SUDDIKSHANA KANNADA NEWS/ DAVANAGERE/ DATE:23-09-2023
ದಾವಣಗೆರೆ: ದಾವಣಗೆರೆ (Davanagere) ಬಾಸ್ಕೆಟ್ ಬಾಲ್ ಕ್ಲಬ್ ಆಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಆಹ್ವಾನಿತ ಹೊನಲು ಬೆಳಕಿನ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸುದ್ದಿಯನ್ನೂ ಓದಿ:
BIG BREAKING NEWS: ಭದ್ರಾ ಡ್ಯಾಂ (Bhadra Dam) ನೀರು ಹರಿಸುವ ಬಗ್ಗೆ ಭಾನುವಾರ ಸಂಜೆಯೊಳಗೆ ಲಿಖಿತ ಆದೇಶ ಬರದಿದ್ದರೆ ಸೆ. 25ಕ್ಕೆ ದಾವಣಗೆರೆ ಬಂದ್: ಭಾರತೀಯ ರೈತ ಒಕ್ಕೂಟ ಎಚ್ಚರಿಕೆ
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ 56 ನೇ ವರ್ಷದ ಜನುಮದಿನದ ಪ್ರಯುಕ್ತ ಏರ್ಪಡಿಸಿದ್ದ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ತಂಡಗಳ ಕಾದಾಟವು ರೋಚಕವಾಗಿತ್ತು.
16 ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ವಿಜಯಪುರದ ಡಿವೈಎಸ್ ವಿಜಯಪುರ ಪ್ರಥಮ ಸ್ಥಾನ ಪಡೆದರೆ, ಬೆಂಗಳೂರಿನ ವಿದ್ಯಾನಗರ ಸ್ಪೋರ್ಟ್ಸ್ ಹಾಸ್ಟೆಲ್ ದ್ವಿತೀಯ ಸ್ಥಾನ ಪಡೆದಿದೆ. ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ವಿದ್ಯಾನಗರದ ಸ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು ವಿಜಯಪುರದ ಡಿವೈಎಸ್ ತಂಡವು 35-31 ಅಂಕಗಳ ಅಂತರದಲ್ಲಿ ಸೋಲುಣಿಸಿತು. ಮಾಬೂಬಿ ಮುಲ್ಲಾ 13 ಪಾಯಿಂಟ್ ಪಡೆಯುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದರು.
18 ವಯೋಮಿತಿಯ ಬಾಲಕರ ಫೈನಲ್ ಪಂದ್ಯದಲ್ಲಿ ದಾವಣಗೆರೆ ಬಿ ಸಿ ಗೆದ್ದು ಬೀಗಿತು. ಚಿಕ್ಕಮಗಳೂರಿನ ಮರಿಯನ್ ಎಸ್ ಸಿ ತಂಡದ ವಿರುದ್ಧ 51 – 49 ಅಂಕಗಳ ಅಂತರದಲ್ಲಿ ಸೋಲುಣಿಸಿತು. 11 ಬಾಲ್ ಹಾಕುವ ಮೂಲಕ ವಿಷ್ಣು ಎನ್ ಎಂ ಟಾಪ್ ಸ್ಕೋರರ್ ಎನಿಸಿಕೊಂಡರು.
ಪುರುಷರ ಫೈನಲ್ ಪಂದ್ಯವು ದಾವಣಗೆರೆ ಬಿಸಿ ಹಾಗೂ ಮರಿಯನ್ ಎಸ್ ಸಿ ಚಿಕ್ಕಮಗಳೂರು ತಂಡಗಳ ನಡುವೆ ನಡೆಯಿತು. 62-49 ಅಂಕಗಳ ಅಂತರದಿಂದ ದಾವಣಗೆರೆ ಬಿಸಿ ಜಯಭೇರಿ ಬಾರಿಸಿತು. ವಿಷ್ಣು 18 ಬಾಲ್ ಹಾಕುವ ಮೂಲಕ ಟಾಪ್ ಸ್ಕೋರರ್ ಎನಿಸಿದರು.
ಹದಿನಾರು ವಯೋಮಿತಿಯ ಬಾಲಕಿಯರ ಬೆಸ್ಟ್ ಸೂಟರ್ ಆಗಿ ಬೆಂಗಳೂರಿನ ವಿದ್ಯಾನಗರದ ಸ್ಪೋರ್ಟ್ಸ್ ಹಾಸ್ಟೆಲ್ ತಂಡದ ದೀಪಿಕಾ, ಮೋಸ್ಟ್ ವ್ಯಾಲ್ಯೂ ಪ್ಲೇಯರ್ ನಂದಿನಿ ಡಿವೈಎಸ್ ವಿಜಯಪುರ ತಂಡದ ಆಟಗಾರ್ತಿ, 18 ವಯೋಮಿತಿಯ ಬಾಲಕರ ಬೆಸ್ಟ್ ಶೂಟರ್ ಆಗಿ ಚಿಕ್ಕಮಗಳೂರು ತಂಡದ ಆಟಗಾರ ದರ್ಶನ್, ಮೋಸ್ಟ ವಾಲ್ಯು ಪ್ಲೇಯರ್ ಆಗಿ ದಾವಣಗೆರೆ ತಂಡದ ಅಮಿತ್ ಎಂ. ಹೊರಹೊಮ್ಮಿದರು.
ಪುರುಷರ ವಿಭಾಗದಲ್ಲಿ ಬೆಸ್ಟ್ ಶೂಟರ್ ಆಗಿ ಚಿಕ್ಕಮಗಳೂರು ಎಸ್ ಸಿ ತಂಡದ ಆಟಗಾರ ಅಶ್ವಿನ್, ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್ ಆಗಿ ದಾವಣಗೆರೆ ತಂಡದ ವಿಷ್ಣು ಎನ್. ಎಂ. ಹೊರಹೊಮ್ಮಿದರು. ಗೆದ್ದ ತಂಡಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಮಾತನಾಡಿದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಬಾಸ್ಕೆಟ್ ಬಾಲ್ ಅಭ್ಯಾಸ ಮಾಡುವ ಆಟಗಾರರಿಗೆ ಸೂಕ್ತ ಒಳಾಂಗಣದ ವ್ಯವಸ್ಥೆ ಮಾಡಲಾಗುವುದು. ಇಂಡೋರ್ ಕೋರ್ಟ್ ಅನ್ನು ಪಾರ್ಕಿಂಗ್ ಜಾಗದಲ್ಲಿ ಸುವ್ಯವಸ್ಥಿತವಾಗಿ ನಿರ್ಮಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ನ ಗೌರವಾಧ್ಯಕ್ಷ ಸಿ. ರಾಮಮೂರ್ತಿ, ಅಧ್ಯಕ್ಷ ಆರ್. ಕಿರಣ್ ಕುಮಾರ್, ಉಪಾಧ್ಯಕ್ಷರೂ ಆದ 38ನೇ ವಾರ್ಡ್ ಎಂಸಿಸಿ ಬಿ ಬ್ಲಾಕ್ ನ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಕಾರ್ಯದರ್ಶಿ ಆರ್. ವೀರೇಶ್, ಖಜಾಂಜಿ ಎಸ್. ಎಲ್. ಪ್ರಸನ್ನ, ದಾವಣಗೆರೆಯ ಬಾಸ್ಕೆಟ್ ಬಾಲ್ ಕ್ಲಬ್ ನ ತರಬೇತುದಾರರಾದ ದರ್ಶನ್ ಮತ್ತು ಸಚಿನ್ ಅವರು ಈ ವೇಳೆ ಹಾಜರಿದ್ದರು.