Home ಕ್ರೈಂ ನ್ಯೂಸ್ ಗುರುಗ್ರಾಮ ಹಿಟ್ ಅಂಡ್ ರನ್: ‘ಫಾಲೋವರ್ಸ್‌ಗಾಗಿ ಸಂಚು’ – ಮಹಿಳಾ ಬೈಕರ್ ವಿರುದ್ಧವೇ ತಿರುಗಿಬಿದ್ದ ಚಾಲಕ ಪರ ವಕೀಲ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಗುರುಗ್ರಾಮ ಹಿಟ್ ಅಂಡ್ ರನ್: ‘ಫಾಲೋವರ್ಸ್‌ಗಾಗಿ ಸಂಚು’ – ಮಹಿಳಾ ಬೈಕರ್ ವಿರುದ್ಧವೇ ತಿರುಗಿಬಿದ್ದ ಚಾಲಕ ಪರ ವಕೀಲ!

Share
ಗುರುಗ್ರಾಮ
Share

ನವದೆಹಲಿ/ಗುರುಗ್ರಾಮ: ಗುರುಗ್ರಾಮದ ಪೋಶ್ ಪ್ರದೇಶವಾದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಇತ್ತೀಚೆಗೆ ನಡೆದ ಭೀಕರ ಹಿಟ್ ಅಂಡ್ ರನ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ‘ರೆಬೆಲ್ ವೀಲ್ಸ್ ಸಿಯಾ’ ಎಂಬ ಇನ್‌ಸ್ಟಾಗ್ರಾಮ್ ಪ್ರಸಿದ್ಧ ಮಹಿಳಾ ರೈಡರ್‌ಗೆ ಕಾರು ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ, ಆರೋಪಿ ಚಾಲಕ ಕಲ್ಯಾಣ್ ಬೈನ್ಸ್ಲಾ ಪರ ವಕೀಲರು ಬೈಕ್ ಸವಾರೆಯ ಮೇಲೆಯೇ ಎಲ್ಲಾ ದೋಷ ಹೊರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೀವ್ಸ್, ಫಾಲೋವರ್ಸ್ ಹಾಗೂ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಈ ಸನ್ನಿವೇಶ ಸೃಷ್ಟಿಸಲಾಗಿದೆ ಎಂದು ವಕೀಲರು ಪ್ರತಿಪಾದಿಸಿದ್ದಾರೆ. “ಮಹಿಳಾ ಸವಾರೆಯು ರಸ್ತೆಯಲ್ಲಿ ಗಂಟೆಗೆ 140 ರಿಂದ 170 ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದರು. ಸಾರ್ವಜನಿಕ ರಸ್ತೆಗಳು ಸ್ಟಂಟ್ ಅಥವಾ ಅತಿವೇಗದ ಚಾಲನೆಗೆ ಮೀಸಲಾಗಿಲ್ಲ. ಇಂತಹ ಬೈಕರ್ ಗುಂಪುಗಳಿಂದಾಗಿ ಪ್ರತಿದಿನ 10 ರಿಂದ 20 ಅಪಘಾತಗಳು ಸಂಭವಿಸುತ್ತಿವೆ” ಎಂದು ವಕೀಲರು ಕಿಡಿಕಾರಿದ್ದಾರೆ.

ಘಟನೆಯ ಸಮಯದಲ್ಲಿ ಕಾರಿನಲ್ಲಿ ಕಲ್ಯಾಣ್ ಬೈನ್ಸ್ಲಾ ಸೇರಿದಂತೆ ನಾಲ್ವರು ಕುಟುಂಬಸ್ಥರಿದ್ದರು. ಸಾರ್ವಜನಿಕರು ಹಲ್ಲೆ (ಲಿಂಚಿಂಗ್) ನಡೆಸಬಹುದು ಎಂಬ ಭೀತಿಯಿಂದ ಚಾಲಕ ಆತ್ಮರಕ್ಷಣೆಗಾಗಿ ಸ್ಥಳದಿಂದ ತೆರಳಿದ್ದಾನೆ ಎಂದು ವಕೀಲರು ಸಮರ್ಥಿಸಿಕೊಂಡಿದ್ದಾರೆ.

ಸವಾರೆಯ ಆರೋಪವೇನು?

ಮಹಿಳಾ ಬೈಕರ್ ನೀಡಿದ ವಿವರಣೆಯ ಪ್ರಕಾರ, ಅವರು ತಮ್ಮ ಏಪ್ರಿಲಿಯಾ RS 457 ಬೈಕ್‌ನಲ್ಲಿ ಗ್ರೂಪ್ ರೈಡಿಂಗ್ ಮಾಡುವಾಗ ಕಾರಿನಲ್ಲಿದ್ದವರು ಮದ್ಯಪಾನ ಮಾಡಿ, ತಮ್ಮನ್ನು ಹಿಂಬಾಲಿಸುತ್ತ ಕಿರುಕುಳ ನೀಡಲು ಯತ್ನಿಸಿದರು. ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಕೋರಿದರೂ, ಕಾರನ್ನು ಸನಿಹಕ್ಕೆ ತಂದು ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದು ಪರಾರಿಯಾದರು. ಈ ಭೀಕರ ಅಪಘಾತದ ದೃಶ್ಯವು ಅವರ ಆಕ್ಷನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles