Home ಕ್ರೈಂ ನ್ಯೂಸ್ ಫೇಸ್‌ಬುಕ್‌ನಲ್ಲಿ ‘ಪಾಯಲ್’ ಸೌಂದರ್ಯಕ್ಕೆ ಬಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿಗೆ 24 ಲಕ್ಷ ರೂ. ವಂಚನೆ: 1 ಲಕ್ಷ ರೂ. ಪಡೆಯುವಾಗ ಸಿಕ್ಕಿಬಿದ್ದ ಆರೋಪಿ, ನಕಲಿ ಪೊಲೀಸರ ಜಾಲ ಪತ್ತೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಫೇಸ್‌ಬುಕ್‌ನಲ್ಲಿ ‘ಪಾಯಲ್’ ಸೌಂದರ್ಯಕ್ಕೆ ಬಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿಗೆ 24 ಲಕ್ಷ ರೂ. ವಂಚನೆ: 1 ಲಕ್ಷ ರೂ. ಪಡೆಯುವಾಗ ಸಿಕ್ಕಿಬಿದ್ದ ಆರೋಪಿ, ನಕಲಿ ಪೊಲೀಸರ ಜಾಲ ಪತ್ತೆ!

Share
ಬ್ಯಾಂಕ್ ಉದ್ಯೋಗಿ
Share

ಅಹಮದಾಬಾದ್: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸುಂದರಿ ಹೆಸರಿನಲ್ಲಿ ಪರಿಚಯವಾದ ಮಹಿಳೆಯೊಬ್ಬಳ ಮಾತು ನಂಬಿ ಖಾಸಗಿ ಭೇಟಿಗೆ ತೆರಳಿದ್ದ 63 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ಭಾರಿ ಹಣ ಕಳೆದುಕೊಂಡಿದ್ದಾರೆ. ನಕಲಿ ಡ್ರಗ್ಸ್ ಪ್ರಕರಣದ ಬೆದರಿಕೆಯೊಡ್ಡಿ ಬ್ಲಾಕ್‌ಮೇಲ್ ಮಾಡಿದ ಖದೀಮರ ಗುಂಪೊಂದು ವೃದ್ಧನಿಂದ ಒಟ್ಟು 24 ಲಕ್ಷ ರೂಪಾಯಿ ಎಗರಿಸಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನ ಸ್ಯಾಟಲೈಟ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಕಳೆದ 2025ರ ಅಕ್ಟೋಬರ್ ತಿಂಗಳಿನಲ್ಲಿ ಬಾಧಿತ ವೃದ್ಧನಿಗೆ ‘ಪಾಯಲ್’ ಹೆಸರಿನ ಫೇಸ್‌ಬುಕ್ ಖಾತೆಯಿಂದ ಪರಿಚಯವಾಗಿತ್ತು. ದಿನಕಳೆದಂತೆ ಇಬ್ಬರ ನಡುವೆ ಮಾತುಕತೆ ಬೆಳೆದು, ಇತ್ತೀಚೆಗೆ ಆಕೆ ವೃದ್ಧನನ್ನು ಖಾಸಗಿಯಾಗಿ ಭೇಟಿಯಾಗಲು ಆಹ್ವಾನಿಸಿದ್ದಳು. ನೇಮಿತ ಸ್ಥಳಕ್ಕೆ ವೃದ್ಧ ಕಾರಿನಲ್ಲಿ ತಲುಪುತ್ತಿದ್ದಂತೆ ಪಾಯಲ್ ಕಾರಿನೊಳಗೆ ಕುಳಿತಿದ್ದಾಳೆ. ಆದರೆ ಆಕೆ ಕಾರು ಹತ್ತಿದ ಕೇವಲ 10 ಸೆಕೆಂಡುಗಳಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಕಾರನ್ನು ತಡೆದು ನಿಲ್ಲಿಸಿದ್ದಾರೆ.

ನಕಲಿ ಪೊಲೀಸ್ ಬೆದರಿಕೆ: ಬೈಕ್‌ನಲ್ಲಿ ಬಂದ ಅಪರಿಚಿತರು ತಾವು ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡು, ಪಾಯಲ್ ಎಂಬಾಕೆ ಮಾದಕ ವಸ್ತು (ನಾರ್ಕೋಟಿಕ್ಸ್) ಜಾಲದಲ್ಲಿ ಭಾಗಿಯಾಗಿದ್ದಾಳೆ. ಆಕೆಯ ಜೊತೆ ಇರುವ ನಿನ್ನ ಮೇಲೆಯೂ ಕೇಸ್ ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಹಂತ ಹಂತವಾಗಿ 24 ಲಕ್ಷ ಲೂಟಿ: ನಕಲಿ ಪ್ರಕರಣದ ಭೀತಿಯಲ್ಲಿದ್ದ ವೃದ್ಧರಿಂದ ಹಂತ ಹಂತವಾಗಿ ಬರೋಬ್ಬರಿ 24 ಲಕ್ಷ ರೂಪಾಯಿ ಪಡಕೊಂಡಿದ್ದಾರೆ. ಆ ಬಳಿಕ ಕೆಲವು ದಿನ ಸುಮ್ಮನಿದ್ದ ಆರೋಪಿಗಳು, ಅಕ್ಟೋಬರ್ 5 ರಂದು ಮತ್ತೆ ಕರೆ ಮಾಡಿ ಹೆಚ್ಚುವರಿಯಾಗಿ 7 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.

ಕಾರ್ಯಾಚರಣೆ ಹಾಗೂ ಬಂಧನ: ಸತತ ಕಿರುಕುಳದಿಂದ ಬೇಸತ್ತ ವೃದ್ಧ ತಮ್ಮ ಮಗನಿಗೆ ವಿಷಯ ತಿಳಿಸಿ ಪೊಲೀಸರ ನೆರವು ಪಡೆದಿದ್ದಾರೆ. ಪೊಲೀಸರ ಯೋಜನೆಯಂತೆ ಪಕ್ವಾನ್ ಸರ್ಕಲ್‌ನಲ್ಲಿ 1 ಲಕ್ಷ ರೂ. ನೀಡಲು ಒಪ್ಪಿ ನಕಲಿ ಒಪ್ಪಂದ ಪತ್ರಕ್ಕೆ ಆಗ್ರಹಿಸಿದಾಗ ಇಬ್ಬರು ಪರಾರಿಯಾಗಿದ್ದು, ಹಣದ ಬ್ಯಾಗ್‌ನೊಂದಿಗೆ ಸಿಕ್ಕಿಬಿದ್ದ ಅಲ್ಪೇಶ್ ಸೋಲಂಕಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿರುವ ಪಾಯಲ್, ಕಿಶನ್ ಅಲಿಯಾಸ್ ಕಾನೋ ಪರ್ಮ ಹಾಗೂ ಲಾಲಾ ಎಂಬ ಮೂವರ ಪತ್ತೆಗೆ ಸ್ಯಾಟಲೈಟ್ ಠಾಣೆ ಪೊಲೀಸರು ಬಲೆ ಬೀಸಿದ್ದು, ಈ ಖದೀಮರ ಜಾಲ ಈ ಹಿಂದೆ ಇತರರಿಗೂ ಇದೇ ರೀತಿ ಹನಿಟ್ರಾಪ್ ಮಾಡಿ ವಂಚಿಸಿದೆಯೇ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles