ಬೆಂಗಳೂರು: ಆಗ್ನೇಯ ಬೆಂಗಳೂರು ಹಾಗೂ ಸರ್ಜಾಪುರ ಭಾಗವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ದಿನೇದಿನೆ ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಸುಧಾರಿತ ಆರೋಗ್ಯ ಸೇವೆಗಳ ಅಗತ್ಯವೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಚಿಕಿತ್ಸೆಗಳನ್ನು ಒದಗಿಸುತ್ತಿರುವ ಸರ್ಜಾಪುರ ರಸ್ತೆಯ ‘ಸ್ಪರ್ಶ್ ಆಸ್ಪತ್ರೆ’ ಇದೀಗ ಯಶಸ್ವಿ ಪ್ರಥಮ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ.
ಕಳೆದ ಎರಡು ದಶಕಗಳಿಂದ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಷ್ಠಿತ ಸ್ಪರ್ಶ್ ಹಾಸ್ಪಿಟಲ್ಸ್ ಗ್ರೂಪ್ನ ಭಾಗವಾಗಿರುವ ಈ ಆಸ್ಪತ್ರೆಯು, ಕೇವಲ ಒಂದೇ ವರ್ಷದಲ್ಲಿ ಈ ಭಾಗದ ಜನರ ವಿಶ್ವಾಸಾರ್ಹ ಆರೋಗ್ಯ ಕೇಂದ್ರವಾಗಿ ರೂಪುಗೊಂಡಿದೆ.
ಮಲ್ಟಿಸ್ಪೆಷಾಲಿಟಿ, ಸರ್ಜಿಕಲ್, ತುರ್ತು ಚಿಕಿತ್ಸೆ (ಎಮರ್ಜೆನ್ಸಿ) ಸೇರಿದಂತೆ ಸುಧಾರಿತ ಟರ್ಷಿಯರಿ ಕೇರ್ ಸೇವೆಗಳನ್ನು ಜನರಿಗೆ ಇನ್ನಷ್ಟು ಹತ್ತಿರ ತಂದ ಹೆಗ್ಗಳಿಕೆ ಈ ಆಸ್ಪತ್ರೆಯದ್ದಾಗಿದೆ.
ಆಸ್ಪತ್ರೆಯು ತನ್ನ ಮೊದಲ ವರ್ಷದಲ್ಲೇ 90,000ಕ್ಕೂ ಹೆಚ್ಚು ಒಪಿಡಿ (OPD) ಭೇಟಿಗಳನ್ನು ಕಂಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಜತೆಗೆ, 5,000ಕ್ಕೂ ಹೆಚ್ಚು ಇನ್ಪೇಷಂಟ್ಸ್, 2,750ಕ್ಕೂ ಹೆಚ್ಚು ಸರ್ಜರಿಗಳು ಹಾಗೂ 15,000ಕ್ಕೂ ಅಧಿಕ ತುರ್ತು ಪ್ರಕರಣಗಳನ್ನು (ಎಮರ್ಜೆನ್ಸಿ ಕೇಸ್) ಯಶಸ್ವಿಯಾಗಿ ನಿರ್ವಹಿಸಿದೆ. ತಜ್ಞರ ಸಮಾಲೋಚನೆಯಿಂದ ಹಿಡಿದು ಸಂಕೀರ್ಣ ಶಸ್ತ್ರಚಿಕಿತ್ಸೆಗಳವರೆಗೆ ಪ್ರತಿಯೊಂದು ಹಂತದಲ್ಲೂ ಅತ್ಯುತ್ತಮ ಸೇವೆ ಒದಗಿಸುವ ಮೂಲಕ ಆಸ್ಪತ್ರೆಯು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಆಸ್ಪತ್ರೆಯು ಅತ್ಯಾಧುನಿಕ ಚಿಕಿತ್ಸೆಗಳಲ್ಲಿ ಮಹತ್ತರ ಸಾಧನೆ ಮಾಡಿದೆ. ಅಂಗಾಂಗ ಕಸಿ (ಟ್ರಾನ್ಸ್ಪ್ಲಾಂಟ್ಸ್), ಎಕ್ಮೋ ಬೆಂಬಲಿತ ಕ್ರಿಟಿಕಲ್ ಕೇರ್, ರೋಬೋಟಿಕ್ ಸರ್ಜರಿ, ಸ್ಟ್ರಕ್ಚರಲ್ ಕಾರ್ಡಿಯಾಕ್ ಪ್ರೊಸೀಜರ್ಗಳು ಹಾಗೂ ಹೈ-ಎಂಡ್ ನ್ಯೂರೋಲಾಜಿಕಲ್ ಚಿಕಿತ್ಸೆಗಳನ್ನು ಪರಿಣಾಮಕಾರಿಯಾಗಿ ಒದಗಿಸುತ್ತಿದೆ.
ನುರಿತ ವೈದ್ಯರನ್ನೊಳಗೊಂಡ ಮಲ್ಟಿಡಿಸಿಪ್ಲಿನರಿ ತಂಡ, ಅತ್ಯಾಧುನಿಕ ಡಯಾಗ್ನೋಸ್ಟಿಕ್ಸ್ ಹಾಗೂ ಸುಸಜ್ಜಿತ ಸರ್ಜಿಕಲ್ ಮೂಲಸೌಕರ್ಯಗಳ ನೆರವಿನಿಂದಾಗಿ ರೋಗಿಗಳಿಗೆ ತಮ್ಮ ಮನೆಯ ಸಮೀಪದಲ್ಲೇ ಇಂತಹ ಸಂಕೀರ್ಣ ಚಿಕಿತ್ಸೆಗಳು ಲಭ್ಯವಾಗುವಂತಾಗಿದೆ.
ಕೇವಲ ಸೂಪರ್-ಸ್ಪೆಷಾಲಿಟಿ ಸಮಾಲೋಚನೆಗಳಿಗಷ್ಟೇ ಸೀಮಿತವಾಗದೆ; ಮಹಿಳಾ ಮತ್ತು ಮಕ್ಕಳ ಆರೈಕೆ, ಕಾರ್ಡಿಯಾಕ್ ಸೈನ್ಸಸ್, ನ್ಯೂರೋಸೈನ್ಸಸ್, ಇಎನ್ಟಿ , ಗ್ಯಾಸ್ಟ್ರೋಸೈನ್ಸಸ್, ಆರ್ಥೋಪೆಡಿಕ್ಸ್ ಮತ್ತು ರೀನಲ್ ಸೈನ್ಸಸ್ ವಿಭಾಗಗಳಲ್ಲೂ ಆಸ್ಪತ್ರೆ ಅತ್ಯುತ್ತಮ ಸೇವೆ ಒದಗಿಸುತ್ತಿದೆ. ಇದರ ಜೊತೆಗೆ, ರೋಗನಿರೋಧಕ (ಪ್ರಿವೆಂಟಿವ್) ಕಾಳಜಿಗೆ ಒತ್ತು ನೀಡುವ ಉದ್ದೇಶದಿಂದ ಪ್ರತ್ಯೇಕ ಹೆಲ್ತ್-ಚೆಕ್ ವಿಭಾಗ, ಸುತ್ತಮುತ್ತಲಿನ ನಿವಾಸಿಗಳಿಗಾಗಿ ‘ನೈಬರ್ಹುಡ್ ಡೆಸ್ಕ್’ ಹಾಗೂ ‘ಸ್ಪರ್ಶ್ ಇನ್ಸ್ಟಿಟ್ಯೂಟ್ ಫಾರ್ ವುಮೆನ್ ಅಂಡ್ ಚೈಲ್ಡ್’ಗಾಗಿ ಪ್ರತ್ಯೇಕ ಮಹಡಿಯನ್ನೇ ಮೀಸಲಿಡಲಾಗಿದೆ.
‘ಜನರ ವಿಶ್ವಾಸವೇ ನಮಗೆ ಶ್ರೀರಕ್ಷೆ’
ಆಸ್ಪತ್ರೆಯ ಮೊದಲ ವಾರ್ಷಿಕೋತ್ಸವದ ಕುರಿತು ಹರ್ಷ ವ್ಯಕ್ತಪಡಿಸಿದ ಸ್ಪರ್ಶ್ ಹಾಸ್ಪಿಟಲ್ಸ್ನ ಕ್ಲಸ್ಟರ್ ಸಿಒಒ (Cluster COO) ಅಭಿಷೇಕ್ ಥಾಮಸ್, “ಸರ್ಜಾಪುರ ರಸ್ತೆಯ ಸ್ಪರ್ಶ್ ಆಸ್ಪತ್ರೆ ಯಶಸ್ವಿ ಒಂದು ವರ್ಷ ಪೂರೈಸಿರುವುದು ನಮಗೊಂದು ಪ್ರಮುಖ ಮೈಲಿಗಲ್ಲು. ಈ ಭಾಗದ ಜನತೆ ನಮ್ಮ ಮೇಲಿಟ್ಟಿರುವ ಅಪಾರ ನಂಬಿಕೆಗೆ ಇದು ಸಾಕ್ಷಿ. ಜನರು ವಾಸಿಸುವ ಮತ್ತು ಕೆಲಸ ಮಾಡುವ ಸ್ಥಳದ ಸಮೀಪದಲ್ಲೇ ಸಮಗ್ರ, ಸಮಯೋಚಿತ ಹಾಗೂ ಸಹಾನುಭೂತಿಯುಳ್ಳ ಆರೈಕೆಯನ್ನು ಒದಗಿಸುವುದೇ ನಮ್ಮ ಪ್ರಮುಖ ಗುರಿ. ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ಸಮುದಾಯದ ಅಗತ್ಯಗಳಿಗೆ ಸ್ಪಂದಿಸಲು ನಮ್ಮ ಸೇವೆಗಳು ಮತ್ತು ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸುತ್ತೇವೆ,” ಎಂದು ಭರವಸೆ ನೀಡಿದರು.
ಆಸ್ಪತ್ರೆಯ ಮೊದಲ ವರ್ಷದ ಪಯಣದಲ್ಲಿ ತುರ್ತು ಚಿಕಿತ್ಸಾ ವಿಭಾಗದ (ಎಮರ್ಜೆನ್ಸಿ ಕೇರ್) ಪಾತ್ರ ಅತ್ಯಂತ ಮಹತ್ವದ್ದು. ಈ ಅವಧಿಯಲ್ಲಿ 15,000ಕ್ಕೂ ಹೆಚ್ಚು ತುರ್ತು ಪ್ರಕರಣಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಲಾಗಿದೆ. ರೋಗಿ ಆಸ್ಪತ್ರೆಗೆ ಬಂದ ಕೇವಲ ಒಂದು ನಿಮಿಷದೊಳಗೆ ಸ್ಪಂದಿಸುವ ‘ಎಮರ್ಜೆನ್ಸಿ ರೆಸ್ಪಾನ್ಸ್’ ವ್ಯವಸ್ಥೆ ಇಲ್ಲಿದ್ದು, ತ್ವರಿತ ಮೌಲ್ಯಮಾಪನ ಮತ್ತು ಸಕಾಲಿಕ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಡಯಾಗ್ನೋಸ್ಟಿಕ್ಸ್, ಕ್ರಿಟಿಕಲ್ ಕೇರ್ ಹಾಗೂ ಸರ್ಜಿಕಲ್ ವಿಭಾಗಗಳ ಸಂಯೋಜಿತ ಬೆಂಬಲದಿಂದಾಗಿ ಎಷ್ಟೇ ಗಂಭೀರ ಪ್ರಕರಣಗಳಿದ್ದರೂ ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ.
‘ಮನೆ ಬಾಗಿಲಿಗೆ ಸುಧಾರಿತ ಚಿಕಿತ್ಸೆ’
ಈ ಬಗ್ಗೆ ಪ್ರತಿಕ್ರಿಯಿಸಿದ ಸರ್ಜಾಪುರ ರಸ್ತೆಯ ಸ್ಪರ್ಶ್ ಆಸ್ಪತ್ರೆಯ ಯುನಿಟ್ ಸಿಒಒ ರಘುರಾಮ್ ಎಮ್ ಡಿ, “ಕಳೆದ ಒಂದು ವರ್ಷದಲ್ಲಿ ನಾವು ಇಲ್ಲಿನ ಸಮುದಾಯವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಂಡಿದ್ದೇವೆ. ರೋಗಿಗಳೊಂದಿಗಿನ ಪ್ರತಿಯೊಂದು ಒಡನಾಟವೂ ನಮ್ಮ ವೈದ್ಯಕೀಯ ಸೇವಾ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ನೆರವಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಿ, ಅತ್ಯುತ್ತಮ ಸಾಕ್ಷ್ಯಾಧಾರಿತ (ಎವಿಡೆನ್ಸ್-ಬೇಸ್ಡ್) ಚಿಕಿತ್ಸೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವತ್ತ ನಾವು ನಿರಂತರವಾಗಿ ಶ್ರಮಿಸುತ್ತೇವೆ,” ಎಂದು ತಿಳಿಸಿದರು.
ಒಟ್ಟಾರೆಯಾಗಿ, ಸರ್ಜಾಪುರ ರಸ್ತೆಯ ಸ್ಪರ್ಶ್ ಆಸ್ಪತ್ರೆಯು ತನ್ನ ಎರಡನೇ ವರ್ಷಕ್ಕೆ ಅಡಿಯಿಡುತ್ತಿರುವ ಈ ಶುಭ ಸಂದರ್ಭದಲ್ಲಿ, ಸರ್ಜಾಪುರ ಹಾಗೂ ಆಗ್ನೇಯ ಬೆಂಗಳೂರಿನ ವಿಶಾಲ ವ್ಯಾಪ್ತಿಯ ಜನತೆಗೆ ಸಂಪೂರ್ಣ ಹಾಗೂ ಸಮಗ್ರ ಆರೋಗ್ಯ ಸೇವೆಗಳ ತಾಣವಾಗಿ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ವಿಶ್ವಾಸ ಮೂಡಿಸಿದೆ.





Leave a comment