Home ದಾವಣಗೆರೆ ನಾಲ್ಕು ವರ್ಷಗಳ ಬಳಿಕವೂ ಅನ್ಯೋನ್ಯ: ಟ್ರೋಲ್‌ಗಳಿಗೆಲ್ಲಾ ಖಡಕ್ ತಿರುಗೇಟು ನೀಡಿದ ನಟಿ ಮಹಾಲಕ್ಷ್ಮಿ- ರವೀಂದರ್ ಜೋಡಿ ಈಗ ಹೇಗಿದೆ?
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ನಾಲ್ಕು ವರ್ಷಗಳ ಬಳಿಕವೂ ಅನ್ಯೋನ್ಯ: ಟ್ರೋಲ್‌ಗಳಿಗೆಲ್ಲಾ ಖಡಕ್ ತಿರುಗೇಟು ನೀಡಿದ ನಟಿ ಮಹಾಲಕ್ಷ್ಮಿ- ರವೀಂದರ್ ಜೋಡಿ ಈಗ ಹೇಗಿದೆ?

Share
ಮಹಾಲಕ್ಷ್ಮಿ
Share

ಬೆಂಗಳೂರು/ತಿರುಪತಿ: ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಮತ್ತು ಕಿರುತೆರೆ ನಟಿ ಹಾಗೂ ನಿರೂಪಕಿ ಮಹಾಲಕ್ಷ್ಮಿದಂಪತಿ ತಮ್ಮ ಮದುವೆಯ ಆರಂಭಿಕ ದಿನಗಳಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸದಾ ಚರ್ಚೆಯಲ್ಲಿದ್ದಾರೆ. ತಮ್ಮ ಬಾಹ್ಯ ರೂಪದ ವ್ಯತ್ಯಾಸದಿಂದಾಗಿ ಅತಿ ಹೆಚ್ಚು ಟ್ರೋಲ್‌ಗಳಿಗೆ ಒಳಗಾಗಿದ್ದ ಈ ಜೋಡಿಯು, ವಿವಾಹವಾಗಿ ನಾಲ್ಕು ವರ್ಷಗಳು ಕಳೆದರೂ ಅಷ್ಟೇ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ತಮ್ಮ ಪ್ರೇಮಕಥೆಗೆ ಸಾಕ್ಷಿಯಾಗಿದ್ದ ತಿರುಪತಿಗೆ ಮತ್ತೊಮ್ಮೆ ಭೇಟಿ ನೀಡಿರುವ ಮಹಾಲಕ್ಷ್ಮಿ, 4 ವರ್ಷಗಳ ಹಿಂದೆ (ಸೆಪ್ಟೆಂಬರ್ 2022) ತಮ್ಮ ಜೀವನದ ಸುಂದರಯಾತ್ರೆ ಆರಂಭವಾದ ಬಗೆಯನ್ನು ನೆನಪಿಸಿಕೊಂಡಿದ್ದಾರೆ. ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿರುವ ಅವರು, “ಪ್ರೀತಿ ಎಂದರೆ ಇತರರು ಏನು ಮಾತನಾಡುತ್ತಾರೆ ಅಥವಾ ಕಮೆಂಟ್ ಮಾಡುತ್ತಾರೆ ಎಂಬುದಲ್ಲ; ಬದಲಿಗೆ ನಾವು ಪರಸ್ಪರ ಹೇಗೆ ಭಾವಿಸುತ್ತೇವೆ, ಒಬ್ಬರನ್ನೊಬ್ಬರು ಹೇಗೆ ಕಾಳಜಿ ವಹಿಸುತ್ತೇವೆ ಮತ್ತು ರಕ್ಷಿಸುತ್ತೇವೆ ಎಂಬುದೇ ನಿಜವಾದ ಪ್ರೀತಿ” ಎಂದು ಸ್ಪಷ್ಟಪಡಿಸಿದ್ದಾರೆ. ಸುಳ್ಳು ವದಂತಿಗಳಿಗೆ ತೆರೆ ಎಳೆದಿರುವ ಈ ಜೋಡಿಯ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಮರ್ಶೆಗಳಿಗೆ ತಿರುಗೇಟು: ಬಾಹ್ಯ ಸೌಂದರ್ಯ ಹಾಗೂ ಆಸ್ತಿಗಾಗಿ ಮದುವೆಯಾಗಿದ್ದಾರೆ ಎಂದು ಟೀಕಿಸಿದವರಿಗೆ ಮಹಾಲಕ್ಷ್ಮಿ ತಮ್ಮ ಪ್ರೀತಿಯ ಮೂಲಕ ತಕ್ಕ ಉತ್ತರ ನೀಡಿದ್ದಾರೆ.

ತಿರುಪತಿಯಲ್ಲಿ ಪ್ರೇಮ ಪಯಣ: ನಾಲ್ಕು ವರ್ಷಗಳ ಹಿಂದೆ ತಿರುಪತಿಯಲ್ಲಿ ಆರಂಭವಾದ ತಮ್ಮ ಪ್ರೀತಿ ಮತ್ತು ಹೊಸ ಜೀವನದ ಮಧುರ ನೆನಪುಗಳನ್ನು ನಟಿ ಹಂಚಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳಿಗೆ ತೆರೆ: ದಂಪತಿ ಬೇರ್ಪಟ್ಟಿದ್ದಾರೆ ಎಂದು ಕಾಲಕಾಲಕ್ಕೆ ಹಬ್ಬುವ ವುಳ್ಳು ವದಂತಿಗಳಿಗೆ ಈ ಜೋಡಿಯ ಒಡನಾಟ ಖಡಕ್ ಉತ್ತರ ನೀಡಿದೆ.

ಪರಸ್ಪರ ಕಾಳಜಿ: ಪ್ರೀತಿಯೆಂದರೆ ಇತರರ ಮಾತುಗಳಲ್ಲ, ಪರಸ್ಪರರ ಕಾಳಜಿ ಹಾಗೂ ರಕ್ಷಣೆ ಎಂದು ಮಹಾಲಕ್ಷ್ಮಿ ತಮ್ಮ ಪೋಸ್ಟ್‌ನಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles