Home ದಾವಣಗೆರೆ ನೌಕರಿ ಬಿಟ್ಟು ಕಾರಿನಲ್ಲೇ 3 ಸಾವಿರ ರೂ. ಬಂಡವಾಳದೊಂದಿಗೆ ಕೋಕೋ ವ್ಯಾಪಾರ ಆರಂಭಿಸಿದ ಸಾಫ್ಟ್ ವೇರ್ ಇಂಜಿನಿಯರ್ ದಂಪತಿ: ಈಗ ತಿಂಗಳಿಗೆ 6 ಲಕ್ಷ ರೂ. ಆದಾಯ!
ದಾವಣಗೆರೆಬೆಂಗಳೂರುವಾಣಿಜ್ಯ

ನೌಕರಿ ಬಿಟ್ಟು ಕಾರಿನಲ್ಲೇ 3 ಸಾವಿರ ರೂ. ಬಂಡವಾಳದೊಂದಿಗೆ ಕೋಕೋ ವ್ಯಾಪಾರ ಆರಂಭಿಸಿದ ಸಾಫ್ಟ್ ವೇರ್ ಇಂಜಿನಿಯರ್ ದಂಪತಿ: ಈಗ ತಿಂಗಳಿಗೆ 6 ಲಕ್ಷ ರೂ. ಆದಾಯ!

Share
ನೌಕರಿ
Share

ಅಹಮದಾಬಾದ್: ಸ್ವಂತ ಉದ್ಯಮ ಕಟ್ಟಬೇಕು ಎಂಬ ಕನಸಿನೊಂದಿಗೆ ನೌಕರಿ ತೊರೆದ ಅಹಮದಾಬಾದ್‌ನ ದಂಪತಿಯೊಂದು ತಮ್ಮ ಕಾರಿನಿಂದಲೇ ಕೋಕೋ ಮಾರಾಟ ಮಾಡುವ ಮೂಲಕ ಯಶಸ್ಸಿನ ಹೆಜ್ಜೆ ಇಟ್ಟಿದೆ.

ಶ್ರುತಿ ಜಿಂಜುವಡಿಯಾ ಮತ್ತು ಅವರ ಸಾಫ್ಟ್‌ವೇರ್ ಇಂಜಿನಿಯರ್ ಪತಿ ದರ್ಶನ್ ಜಿಂಜುವಡಿಯಾ ಅವರು ಕೇವಲ 2,000 ರಿಂದ 3,000 ರೂ.ಗಳ ಆರಂಭಿಕ ಬಂಡವಾಳದೊಂದಿಗೆ 2025ರ ಜುಲೈನಲ್ಲಿ ‘ದಿ ಕೋಕೋ ಸ್ಟೇಷನ್’  ಹೆಸರಿನ ಸ್ಟಾರ್ಟ್‌ಅಪ್ ಆರಂಭಿಸಿದ್ದರು. ಇಂದು ದಿನಕ್ಕೆ 150ಕ್ಕೂ ಹೆಚ್ಚು ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಈ ದಂಪತಿ ತಿಂಗಳಿಗೆ ಸುಮಾರು 6 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಯಾವುದೇ ದುಬಾರಿ ಕೆಫೆ ಅಥವಾ ದೊಡ್ಡ ಕಚೇರಿಯಿಲ್ಲದೆ, ಕೇವಲ ಕಾರು ಮತ್ತು ಕೆಲವು ಬಾಟಲಿಗಳೊಂದಿಗೆ ಈ ವ್ಯಾಪಾರ ಆರಂಭಿಸಲಾಗಿದೆ. ಹಗಲಿನಲ್ಲಿ ತಯಾರಿ ನಡೆಸಿ, ದರ್ಶನ್ ಕಚೇರಿ ಮುಗಿಸಿಕೊಂಡು ಬಂದ ಬಳಿಕ ರಾತ್ರಿ 9 ರಿಂದ ಮಧ್ಯರಾತ್ರಿ 12 ರವರೆಗೆ ಕಾರಿನಿಂದಲೇ ಕೋಕೋ ಹಾಗೂ ಕಾಫಿ ಮಾರಾಟ ಮಾಡುತ್ತಾರೆ. ಆರಂಭದಲ್ಲಿ ದಿನಕ್ಕೆ ಕೇವಲ 14 ಬಾಟಲಿಗಳನ್ನು ಮಾರುತ್ತಿದ್ದ ಇವರು, ಇದುವರೆಗೆ 30,000ಕ್ಕೂ ಹೆಚ್ಚು ಬಾಟಲಿಗಳನ್ನು ಮಾರಾಟ ಮಾಡಿ ಒಟ್ಟು 36 ಲಕ್ಷ ರೂ.ಗಳಿಗೂ ಅಧಿಕ ಆದಾಯ ಗಳಿಸಿದ್ದಾರೆ. ನವರಾತ್ರಿ ಸಂದರ್ಭದಲ್ಲಂತೂ ಕೇವಲ 9 ದಿನಗಳಲ್ಲಿ 7,500 ಬಾಟಲಿಗಳನ್ನು ಮಾರಾಟ ಮಾಡುವ ಮೂಲಕ ಭರ್ಜರಿ ವ್ಯಾಪಾರ ನಡೆಸಿದ್ದರು.

ಕನಿಷ್ಠ ಬಂಡವಾಳದಿಂದ ಯಶಸ್ಸು: ಕೇವಲ 3,000 ರೂ. ಬಂಡವಾಳ ಹೂಡಿಕೆ ಮಾಡಿ ಆರಂಭಿಸಿದ ಈ ವಹಿವಾಟು ಇಂದು ತಿಂಗಳಿಗೆ ಬರೋಬ್ಬರಿ 6 ಲಕ್ಷ ರೂ. ವರೆಗೆ ಆದಾಯ ತಂದುಕೊಡುತ್ತಿದೆ.

ಅನನ್ಯ ವ್ಯವಹಾರ ಮಾದರಿ: ದೊಡ್ಡ ಮಳಿಗೆ ಅಥವಾ ಹೋಟೆಲ್ ಇಲ್ಲದೆ, ತಮ್ಮ ಕಾರಿನ ಡಿಕ್ಕಿಯಲ್ಲೇ ರಾತ್ರಿ ವೇಳೆ ಕೋಕೋ ಹಾಗೂ ಕಾಫಿ ಮಾರಾಟ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಆನ್‌ಲೈನ್ ಡೆಲಿವರಿ ಲಭ್ಯ: ‘ದಿ ಕೋಕೋ ಸ್ಟೇಷನ್’ ಉತ್ಪನ್ನಗಳು ಈಗ ಝೊಮಾಟೊ (Zomato) ಆ್ಯಪ್‌ನಲ್ಲೂ ಲಭ್ಯವಿದ್ದು, ಕ್ಲಾಸಿಕ್ ಕೋಕೋ ಬೆಲೆ 120 ರೂ. ಹಾಗೂ ಕೋಕೋ ಕಾಫಿ ಲಭ್ಯವಿದೆ.

ಉದ್ಯೋಗ ತೊರೆದು ಸ್ವಾವಲಂಬನೆಯ ಹಾದಿ ತುಳಿದಿರುವ ಈ ದಂಪತಿಯ ಯಶೋಗಾಥೆಯು ಇಂದಿನ ಯುವ ಉದ್ಯಮಿಗಳಿಗೆ ದೊಡ್ಡ ಸ್ಪೂರ್ತಿಯಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles