SUDDIKSHANA KANNADA NEWS/ DAVANAGERE/ DATE:16-02-2024
ದಾವಣಗೆರೆ: 15 ನೇ ಬಾರಿ ಬಜೆಟ್ ಮಂಡನೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರದ್ದು ಐತಿಹಾಸಿಕ ಹಾಗೂ ಅಭಿವೃದ್ಧಿ ಪರ ಆಯವ್ಯಯ. ಸರ್ವವ್ಯಾಪಿ, ಸರ್ವಸ್ಪರ್ಷಿ ಬಜೆಟ್ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಸಂತಸ ವ್ಯಕ್ತಪಡಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆಯೂ ಎಲ್ಲಾ ವರ್ಗದವರಿಗೂ ಸಮಪಾಲು ಸಮಬಾಳು ಎಂಬಂತೆ ಅನುದಾನ ನೀಡಿದ್ದಾರೆ. ಎಲ್ಲಾ ವರ್ಗದವರಿಗೂ ಸಲ್ಲುವ
ಆಯವ್ಯಯ. ರೈತರಿಗೆ ಹೆಚ್ಚಿನ ನೆರವು ನೀಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಅನುದಾನ ನೀಡಿರುವ ಸಿಎಂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕ್ರಮಕ್ಕೆ ಮುಂದಾಗಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಿಗೂ ಅನುಕೂಲವಾಗುವಂತ ಬಜೆಟ್ ಮಂಡನೆ ಮಾಡಿದ್ದಾರೆ. ಇದೊಂದು ಅತ್ಯುತ್ತಮ ಬಜೆಟ್ ಎಂದಿದ್ದಾರೆ.
ದೂರದೃಷ್ಟಿಯುಳ್ಳ ಆಯವ್ಯಯ ಆಗಿದ್ದು, ಬಡವರು, ದೀನದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. 52 ಸಾವಿರ ಕೋಟಿ ರೂಪಾಯಿ 5 ಗ್ಯಾರಂಟಿಗಳಿಗೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ನಡುವೆಯೂ, ರಾಜ್ಯದ ಪಾಲು ನೀಡದೇ ಅನ್ಯಾಯ ಎಸಗುತ್ತಿದ್ದರೂ ಜನಪ್ರಿಯ ಮಂಡನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನೀರಾವರಿ, ಬರಗಾಲ ಸಮರ್ಥವಾಗಿ ಎದುರಿಸಲು, ರೈತರು, ತೋಟಗಾರಿಕೆ ಸೇರಿದಂತೆ ಪ್ರತಿಯೊಬ್ಬರೂ ಮೆಚ್ಚುವಂಥ ಬಜೆಟ್ ಮಂಡನೆ ಮಾಡಿದ್ದು, ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸೈಯದ್ ಖಾಲಿದ್ ಆಹ್ಮದ್ ಹೇಳಿದ್ದಾರೆ.