Home ಕ್ರೈಂ ನ್ಯೂಸ್ ಥೂ… ಇವನೆಂಥಾ ಗುರು: ಮಗುವಿನ ತಲೆ ಮೇಲೆ ‘ತಬಲಾ’ದಂತೆ ಬಾರಿಸಿ ವಿಡಿಯೋ ಹಾಕಿದ್ಜ ಶಿಕ್ಷಕ ಅಮಾನತು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಥೂ… ಇವನೆಂಥಾ ಗುರು: ಮಗುವಿನ ತಲೆ ಮೇಲೆ ‘ತಬಲಾ’ದಂತೆ ಬಾರಿಸಿ ವಿಡಿಯೋ ಹಾಕಿದ್ಜ ಶಿಕ್ಷಕ ಅಮಾನತು!

Share
ಮಗು
Share

ಉತ್ತರ ಪ್ರದೇಶ: ತರಗತಿ ಕೊಠಡಿಯಲ್ಲಿ ಮಗುವಿನ ತಲೆಯನ್ನು ‘ತಬಲಾ’ ತರಹ ಬಾರಿಸಿ, ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕನನ್ನು ಶಿಕ್ಷಣ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

ಇಟಾವಾದ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿನೇಶ್ ಕುಮಾರ್ ಮಾಥುರ್ ಅಮಾನತಾದ ಶಿಕ್ಷಕ. ನೆreplacement ನೆಲದ ಮೇಲೆ ಕುಳಿತಿದ್ದ ಮಗುವಿನ ತಲೆಯ ಮೇಲೆ ಶಿಕ್ಷಕ ದಿನೇಶ್ ಕುಮಾರ್ ಜೋರಾಗಿ ತಬಲಾ ಬಾರಿಸುವಂತೆ ತಟ್ಟುತ್ತಾ ವಿಕೃತವಾಗಿ ನಕ್ಕಿದ್ದಾರೆ. ಈ ವೇಳೆಯಲ್ಲಿ ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ಕೂಡ ನಕ್ಕಿದ್ದು, ಈ ಸಂಪೂರ್ಣ ದೃಶ್ಯವನ್ನು ಶಿಕ್ಷಕ ವೀಡಿಯೋ ಮಾಡಿಸಿಕೊಂಡು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದರು.

ಅಶಿಸ್ತಿನ ವರ್ತನೆ: ಶಾಲಾ ಕೊಠಡಿಯಲ್ಲಿ ಮಗುವಿನೊಂದಿಗೆ ವಿಕೃತವಾಗಿ ವರ್ತಿಸಿ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ತೀವ್ರ ಅಶಿಸ್ತು ಎಂದು ಪರಿಗಣಿಸಲಾಗಿದೆ.

ತಕ್ಷಣದ ಅಮಾನತು: ವೀಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ (BSA) ಡಾ. ರಾಜೇಶ್ ಕುಮಾರ್ ಶಿಕ್ಷಕ ದಿನೇಶ್ ಕುಮಾರ್ ಮಾಥುರ್ ಅವರನ್ನು ಅಮಾನತುಗೊಳಿಸಿದ್ದಾರೆ.

ಇಲಾಖಾ ತನಿಖೆ: ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಸಮಗ್ರ ತನಿಖೆಗೆ ಆದೇಶಿಸಿದ್ದು, ತನಿಖಾ ವರದಿ ಬಂದ ನಂತರ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆಗೆ ಗುರಿಯಾಗಿದ್ದು, ಶಿಕ್ಷಕನ ವಿರುದ್ಧ ಶಿಸ್ತುಕ್ರಮ ಕೈಗೊಂಡಿರುವುದಕ್ಕೆ ಸಾರ್ವಜನಿಕರು ಹಾಗೂ ಪೋಷಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles