ಶಾಮ್ಲಿ (ಉತ್ತರ ಪ್ರದೇಶ): ಪ್ರೀತಿಯ ಜಾಲಕ್ಕೆ ಬಿದ್ದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ದೇಶಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಯುವಕ ಆಯುಷ್ ಮಲಿಕ್, ಇದೀಗ ಮತ್ತೆ ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ (ಸನಾತನ ಧರ್ಮ) ಮರಳಿದ್ದಾನೆ.
ತನ್ನ ಮತಾಂತರದಿಂದ ಹೆತ್ತ ಪೋಷಕರಿಗೆ ಉಂಟಾಗಿದ್ದ ತೀವ್ರ ಮಾನಸಿಕ ನೆಮ್ಮದಿಗೆಡಿಸಿರುವುದನ್ನು ಕಂಡು ತಾನು ಈ ನಿರ್ಧಾರ ಕೈಗೊಂಡಿರುವುದಾಗಿ ಆಯುಷ್ ತಿಳಿಸಿದ್ದಾನೆ.
ಸ್ವಧರ್ಮಕ್ಕೆ ಮರಳಿದ ಬಳಿಕ ಹಿಂದೂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಪೂಜೆ ಸಲ್ಲಿಸುತ್ತಿರುವ ಆಯುಷ್ ಮಲಿಕ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ನಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ನನ್ನ ಹೆಸರನ್ನು ಬದಲಾಯಿಸಿಕೊಂಡಿದ್ದೆ. ಆದರೆ ನನ್ನ ಹೆತ್ತವರ ನೋವನ್ನು ನೋಡಿ, ನನ್ನ ಕುಟುಂಬದ ಹಿತದೃಷ್ಟಿಯಿಂದ ಈಗ ಸ್ವಂತ ಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮರಳುತ್ತಿದ್ದೇನೆ. ಇನ್ನು ಮುಂದೆ ನನ್ನ ಪೋಷಕರ ಆರೈಕೆಯಲ್ಲೇ ಇರಲು ಬಯಸುತ್ತೇನೆ” ಎಂದು ವಿಡಿಯೋದಲ್ಲಿ ಆಯುಷ್ ಹೇಳಿಕೆ ನೀಡಿದ್ದಾನೆ.
ಪ್ರಕರಣದ ಹಿನ್ನೆಲೆ ಏನು?
ಬಿ-ಫಾರ್ಮಾ ಪದವೀಧರನಾಗಿದ್ದ ಆಯುಷ್, 2018ರಲ್ಲಿ ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗ ಫಿಸಿಯೋಥೆರಪಿಸ್ಟ್ ಚಾಂದಿನಿ ಖುರೇಷಿ ಎಂಬಾಕೆಯ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ತಿರುಗಿತ್ತು. ತದನಂತರ ಚಾಂದಿನಿ ಮತ್ತು ಆಕೆಯ ಕುಟುಂಬದವರು ಆಯುಷ್‌ನನ್ನು ಮತಾಂತರಗೊಳ್ಳುವಂತೆ ಪ್ರಭಾವ ಬೀರಿದ್ದರು ಎಂದು ಆರೋಪಿಸಲಾಗಿದೆ.
2023ರಲ್ಲಿ ಆಯುಷ್‌ನನ್ನು ದೆಹಲಿಗೆ ಕರೆದೊಯ್ದು ‘ಮೊಹಮ್ಮದ್ ಅಲಿ’ ಎಂದು ಹೆಸರಿಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ, ನಿಕಾಹ್ ಮಾಡಿಸಲಾಗಿತ್ತು ಎನ್ನಲಾಗಿದೆ. ಮತಾಂತರದ ನಂತರ ಆಯುಷ್ ಗಡ್ಡ ಬಿಡುವುದು, ಐದು ಹೊತ್ತು ನಮಾಜ್ ಮಾಡುವುದು ಸೇರಿದಂತೆ ಇಸ್ಲಾಮಿಕ್ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದ.
ಕೋಟಿ ಕೋಟಿ ಆಸ್ತಿಗೆ ಸಂಚು ರೂಪಿಸಿದ್ದ ಆರೋಪ:
ಆಯುಷ್ ತಂದೆ ದೇವರಾಜ್ ಮಲಿಕ್ ಅವರು, ತನ್ನ ಮಗನನ್ನು ಬ್ರೈನ್‌ವಾಶ್ ಮಾಡಿ ಮತಾಂತರಗೊಳಿಸಿರುವುದು ನಮ್ಮ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಹಸ್ತಾಂತರಿಸಿಕೊಳ್ಳಲು ರೂಪಿಸಿದ ವ್ಯವಸ್ಥಿತ ಪಿತೂರಿ ಎಂದು ಆರೋಪಿಸಿ ಉತ್ತರ ಪ್ರದೇಶದ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆಯಡಿ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಯುಪಿ ಪೊಲೀಸರು ಇತ್ತೀಚೆಗಷ್ಟೇ ಚಾಂದಿನಿ ಖುರೇಷಿ ಮತ್ತು ಆಕೆಯ ತಂದೆ ಇಸ್ಲಾಂ ಖುರೇಷಿಯನ್ನು ಬಂಧಿಸಿದ್ದರು. ಸದ್ಯ ಆಯುಷ್ ತನ್ನ ಕುಟುಂಬದವರ ಸಮ್ಮುಖದಲ್ಲಿ ಮರಳಿ ಸನಾತನ ಧರ್ಮಕ್ಕೆ ಸೇರ್ಪಡೆಯಾಗುವುದರೊಂದಿಗೆ ಈ ವಿವಾದಾತ್ಮಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.
- Ayush Malik
- Ayush Malik return to Hinduism
- Chandni Qureshi arrested
- Ghar Wapsi UP
- Mohammad Ali conversion
- religious conversion controversy
- Shamli conversion case
- UP anti conversion law
- Uttar Pradesh news
- ಆಯುಷ್ ಮಲಿಕ್
- ಉತ್ತರ ಪ್ರದೇಶ ಮತಾಂತರ ಪ್ರಕರಣ
- ಚಾಂದಿನಿ ಖುರೇಷಿ
- ಮತಾಂತರ ನಿಷೇಧ ಕಾಯ್ದೆ
- ಮುಸ್ಲಿಂ ಧರ್ಮದಿಂದ ಮತಾಂತರ
- ಲವ್ ಜಿಹಾದ್ ಆರೋಪ ಯುಪಿ
- ಶಾಮ್ಲಿ ಸುದ್ದಿ
- ಸನಾತನ ಧರ್ಮ
- ಹಿಂದೂ ಧರ್ಮಕ್ಕೆ ವಾಪಸ್





Leave a comment