Home ದಾವಣಗೆರೆ ಗಿಡ ಮುಟ್ಟಬೇಡಿ, ಒದ್ದೆ ಸೌದೆ ಹಾಕಿ ಅಳಿಸಬೇಡಿ: ಸಾವಿಗೂ ಮುನ್ನವೇ ಶವಸಂಸ್ಕಾರಕ್ಕೆ 12 ಮಣ ಸೌದೆ ಕಾಯ್ದಿರಿಸಿದ್ದ ನಟ ನಾನಾ ಪಟೇಕರ್!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಗಿಡ ಮುಟ್ಟಬೇಡಿ, ಒದ್ದೆ ಸೌದೆ ಹಾಕಿ ಅಳಿಸಬೇಡಿ: ಸಾವಿಗೂ ಮುನ್ನವೇ ಶವಸಂಸ್ಕಾರಕ್ಕೆ 12 ಮಣ ಸೌದೆ ಕಾಯ್ದಿರಿಸಿದ್ದ ನಟ ನಾನಾ ಪಟೇಕರ್!

Share
ನಾನಾ ಪಟೇಕರ್
Share

ಪಣಜಿ/ಪುಣೆ: ಭಾರತೀಯ ಚಿತ್ರರಂಗದ ಹಿರಿಯ ನಟ, ಪದ್ಮಶ್ರೀ ಪುರಸ್ಕೃತ ನಾನಾ ಪಟೇಕರ್ (75) ಗುರುವಾರ ಮುಂಜಾನೆ ಗೋವಾದ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯ ಮತ್ತು ನೇರ ನುಡಿಯಿಂದಲೇ ಹೆಸರುವಾಸಿಯಾಗಿದ್ದ ನಾನಾ ಪಟೇಕರ್, ಬದುಕಿದ್ದಾಗಲೇ ತಮ್ಮ ಸಾವಿನ ಬಗ್ಗೆ ಸಹಜವಾಗಿ ಮತ್ತು ಹಾಸ್ಯಸ್ಪರ್ಶದೊಂದಿಗೆ ಮಾತನಾಡಿದ್ದರು.

ಶವಸಂಸ್ಕಾರಕ್ಕೆ 12 ಮಣ ಒಣ ಸೌದೆ ಸಿದ್ಧಪಡಿಸಿದ್ದ ನಟ:

2023ರ ಸೆಪ್ಟೆಂಬರ್‌ನಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾನಾ ಪಟೇಕರ್, ತಮ್ಮ ಅಂತ್ಯಸಂಸ್ಕಾರದ ಸಿದ್ಧತೆಯ ಬಗ್ಗೆ ಹಂಚಿಕೊಂಡಿದ್ದರು. “ನನ್ನ ಶವಸಂಸ್ಕಾರಕ್ಕೆ 12 ಮಣ (ಸುಮಾರು 450 ಕೆಜಿ) ಸೌದೆ ಬೇಕಾಗುತ್ತದೆ ಎಂಬುದು ನನಗೆ ಗೊತ್ತು. ಅದೇ ನನ್ನ ಕೊನೆಯ ಆಸ್ತಿ. ಅದರೊಂದಿಗೆ ನಾನು ನಿರ್ಗಮಿಸುತ್ತೇನೆ. ನಾನು ಈಗಾಗಲೇ ನನಗಾಗಿ 12 ಮಣ ಒಣ ಸೌದೆಯನ್ನು ಎತ್ತಿಟ್ಟಿದ್ದೇನೆ. ನನ್ನ ಅಂತ್ಯಸಂಸ್ಕಾರಕ್ಕೆ ಒದ್ದೆ ಸೌದೆಯನ್ನು ಬಳಸಬೇಡಿ” ಎಂದು ಹೇಳಿದ್ದರು.

ಅದಕ್ಕೆ ಕಾರಣ ನೀಡಿದ್ದ ಅವರು, “ಒದ್ದೆ ಸೌದೆ ಉರಿದರೆ ಹೊಗೆ ಬರುತ್ತದೆ, ಅದರಿಂದ ಬಂದವರ ಕಣ್ಣಿನಲ್ಲಿ ನೀರು ಬರಬಹುದು. ಕೊನೆಗೆ ನಾನು ಸಾಯುವಾಗಲೂ ‘ಜನ ನನಗಾಗಿ ಅಳುತ್ತಿದ್ದಾರೆ’ ಎಂಬ ತಪ್ಪು ಕಲ್ಪನೆ ನನಗೆ ಬರಬಾರದು. ಅದಕ್ಕಾಗಿಯೇ ಒಣ ಸೌದೆ ಬಳಸಲು ಹೇಳಿದ್ದೇನೆ” ಎಂದು ಹಾಸ್ಯದ ಧಾಟಿಯಲ್ಲಿ ಮಾರ್ಮಿಕವಾಗಿ ನುಡಿದಿದ್ದರು.

ಅಂತಿಮ ಕ್ಷಣಗಳು ಮತ್ತು ರಾಜ್ಯ ಗೌರವದೊಂದಿಗೆ ಅಂತ್ಯಸಂಸ್ಕಾರ:

ಗುರುವಾರ ಮುಂಜಾನೆ 2:30ರ ಸುಮಾರಿಗೆ ನಾನಾ ಪಟೇಕರ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಗೋವಾದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ 5:20ಕ್ಕೆ ಕೊನೆಯುಸಿರೆಳೆದರು. ಮಹಾರಾಷ್ಟ್ರ ಸರ್ಕಾರವು ಅವರ ಕಲಾ ಸೇವೆಯನ್ನು ಗೌರವಿಸಿ ಸರ್ಕಾರಿ ಗೌರವಗಳೊಂದಿಗೆ  ಅಂತ್ಯಸಂಸ್ಕಾರ ನಡೆಸುವುದಾಗಿ ಘೋಷಿಸಿದೆ. ಪುಣೆ ಸಮೀಪದ ಡೋಂಜೆಯಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಅಂತಿಮ ಕ್ರಿಯೆಗಳು ನೆರವೇರಲಿವೆ.

ಚಿತ್ರರಂಗ ಮತ್ತು ಸಮಾಜಸೇವೆಗೆ ಅಪಾರ ಕೊಡುಗೆ:

‘ಪರಿಂದಾ’, ‘ಕ್ರಾಂತಿವೀರ್’, ‘ಪ್ರಹಾರ್’, ‘ಖಾಮೋಶಿ’ ಮತ್ತು ‘ವೆಲ್ಕಮ್’ ನಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಗಮನಸೆಳೆದಿದ್ದ ನಾನಾ ಪಟೇಕರ್, ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಸಿನಿಮಾದ ಹೊರತಾಗಿ ‘ನಾಮ್ ಫೌಂಡೇಶನ್’ ಮೂಲಕ ಸಂಕಷ್ಟದಲ್ಲಿದ್ದ ರೈತರಿಗೆ ಅಪಾರ ನೆರವು ನೀಡುವ ಮೂಲಕ ಮನೆಮಾತಾಗಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles