SUDDIKSHANA KANNADA NEWS/ DAVANAGERE/ DATE:25-09-2023
ದಾವಣಗೆರೆ: ಸಾರ್ವಜನಿಕರಿಗೆ ಸಮಸ್ಯೆಗಳು ಆದಾಗ ವಿರೋಧ ಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಬಂದ್ ಗೆ ಕರೆ ನೀಡುವುದು ಸಾಮಾನ್ಯ, ಅದೇ ರೀತಿ ಜಿಲ್ಲೆಯ ರೈತರಿಗೆ ಭದ್ರಾ ಚಾನೆಲ್ ಗೆ ನೀರು ಹರಿಸುವ ವಿಷಯದಲ್ಲಿ ಆದ ಸಮಸ್ಯೆಗೆ ರೈತರು ದಾವಣಗೆರೆ (Davanagere) ಬಂದ್ ಗೆ ಕರೆ ನೀಡಿದಾಗ ಕೆಲವು ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಬೆಂಬಲಿಸಿದ್ದವು. ಆದ್ರೆ, ಮಹಾನಗರ ಪಾಲಿಕೆಯ ಮಾಜಿ ಮೇಯರ್ ತರಕಾರಿ ಅಂಗಡಿಯಲ್ಲಿ ನಡೆದುಕೊಂಡ ರೀತಿ ಪುಡಿ ರೌಡಿಯನ್ನು ನಾಚಿಸುವಂತಿತ್ತು ಎಂದು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಕೆ. ಎಲ್. ಹರೀಶ್ ಬಸಾಪುರ ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:
ಅಡಿಕೆ (Areca nut) ಬೆಳೆಗಾರರಿಗೆ ಕಹಿ ಸುದ್ದಿ, ಮತ್ತೆ ಕುಸಿದ ಅಡಿಕೆ ಧಾರಣೆ: ಮತ್ತೆ ಎಷ್ಟು ಕಡಿಮೆ ಆಯ್ತು ಗೊತ್ತಾ…?
ನಿನ್ನೆ ಬಂದ್ ಸಂದರ್ಭದಲ್ಲಿ ಮಾಜಿ ಮೇಯರ್, ತಾನು ಬಡವನಾಗಿದ್ದೆ, ಬಡತನವನ್ನು ತೀರಾ ಹತ್ತಿರದಿಂದ ಕಂಡಿದ್ದೇನೆ ಎಂದು ಬಡವರ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ
ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಜಿ ಅಜಯ್ ಕುಮಾರ್ ಹಣ್ಣಿನ ಅಂಗಡಿಯ ಮುಂಭಾಗ ಹೋಗಿ ನಡೆದುಕೊಂಡ ರೀತಿ ತೀರಾ ಕೆಳಮಟ್ಟದ ಪುಡಿ ರೌಡಿಯನ್ನು ಕೂಡ ನಾಚಿಸುವಂತಿತ್ತು ಎಂಬುದು ಸಾಮಾಜಿಕ ಜಾಲತಾಣದಲ್ಲಿ
ಹರಿದಾಡುತ್ತಿರುವ ವಿಡಿಯೋ ನೋಡಿದ ಸಾರ್ವಜನಿಕರ ಅಭಿಪ್ರಾಯವಾಗಿದೆ ಎಂದಿದ್ದಾರೆ.
ಬಂದ್ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಬಾರದು ಎಂಬ ಆದೇಶವಿದ್ದರೂ, ನಿನ್ನೆ ಬಿ.ಜಿ ಅಜಯ್ ಕುಮಾರ್ ಹಣ್ಣಿನ ಅಂಗಡಿಯ ಮುಂಭಾಗ ಹೋಗಿ ಕಲ್ಲಂಗಡಿ ಹಣ್ಣನ್ನು ರೋಡಲ್ಲಿ ಹೊಡೆದ ಘಟನೆ,
ತೀರಾ ಅಮಾನೀಯವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿ ಕೊಂಡು ಇಂತಹ ಪುಡಿ ರೌಡಿಗಳನ್ನು ಮಟ್ಟ ಹಾಕುವ ಕಾರ್ಯ ಮಾಡಬೇಕಾಗಿದೆ, ಹಾಗೆಯೇ ಮುಂದಿನ ದಿನಗಳಲ್ಲಿ ಬಂದ್ ನಡೆಸುವ
ಸಂದರ್ಭದಲ್ಲಿ ಇಂಥವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಕಾರ್ಯ ಮಾಡಬೇಕು ಎಂದು ಸಾರ್ವಜನಿಕರ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.