ನವದೆಹಲಿ: ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜು ಆಡಳಿತ ಮಂಡಳಿಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಭಾರಿ ಶಾಕ್ ನೀಡಿದೆ. ನಿಯಮಾವಳಿಗಳನ್ನು ಪಾಲಿಸದ ಹಾಗೂ ಕನಿಷ್ಠ ವಿದ್ಯಾರ್ಥಿಗಳ ದಾಖಲಾತಿ ಇಲ್ಲದ ದೇಶದ ಒಟ್ಟು 58 ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳನ್ನು ಮುಚ್ಚಲು AICTE ಆದೇಶ ಹೊರಡಿಸಿದೆ.
ಕರ್ನಾಟಕದ 2 ಕಾಲೇಜುಗಳು ಬಂದ್:
ಈ ಪಟ್ಟಿಯಲ್ಲಿ ಅತಿ ಹೆಚ್ಚು ಕಾಲೇಜುಗಳು ಉತ್ತರ ಪ್ರದೇಶ (12) ಮತ್ತು ಮಹಾರಾಷ್ಟ್ರ (12) ರಾಜ್ಯಗಳಿಗೆ ಸೇರಿವೆ. ಇನ್ನುಳಿದಂತೆ ಮಧ್ಯಪ್ರದೇಶದಲ್ಲಿ 8, ತೆಲಂಗಾಣ ಮತ್ತು ಪಂಜಾಬ್‌ನಲ್ಲಿ ತಲಾ 4 ಕಾಲೇಜುಗಳು ಮುಚ್ಚುತ್ತಿವೆ. ನೆರೆರಾಜ್ಯಗಳಾದ ಆಂಧ್ರಪ್ರದೇಶದಲ್ಲಿ 3 ಹಾಗೂ ತಮಿಳುನಾಡಿನಲ್ಲಿ 2 ಕಾಲೇಜುಗಳು ಬಂದ್ ಆಗುತ್ತಿವೆ. ವಿಶೇಷವೆಂದರೆ, ಕರ್ನಾಟಕದ 2 ಎಂಜಿನಿಯರಿಂಗ್ ಕಾಲೇಜುಗಳಿಗೂ ಈ ಬಾರಿ ಬೀಗ ಬಿದ್ದಿದೆ.
ಈಗ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯವೇನು?
ಕಾಲೇಜುಗಳು ಮುಚ್ಚುತ್ತಿರುವ ಸುದ್ದಿ ಕೇಳಿ ಪ್ರಸ್ತುತ ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು AICTE ಸ್ಪಷ್ಟಪಡಿಸಿದೆ. ಈ ಎಲ್ಲಾ 58 ಕಾಲೇಜುಗಳಿಗೆ ‘ಪ್ರೊಗ್ರೆಸ್ಸಿವ್ ಕ್ಲೋಸರ್’ (Progressive Closure) ಅಡಿಯಲ್ಲಿ ಅನುಮತಿ ನೀಡಲಾಗಿದೆ. ಅಂದರೆ, ಈ ಕಾಲೇಜುಗಳು ಪ್ರಸಕ್ತ ವರ್ಷದಿಂದ ಯಾವುದೇ ಹೊಸ (ಮೊದಲ ವರ್ಷದ) ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತಿಲ್ಲ. ಆದರೆ, ಈಗಾಗಲೇ ದ್ವಿತೀಯ, ತೃತೀಯ ಮತ್ತು ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಮುಗಿಯುವವರೆಗೆ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಮತ್ತು ಪದವಿ ಪಡೆಯಲು ಪೂರ್ಣ ಅವಕಾಶವಿರುತ್ತದೆ.
ಕಾಲೇಜುಗಳ ಮುಚ್ಚಳಕ್ಕೆ ಕಾರಣಗಳೇನು?
ವಿದ್ಯಾರ್ಥಿಗಳ ಕೊರತೆ: ಕಳೆದ ಕೆಲವು ವರ್ಷಗಳಿಂದ ಈ ಕಾಲೇಜುಗಳಲ್ಲಿ ಶೇಕಡಾ 10 ರಿಂದ 20 ರಷ್ಟು ಸೀಟುಗಳೂ ಭರ್ತಿಯಾಗುತ್ತಿರಲಿಲ್ಲ.
ಅರ್ಹ ಶಿಕ್ಷಕರ ಕೊರತೆ: ಯುಜಿಸಿ ಮತ್ತು ಐಐಸಿಟಿಇ ನಿಯಮಾವಳಿಗಳ ಪ್ರಕಾರ ಇರಬೇಕಾದ ಪಿಎಚ್‌ಡಿ ಹಾಗೂ ಅನುಭವೀ ಪ್ರೊಫೆಸರ್‌ಗಳ ಕೊರತೆ.
ಕಳಪೆ ಮೂಲಸೌಕರ್ಯ: ಲ್ಯಾಬ್‌ಗಳು, ಆಧುನಿಕ ಲೈಬ್ರರಿ ಹಾಗೂ ತಾಂತ್ರಿಕ ಸೌಲಭ್ಯಗಳು ನಿಯಮಾನುಸಾರ ಇಲ್ಲದಿರುವುದು.
ಕಾಲೇಜುಗಳ ಮುಚ್ಚಳದ ಜೊತೆಗೆ ದೇಶಾದ್ಯಂತ ಬೇಡಿಕೆ ಕಳೆದುಕೊಂಡಿರುವ ಸುಮಾರು 950ಕ್ಕೂ ಹೆಚ್ಚು ಹಳೆಯ ಎಂಜಿನಿಯರಿಂಗ್ ಕೋರ್ಸ್‌ಗಳನ್ನು (Courses) ಸಹ ಸ್ಥಗಿತಗೊಳಿಸಲಾಗಿದೆ ಎಂದು ತಾಂತ್ರಿಕ ಶಿಕ್ಷಣ ನಿಯಂತ್ರಣ ಮಂಡಳಿ ತಿಳಿಸಿದೆ.
- AICTE college closure
- AICTE latest guidelines
- AICTE ಕಾಲೇಜು ಮುಚ್ಚಳ
- discontinued courses AICTE
- engineering colleges closed 2026
- engineering colleges shut down in karnataka
- maharashtra up engineering colleges closed
- progressive closure meaning
- technical education india news
- ಇಂಜಿನಿಯರಿಂಗ್ ಸೀಟುಗಳ ಕೊರತೆ
- ಎಂಜಿನಿಯರಿಂಗ್ ಕಾಲೇಜುಗಳು ಬಂದ್
- ಕರ್ನಾಟಕದ ಎಂಜಿನಿಯರಿಂಗ್ ಕಾಲೇಜುಗಳು
- ತಾಂತ್ರಿಕ ಶಿಕ್ಷಣ ನಿಯಂತ್ರಣ ಮಂಡಳಿ
- ಪ್ರೊಗ್ರೆಸ್ಸಿವ್ ಕ್ಲೋಸರ್ ನಿಯಮ
- ಭಾರತದಲ್ಲಿ ಎಂಜಿನಿಯರಿಂಗ್ ಕಾಲೇಜು ಕ್ಲೋಸ್
- ಶಿಕ್ಷಣ ಇಲಾಖೆ ಸುದ್ದಿ





Leave a comment