ್ಯ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ಶೇ. 30 ಕ್ಕಿಂತಲೂ ಅಧಿಕ ನಷ್ಟವಾಗುತ್ತಿದ್ದು, ವಿಪರೀತ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು ಮಾತ್ರವಲ್ಲದೆ, ರಾಜ್ಯದಿಂದಲೇ ವಲಸೆ ಹೋಗುವತ್ತ ಚಿಂತಿಸಿವೆ ಎಂದು ರಾಜ್ಯ ಬಿಜೆಪಿ ಘಟಕವು ಕಿಡಿಕಾರಿದೆ.
Read Also This Story:
ಸುಳ್ಳು, ದ್ವೇಷದ ಸುದ್ದಿಗಳು ಜಿಡಿಪಿಗೆ ಮಾರಕ ಕಠಿಣ ಕ್ರಮ ಕೈಗೊಳ್ಳಿ: ಪೊಲೀಸ್ ಇಲಾಖೆಗೆ ಸಿಎಂ ಖಡಕ್ ಸೂಚನೆ
ಬಡವರ ಬದುಕನ್ನು ಬಂಗಾರಗೊಳಿಸುತ್ತೇನೆಂದು ಸುಳ್ಳು ಹೇಳಿ ಅಧಿಕಾರಕ್ಕೇರಿದ ಕಾಂಗ್ರೆಸ್, ಬಡವರ ಬದುಕನ್ನು ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದ್ದೇ ಕಾಂಗ್ರೆಸ್ನ ಸಾಧನೆ ಎಂದು ಟೀಕಿಸಿದೆ.
ಕಾಂಗ್ರೆಸ್ ಬಂದಿದೆ ಆದರೆ ಜನರಿಗೆ ಮಾತ್ರ ಏನೂ ಬರುತ್ತಿಲ್ಲ, ಸಿಗುತ್ತಿಲ್ಲ, ಕೊಡುತ್ತಿಲ್ಲ, ತಲುಪುತ್ತಲೂ ಇಲ್ಲ…! ಗೃಹ ಜ್ಯೋತಿ ಬರಲಿದೆ ಅಂದರು, ಈಗ ವಿದ್ಯುತ್ತೇ ಕೊಡುತ್ತಿಲ್ಲ..! ಗೃಹ ಲಕ್ಷ್ಮಿ ಅಂದರು, ಎರಡನೇ ತಿಂಗಳಿಂದ ಹಣವನ್ನೇ ಹಾಕಿಲ್ಲ..! ಅನ್ನಭಾಗ್ಯ ಅಂದರು, ಮೋದಿ ಸರ್ಕಾರದ ಅಕ್ಕಿನೂ ಕಾಂಗ್ರೆಸ್ಸಿಗರೇ ತಿಂದರು..! ಉಚಿತ ಬಸ್, ಶಕ್ತಿ ಯೋಜನೆ ಅಂದರು, ಈಗ ಬಸ್ಗಳನ್ನೇ ಬಿಡುತ್ತಿಲ್ಲ..! ಯುವ ನಿಧಿ ಅಂದರು, ಅದು ಜಾರಿಗೆ ಬರಲೇ ಇಲ್ಲ..! ಅಂಗನವಾಡಿ ಕಾರ್ಯಕರ್ತೆಯರಿಗೆ ರೂ. 10 ಸಾವಿರ ಅಂದರು, ಈಗ ಸಂಬಳವನ್ನೇ ಕೊಡುತ್ತಿಲ್ಲ..! ಇಂದಿರಾ ಕ್ಯಾಂಟೀನ್ ಸಂಖ್ಯೆ ಹೆಚ್ಚಳ ಅಂದರು, ಈಗ ಇದ್ದವೂ ಬಂದ್ ಆಗುತ್ತಿವೆ..! ಅಕ್ಕಿ ಇಲ್ಲ ಜನರಿಗೆ ದುಡ್ಡು ತಿನ್ನಿ ಅಂದರು, ಈಗ ದುಡ್ಡನ್ನೂ ಕೊಡುತ್ತಿಲ್ಲ..! ಕಾಂಗ್ರೆಸ್ ಬಂದಿದೆ ಕನ್ನಡಿಗರ ಕಿವಿ ಮೇಲೆ ಲಾಲ್ ಬಾಗ್ ಅನ್ನೇ ಇಟ್ಟಿದೆ..! ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ.