Home ದಾವಣಗೆರೆ ದಾವಣಗೆರೆಯಲ್ಲಿ ನವೆಂಬರ್ 18ರ ನಾಳೆ ಮಣಿಪಾಲ್ ಆಸ್ಪತ್ರೆ ಹಾಗೂ ಐಎಂಇ, ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಸಿಎಂಇ ಪ್ರೊಗ್ರಾಂ
ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ನವೆಂಬರ್ 18ರ ನಾಳೆ ಮಣಿಪಾಲ್ ಆಸ್ಪತ್ರೆ ಹಾಗೂ ಐಎಂಇ, ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಸಿಎಂಇ ಪ್ರೊಗ್ರಾಂ

Share
ದಾವಣಗೆರೆ
Share

ದಾವಣಗೆರೆ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಐ) ದಾವಣಗೆರೆ ಶಾಖೆ, ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ದಾವಣಗೆರೆ ಪ್ರಾಯೋಜಕತ್ವದಲ್ಲಿ ಮಣಿಪಾಲ ಆಸ್ಪತ್ರೆ ಬೆಂಗಳೂರು ಓಲ್ಡ್ ಏರ್ ಪೋರ್ಟ್ ರಸ್ತೆ ಸಹಯೋಗದೊಂದಿಗೆ ಸಿಎಂಇ (ಕಂಟಿನ್ಯೂಯಿಂಗ್ ಮೆಡಿಕಲ್ ಎಜುಕೇಶನ್ ಕಾರ್ಯಕ್ರಮವನ್ನು ನವೆಂಬರ್ 18ರಂದು ಸಂಜೆ 7.30ಕ್ಕೆ ಏರ್ಪಡಿಸಲಾಗಿದೆ.

ದಾವಣಗೆರೆಯ ಐಎಂಎ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯಕೀಯ ತಜ್ಞರು ಭಾಗವಹಿಸಿ ಮುಖ್ಯ ಉಪನ್ಯಾಸ ನೀಡಲಿದ್ದಾರೆ.

ಮಣಿಪಾಲ್ ಆಸ್ಪತ್ರೆಯ ಕಾರ್ಡಿಯೋ ವ್ಯಾಸ್ಕುಲರ್ ಸರ್ಜನ್ ಮತ್ತು ಹಾರ್ಟ್ ಲಂಗ್ ಟ್ರಾನ್ಸ್ ಪ್ಲಾಂಟ್ ತಜ್ಞರಾದ ಡಾ. ಬಿ. ವಿ. ಭಾಸ್ಕರ್ ಅವರು ‘ಹೃದಯ ಕಸಿ’ (Heart Transplant) ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ದಾವಣಗೆರೆಯ ಆರೈಕೆ ಹೃದಯಾಲಯದ ಹೃದ್ರೋಗ ತಜ್ಞರಾದ ಡಾ. ಲೋಹಿತಾಶ್ವ ಅವರು ‘ಕುತೂಹಲಕಾರಿ ಪ್ರಕರಣಗಳು’ (Interesting Cases) ಕುರಿತಂತೆ ಮುಖ್ಯ ಉಪನ್ಯಾಸ ನೀಡಲಿದ್ದು, ನಗರದ ನೂರಕ್ಕೂ ಹೆಚ್ಚು ನುರಿತ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗಪಡಿಸಿಕೊಳ್ಳುವಂತೆ ಐಎಂಎ ಅಧ್ಯಕ್ಷ ಡಾ. ಮಹೇಶ್ ಕೆ ಹಾಗೂ ಕಾರ್ಯದರ್ಶಿಯಾದ ಡಾ. ಅಖಿಲ್ ಎಂ ಕುಲಕರ್ಣಿ ಅವರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗೆ ಕೆ. ಎಸ್. ಚೇತನ್ ಕುಮಾರ್ ಮೊಬೈಲ್ – 76250-33474 ಹಾಗೂ ಗುರುರಾಜ್ ಜೋಶಿ 91872-31335 ಅವರನ್ನು ಸಂಪರ್ಕಿಸಬಹುದಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles