SUDDIKSHANA KANNADA NEWS/ DAVANAGERE/ DATE:13-12-2024
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಎಲ್ಲರಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಹಲವರಿಗೆ ಜಾಮೀನು ನಿರಾಕರಿಸಲಾಗಿತ್ತು. ಆದ್ರೆ, ಅಂತಿಮವಾಗಿ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡರಿಗೆ ಬಿಗ್ ರಿಲೀಫ್ ಸಿಕ್ಕಿದೆ. ರೆಗ್ಯುಲರ್ ಬೇಲ್ ಮಂಜೂರು ಆಗಿರುವುದರಿಂದ ಎಲ್ಲರೂ ನಿರಾಳರಾಗಿದ್ದಾರೆ.
ಏಳು ತಿಂಗಳ ಬಳಿಕ ದರ್ಶನ್ ತೂಗುದೀಪ ಅವರಿಗೆ ಜಾಮೀನು ಮಂಜೂರಾಗಿದೆ. ಏಳು ಆರೋಪಿಗಳಿಗೆ ಆರು ತಿಂಗಳ ಬಳಿಕ ಜಾಮೀನು ಮಂಜೂರಾಗಿದೆ.