Home ದಾವಣಗೆರೆ ಕರ್ನಾಟಕದಲ್ಲಿ ಬಳಕೆದಾರರ ಜೇಬಿಗೆ ಬಿತ್ತು ಕತ್ತರಿ: ನಂದಿನಿ ಹಾಲು ಒಂದು ಲೀಟರ್ ಗೆ ಇಷ್ಟೊಂದು ಏರಿಕೆನಾ? ಹಬ್ಬಕ್ಕೆ ಮುನ್ನವೇ ಬೆಲೆ ಏರಿಕೆ ಬಿಸಿ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಕರ್ನಾಟಕದಲ್ಲಿ ಬಳಕೆದಾರರ ಜೇಬಿಗೆ ಬಿತ್ತು ಕತ್ತರಿ: ನಂದಿನಿ ಹಾಲು ಒಂದು ಲೀಟರ್ ಗೆ ಇಷ್ಟೊಂದು ಏರಿಕೆನಾ? ಹಬ್ಬಕ್ಕೆ ಮುನ್ನವೇ ಬೆಲೆ ಏರಿಕೆ ಬಿಸಿ!

Share
ನಂದಿನಿ
Share

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲು ಪ್ರತಿ ಲೀಟರ್ ಗೆ ಎಂಟು ರೂಪಾಯಿಯಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರವು ಮುಂದಾಗಿದೆ.

ಸಾರ್ವಜನಿಕರಿಗೆ ನೇರ ಪರಿಣಾಮ ಬೀರುವ ಹಾಲಿನ ದರ ಹಾಗೂ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪಗಳ ಕುರಿತು ಮಹತ್ವದ ಚರ್ಚೆ ನಡೆಯಿತು.

ಹಾಲಿನ ದರ ಲೀಟರ್‌ಗೆ ₹8 ರಿಂದ ₹12 ಏರಿಕೆ ಕುರಿತಂತೆ ಸಮಾಲೋಚನೆ ನಡೆಸಲಾಯಿತು. ಕರ್ನಾಟಕ ಹಾಲು ಮಹಾಮಂಡಳಿ (KMF) ಅಡಿಯ 16 ಸಹಕಾರ ಹಾಲು ಒಕ್ಕೂಟಗಳು ಜಾನುವಾರು ಮೇವಿನ ವೆಚ್ಚ ಹಾಗೂ ಹಾಲಿನ ಸಂಗ್ರಹಣೆ ವೆಚ್ಚ ಗಣನೀಯವಾಗಿ ಹೆಚ್ಚಿರುವುದನ್ನು ಉಲ್ಲೇಖಿಸಿ, ಪ್ರತಿ ಲೀಟರ್‌‌ಗೆ ₹12 ಹೆಚ್ಚಳ ಮಾಡುವಂತೆ ಸರ್ಕಾರವನ್ನು ಕೋರಿದ್ದವು.

ಆರ್ಥಿಕ ನಷ್ಟದಲ್ಲಿರುವ ಒಕ್ಕೂಟಗಳಿಗೆ ನೆರವಾಗಲು ಸರ್ಕಾರ ಲೀಟರ್‌ಗೆ ₹8 ರಿಂದ ₹10 ವರೆಗೆ ದರ ಹೆಚ್ಚಳ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ಬಮೂಲ್ (BAMUL) ಲಾಭದಲ್ಲಿದ್ದರೆ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಒಕ್ಕೂಟಗಳು ಭಾರಿ ನಷ್ಟ ಎದುರಿಸುತ್ತಿವೆ. ಎರಡು ವರ್ಷಗಳ ಬಳಿಕ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ದರ ಪರಿಷ್ಕರಣೆಗೆ ಮುಂದಾಗಿದ್ದು, ಕಳೆದ ಎರಡು ವರ್ಷಗಳಿಂದ ಬಸ್ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ಬೆಲೆ ಹಾಗೂ ಕಾರ್ಯಾಚರಣೆ ವೆಚ್ಚ ಹೆಚ್ಚಿರುವುದರಿಂದ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳು (KSRTC, BMTC, NWKRTC, KKRTC) ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿವೆ. ನಿವೃತ್ತ ಐಎಎಸ್ ಅಧಿಕಾರಿ ಕುಮಾರ್ ತಿವಾರಿ ನೇತೃತ್ವದ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯು ಈಗಾಗಲೇ ದರ ಪರಿಷ್ಕರಣೆಯ ವರದಿಯನ್ನು ಸಲ್ಲಿಸಿದ್ದು, ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ತಿಂಗಳಿನಿಂದಲೇ ಹೊಸ ದರ ಜಾರಿಗೆ ಬರುವ ಸಾಧ್ಯತೆಯಿದೆ.

Share

Leave a comment

Leave a Reply

Your email address will not be published. Required fields are marked *

Related Articles