Home ಕ್ರೈಂ ನ್ಯೂಸ್ ಕೆಟಿಜೆ ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಬೈಕ್ ಕಳ್ಳತನ ಮಾಡುತ್ತಿದ್ದ 3 ಬಾಲಕರ ಬಂಧನ, 1.50 ರೂ. ಲಕ್ಷ ಮೌಲ್ಯದ 5 ಬೈಕ್‌ಗಳ ಜಪ್ತಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಕೆಟಿಜೆ ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಬೈಕ್ ಕಳ್ಳತನ ಮಾಡುತ್ತಿದ್ದ 3 ಬಾಲಕರ ಬಂಧನ, 1.50 ರೂ. ಲಕ್ಷ ಮೌಲ್ಯದ 5 ಬೈಕ್‌ಗಳ ಜಪ್ತಿ!

Share
ಕೆಟಿಜೆ
Share

ದಾವಣಗೆರೆ: ನಗರದಲ್ಲಿ ನಿರಂತರವಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಕಾಯ್ದೆಗೆ ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆಯುವಲ್ಲಿ ಕೆಟಿಜೆ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಬಾಲಕರಿಂದ ಸುಮಾರು 1,50,000 ರೂಪಾಯಿ ಮೌಲ್ಯದ ಒಟ್ಟು 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಆಗಸ್ಟ್ ೨೭ರಂದು ರಮೇಶ್ ಎಂಬುವವರು ತಮ್ಮ ಮನೆಯ ಮುಂಭಾಗ ನಿಲ್ಲಿಸಿದ್ದ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳುವಾದ ಬಗ್ಗೆ ಕೆ.ಟಿ.ಜೆ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ., ಹೆಚ್ಚುವರಿ ಎಸ್‌ಪಿ ಪರಮೇಶ್ವರ ಹೆಗಡೆ ಹಾಗೂ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ. ಅವರ ಮಾರ್ಗದರ್ಶನದಲ್ಲಿ ಕೆ.ಟಿ.ಜೆ.ನಗರ ಠಾಣೆಯ ಇನ್‌ಸ್ಪೆಕ್ಟರ್ ಮೇಘರಾಜ್ ಎಂ. ವಿ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಮೂವರು ಬಾಲಕರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಕೃತ್ಯ ಬಯಲಾಗಿದೆ. ಆರೋಪಿಗಳು ನೀಡಿ ಮಾಹಿತಿ ಆಧರಿಸಿ ಕೆ.ಟಿ.ಜೆ.ನಗರ ಠಾಣೆಯ 3 ಪ್ರಕರಣಗಳ 3 ಬೈಕ್‌ಗಳು ಹಾಗೂ ವಿದ್ಯಾನಗರ ಠಾಣೆಯ 2 ಪ್ರಕರಣಗಳ 2 ಬೈಕ್‌ಗಳು ಸೇರಿದಂತೆ ಒಟ್ಟು 5 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವನ್ನು ಎಸ್‌ಪಿ ಶ್ಲಾಘಿಸಿದ್ದಾರೆ.

ಬೈಕ್ ಕಳ್ಳರ ಬಂಧನ: ಕೆ.ಟಿ.ಜೆ.ನಗರ ಮತ್ತು ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಕಾ.ಸ.ಬಾಲಕರು ವಶಕ್ಕೆ.

5 ಬೈಕ್‌ಗಳ ಜಪ್ತಿ: ವಶಪಡಿಸಿಕೊಂಡ ಬೈಕ್‌ಗಳ ಒಟ್ಟು ಮೌಲ್ಯ ಸುಮಾರು ₹1.50 ಲಕ್ಷ ಎಂದು ಅಂದಾಜಿಸಲಾಗಿದೆ.

ಪೊಲೀಸ್ ತಂಡಕ್ಕೆ ಪ್ರಶಂಸೆ: ಪಿಐ ಮೇಘರಾಜ್ ಎಂ.ವಿ, ಪಿಎಸ್‌ಐ ಶಿವಾನಂದ ಧರೆನ್ನನವರ ಹಾಗೂ ಸಿಬ್ಬಂದಿ ತಂಡದ ಯಶಸ್ವಿ ಕಾರ್ಯಾಚರಣೆಗೆ ಎಸ್‌ಪಿ ಶೇಖರ್ ಹೆಚ್.ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *