Home ಕ್ರೈಂ ನ್ಯೂಸ್ ಹಿಂದೂ ಯುವತಿ ನಿಮಿಷಾ ಸಾವಿಗೆ ಕಾರಣನಾದ ಆರೋಪಿ ಕೋರ್ಟ್‌ಗೆ ಹಾಜರುಪಡಿಸುವ ಮುನ್ನವೇ ಎಸ್ಕೇಪ್ ಆಗಲು ಯತ್ನ: ಆರೋಪಿ ಆಸಿಫ್ ಕಾಲಿಗೆ ಗುಂಡು ಹಾರಿಸಿದ ಪೋಲಿಸರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹಿಂದೂ ಯುವತಿ ನಿಮಿಷಾ ಸಾವಿಗೆ ಕಾರಣನಾದ ಆರೋಪಿ ಕೋರ್ಟ್‌ಗೆ ಹಾಜರುಪಡಿಸುವ ಮುನ್ನವೇ ಎಸ್ಕೇಪ್ ಆಗಲು ಯತ್ನ: ಆರೋಪಿ ಆಸಿಫ್ ಕಾಲಿಗೆ ಗುಂಡು ಹಾರಿಸಿದ ಪೋಲಿಸರು!

Share
ನಿಮಿಷಾ
Share

ಗೌಹಾಟಿ: గౌಹಾಟಿ ವಿಶ್ವವಿದ್ಯಾಲಯದ 22 ವರ್ಷದ ಸಮಾಜಶಾಸ್ತ್ರ ವಿದ್ಯಾರ್ಥಿನಿ ನಿಮಿಷಾ ಠಾಕುರಿಯಾ ಅನುಮಾನಾಸ್ಪದ ಸಾವಿನ ಪ್ರಕರಣದ ಪ್ರಮುಖ ಆರೋಪಿ ಆಸಿಫ್ ಅಲಿಯನ್ನು ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಬೆಳಗಿನ ಜಾವ ಪೋಲಿಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದಾಗ ಪೋಲಿಸರು ಎನ್‌ಕೌಂಟರ್ ನಡೆಸಿದ್ದು, ಆತನ ಬಲಗಾಲಿಗೆ ಗುಂಡೇಟು ಬಿದ್ದಿದೆ.

ಆರೋಪಿ ಆಸಿಫ್‌ನನ್ನು ತಕ್ಷಣ ಗೌಹಾಟಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ನಂತರ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ದೇವಾಜಿತ್ ಚೌಧರಿ ಮಾತನಾಡಿ, “ಆರೋಪಿಯ ಬಲಗಾಲಿನ ಮಂಡಿ ಕೆಳಭಾಗದಲ್ಲಿ ಎರಡು ಗುಂಡುಗಳ ಗಾಯಗಳಾಗಿದ್ದು, ಪ್ರಸ್ತುತ ಆತನ ಸ್ಥಿತಿ ಸ್ಥಿರವಾಗಿದೆ. ಮೂಳೆ ಹಾಗೂ ಗಂಟಿನ ಭಾಗಕ್ಕೆ ಸಣ್ಣ ಮಟ್ಟಿನ ಪೆಟ್ಟಾಗಿದ್ದು, ಆರ್ಥೋಪೆಡಿಕ್ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಆರೋಪಿ ಆಸಿಫ್‌ನ 8 ದಿನಗಳ ಪೊಲೀಸ್ ಕಸ್ಟಡಿ ಅವಧಿ ಮಂಗಳವಾರಕ್ಕೆ ಮುಕ್ತಾಯಗೊಳ್ಳಲಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಸೆಪ್ಟೆಂಬರ್ 25 ರಂದು ಗೌಹಾತಿಯ ಹೋಮ್‌ಸ್ಟೇ ಒಂದರಲ್ಲಿ ನಿಮಿಷಾ ಠಾಕುರಿಯಾ ಶವವಾಗಿ ಪತ್ತೆಯಾಗಿದ್ದಳು.

ನಿಮಿಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿ ಆಸಿಫ್ ವಾದಿಸುತ್ತಿದ್ದರೂ, ಪೊಲೀಸರು ಆತನ ಹೇಳಿಕೆಯನ್ನು ಒಪ್ಪಿಕೊಳ್ಳದೇ ಸಮಗ್ರ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles