SUDDIKSHANA KANNADA NEWS/ DAVANAGERE/ DATE:26-11-2024
ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಸಮರ್ಪಕ ವಸೂಲಾತಿಗಾಗಿ ಡೇ-ನಲ್ಮ್ ಅಭಿಯಾನದಡಿ ಮಹಿಳಾ ಸ್ವ-ಸಹಾಯ ಗುಂಪು (ಎಸ್ಹೆಚ್ಜಿ) ಗಳ ಸದಸ್ಯರ ನೇಮಕಾತಿಗಾಗಿ ಆಸಕ್ತಿಯುಳ್ಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಡೇ-ನಲ್ಮ್ ನೊಂದಿಗೆ ನೋಂದಾಯಿಸಿಕೊಂಡ ಆಸಕ್ತ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರುಗಳು ತಮ್ಮ ಆಸಕ್ತಿಯ ಅಭಿವ್ಯಕ್ತಿಯನ್ನು ಡೇ-ನಲ್ಮ್ ಹಿಂಬರಹದೊಂದಿಗೆ www.davanagerecity.mrc.gov.in ವೆಬ್ಸೈಟ್ನಲ್ಲಿ ನಿಗಧಿತ ನಮೂನೆಯಲ್ಲಿ ಡಿಸೆಂಬರ್ 26 ರೊಳಗಾಗಿ ಮಹಾನಗರಪಾಲಿಕೆ ಕಚೇರಿಗೆ ಸಲ್ಲಿಸಬೇಕು.
ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳು ಹೊಂದಿರಬೇಕಾದ ಅರ್ಹತಾ ಮಾನದಂಡ:- ಗುರುತಿನ ಮತ್ತು ವಿಳಾಸದ ದಾಖಲೆಗಳಾದ ಆಧಾರ್ ಕಾರ್ಡ್, ವೋಟರ್ಐಡಿ, ರೇಷನ್ಕಾರ್ಡ್, ಪಾನ್ ಕಾರ್ಡ್ ನಕಲು ಪ್ರತಿ, ಮಹಿಳಾ ಸ್ವ-ಸಹಾಯ ಸಂಘದವರು ಅನುಬಂಧ-1ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಮಹಿಳಾ ಸ್ವ-ಸಹಾಯ ಸಂಘದ ವಿವರವನ್ನು ಅನುಬಂಧ-2 ರಲ್ಲಿ, ಮಹಿಳಾ ಸ್ವ-ಸಹಾಯ ಸಂಘದ ಆರ್ಥಿಕ ವಿವರವನ್ನು ಅನುಬಂಧ-3 ರಲ್ಲಿ, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರ ವಿದ್ಯಾರ್ಹತೆ ವಿವರವನ್ನು ಅನುಬಂಧ-4 ರಲ್ಲಿ, ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರುವ ಅಂಕಪಟ್ಟಿ, ವರ್ಗಾವಣೆ ಪತ್ರ (ಟಿ.ಸಿ) ಯನ್ನು ಶಾಲೆಯ ಮುಖ್ಯ ಶಿಕ್ಷಕರಿಂದ ದೃಢೀಕರಿಸಿದ ಪ್ರತಿ, ಅಪರಾಧ, ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ ಎಂಬುದರ ಬಗ್ಗೆ ಸ್ಪಷ್ಟಿಕರಣವನ್ನು ಅನುಬಂಧ-5 ರಲ್ಲಿ, ಮಹಿಳಾ ಸ್ವ-ಸಹಾಯ ಸಂಘದ ದೃಢೀಕರಣವನ್ನು ಅನುಬಂಧ-6 ರಲ್ಲಿ ಸಲ್ಲಿಸಬೇಕು ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.