Home ಕ್ರೈಂ ನ್ಯೂಸ್ ದಾವಣಗೆರೆ ಕೆ.ಟಿ.ಜೆ.ನಗರ ಪೊಲೀಸರ ದಾಳಿ: ಲಕ್ಷ್ಮಿ ಲೆೇ ಔಟ್‌ನಲ್ಲಿ ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆ ಕೆ.ಟಿ.ಜೆ.ನಗರ ಪೊಲೀಸರ ದಾಳಿ: ಲಕ್ಷ್ಮಿ ಲೆೇ ಔಟ್‌ನಲ್ಲಿ ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ!

Share
ದಾವಣಗೆರೆ
Share

ದಾವಣಗೆರೆ: ನಗರದ ಲಕ್ಷ್ಮಿ ಲೆಔಟ್‌ನ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೆ.ಟಿ.ಜೆ.ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು ₹20,000 ಮೌಲ್ಯದ 239 ಗ್ರಾಂ ಗಾಂಜಾ ಹಾಗೂ ₹1,200 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ದಾವಣಗೆರೆ ನಿವಾಸಿಯಾದ ಗುರುರಾಜ ಎಸ್. (25) ಬಂಧಿತ ಆರೋಪಿಯಾಗಿದ್ದಾನೆ. ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಆಧರಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಶೇಖರ್ ಹೆಚ್.ಟಿ., ಹೆಚ್ಚುವರಿ ಎಸ್‌ಪಿ ಪರಮೇಶ್ವರ ಹೆಗಡೆ ಹಾಗೂ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ. ಅವರ ಮಾರ್ಗದರ್ಶನದಲ್ಲಿ ಕೆ.ಟಿ.ಜೆ.ನಗರ ಠಾಣೆಯ ಇನ್‌ಸ್ಪೆಕ್ಟರ್ ಮೇಘರಾಜ್ ಎಂ.ವಿ ನೇತೃತ್ವದ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ನಡೆಸಿದೆ.

ಸ್ಥಳದಲ್ಲೇ ಆರೋಪಿಯನ್ನು ವಶಕ್ಕೆ ಪಡೆದು ಗಾಂಜಾ ಹಾಗೂ ನಗದು ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಕೆ.ಟಿ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

ಗಾಂಜಾ ಪೆಡ್ಲರ್ ಬಂಧನ: ಲಕ್ಷ್ಮಿ ಲೆಔಟ್‌ನಲ್ಲಿ ದಾಳಿ ನಡೆಸಿ ಗುರುರಾಜ ಎಂಬ ಆರೋಪಿಯ ಬಂಧನ.

ಸಾಮಗ್ರಿ ಜಪ್ತಿ: ₹20,000 ಮೌಲ್ಯದ 239 ಗ್ರಾಂ ಗಾಂಜಾ ಹಾಗೂ ₹1,200 ನಗದು ವಶ.

ಪೊಲೀಸ್ ತಂಡಕ್ಕೆ ಪ್ರಶಂಸೆ: ಪಿಐ ಮೇಘರಾಜ್ ಎಂ.ವಿ, ಪಿಎಸ್‌ಐ ಶಿವಾನಂದ ಧರೇನವರ್ ಹಾಗೂ ಸಿಬ್ಬಂದಿ ತಂಡದ ಸಮಯೋಚಿತ ಕಾರ್ಯಾಚರಣೆಗೆ ಎಸ್‌ಪಿ ಶೇಖರ್ ಹೆಚ್.ಟಿ ಮೆಚ್ಚುಗೆ.

Share

Leave a comment

Leave a Reply

Your email address will not be published. Required fields are marked *