Home ಕ್ರೈಂ ನ್ಯೂಸ್ ಪಾವಗಡದಲ್ಲಿ 150 ಪೊಲೀಸರಿಂದ ಬಿರುಸಿನ ಕಾರ್ಯಾಚರಣೆ: ನಾಡಬಾಂಬ್ ಸ್ಫೋಟಿಸಿ ನಕಲಿ ನಕ್ಸಲ್ ಬೆದರಿಕೆಯೊಡ್ಡಿದ್ದ ಕನಕಲಬಂಡೆ ವೆಂಕಟೇಶ್ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪಾವಗಡದಲ್ಲಿ 150 ಪೊಲೀಸರಿಂದ ಬಿರುಸಿನ ಕಾರ್ಯಾಚರಣೆ: ನಾಡಬಾಂಬ್ ಸ್ಫೋಟಿಸಿ ನಕಲಿ ನಕ್ಸಲ್ ಬೆದರಿಕೆಯೊಡ್ಡಿದ್ದ ಕನಕಲಬಂಡೆ ವೆಂಕಟೇಶ್ ಬಂಧನ!

Share
ಪಾವಗಡ
Share

ತುಮಕೂರು/ಪಾವಗಡ: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕನಕಲಬಂಡೆ ಗ್ರಾಮದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ನಾಡಬಾಂಬ್ ಸ್ಫೋಟ ಮತ್ತು ನಕ್ಸಲ್ ಹೆಸರಿನಲ್ಲಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ‘ನಕಲಿ ನಕ್ಸಲ್’ ಕನಕಲಬಂಡೆ ವೆಂಕಟೇಶನ್‌ನನ್ನು ಮಂಗಳವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:

ಆಗಸ್ಟ್ ತಿಂಗಳಿನಲ್ಲಿ ಕನಕಲಬಂಡೆ ಗ್ರಾಮದ ರೈತರೊಬ್ಬರ ಬೋರ್‌ವೆಲ್ ಮೋಟಾರ್ ಪಂಪ್ ಸೆಟ್ ಬಳಿ ಉಂಟಾದ ನಾಡಬಾಂಬ್ ಸ್ಫೋಟವು ಇಡೀ ಸುತ್ತಮುತ್ತಲ ಪ್ರದೇಶದಲ್ಲಿ ಭೀತಿ ಹುಟ್ಟಿಸಿತ್ತು. ಸ್ಫೋಟದ ಬೆನ್ನಲ್ಲೇ ಆರೋಪಿ ವೆಂಕಟೇಶ್ ತಲೆಮರೆಸಿಕೊಂಡಿದ್ದ. ಬಳಿಕ, ಭೂಷಪ್ಪ ಎಂಬ ಸ್ಥಳೀಯ ರೈತನ ತೋಟದ ಬಾಗಿಲಿಗೆ ನಕ್ಸಲೈಟ್ ಸಂಘಟನೆಯ ಹೆಸರಿನಲ್ಲಿ ಬೆದರಿಕೆ ಪತ್ರವೊಂದನ್ನು ಅಂಟಿಸಲಾಗಿತ್ತು. ಈ ಪತ್ರದಲ್ಲಿ ₹5 ಲಕ್ಷ ಹಣ ನೀಡಬೇಕು, ಇಲ್ಲದಿದ್ದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಲಾಗಿತ್ತು.

ಕುಟುಂಬದವರ ಬಂಧನ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಹಿಂದೆ ವೆಂಕಟೇಶನ್ ಹೆಂಡತಿ ಸಾಲಮ್ಮ (ಸಾವಿತ್ರಮ್ಮ), ಇಬ್ಬರು ಮಕ್ಕಳು ಹಾಗೂ ಇಬ್ಬರು ಸಹಚರರನ್ನು ಈಗಾಗಲೇ ಬಂಧಿಸಿದ್ದರು. ಆದರೆ ಮುಖ್ಯ ಆರೋಪಿ ವೆಂಕಟೇಶ್ ಕಾಡು ಹಾಗೂ ಬೆಟ್ಟಗಳಲ್ಲಿ ಅಡಗಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ.

150 ಪೊಲೀಸರ ಬೃಹತ್ ಕಾರ್ಯಾಚರಣೆ:

ಕಳೆದ 20 ದಿನಗಳಿಂದ ಪೊಲೀಸರು ಈತನ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಕಡಮಲಕುಂಟೆ ಬೆಟ್ಟ ಸಾಲುಗಳಲ್ಲಿ ಆರೋಪಿ ಅಡಗಿರುವ ಖಚಿತ ಮಾಹಿತಿ ಮೇರೆಗೆ, 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಬೃಹತ್ ಕಾಂಬಿಂಗ್ ಕಾರ್ಯಾಚರಣೆ ಕೈಗೊಂಡರು. ಕೊನೆಗೆ ಪಾವಗಡ ಸಮೀಪದ ಬೆಟ್ಟ ಪ್ರದೇಶದಲ್ಲಿ ಆತನನ್ನು ಸುತ್ತುವರಿದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles