ಬೆಂಗಳೂರು: ಒಬ್ರು ಬಂದಾಗ ಕುರ್ಚಿ ಬಿಡೋದು ಬಹಳ ಕಷ್ಟ. ಅದ್ರಲ್ಲೂ ಅಧಿಕಾರದ ಕುರ್ಚಿ ಬಿಡೋದಂತೂ ಇನ್ನೂ ಕಷ್ಟ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಒಗಟಿನ ಮಾತು ಆಡಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಇಂದು ನಡೆದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ನನ್ನ ಮಾತನಾಡಿದರು.
ನಾನು ಭಾಷಣ ಮಾಡೋಕ್ಕಿಂತ ಮೊದಲು ನಮ್ಮ ಇಲ್ಲಿ ಒಬ್ಬರಿಗೆ ಸನ್ಮಾನ ಮಾಡಲು ಬಯಸುತ್ತೇನೆ. ಒಂದು ಸಹೋದರಿ ನಡೆಯಲಿಕ್ಕೆ ಆಗ್ತಾ ಇಲ್ಲ, ಕುಂಟುಕೊಂಡು ಬಂದ್ರು. ಇನ್ನೊಬ್ಬರು ಸಹೋದರಿ ಅವರಿಗೆ ಚೇರ್ ಕೊಟ್ರು. ಅವರು ದಯವಿಟ್ಟು ಮೇಲೆ ಬನ್ನಿ, ನಿಮಗೊಂದು ಸನ್ಮಾನ ಮಾಡ್ತೇವೆ. ಯಾಕಂದ್ರೆ ಮಾತೃ ಹೃದಯ ನನಗೆ ಈ ಜನಗಳ ಮೇಲೆ ಬಹಳ ದೊಡ್ಡ ನಂಬಿಕೆ ಇದೆ. ಧರ್ಮಾಂಧರು, ಅಂಧಭಕ್ತರು ಇದ್ದರೂ ನಮ್ಮ ದೇಶದಲ್ಲಿ ಸೌಹೃದಯಿಗಳು, ಮಾತೃ ಹೃದಯ ಇರುವಂತಹ ಲಕ್ಷಾಂತರ ಜನ ಇದ್ದಾರೆ ಎಂದರು.
ಈ ದೇಶದಲ್ಲಿ ಶಿಕ್ಷಣ ವಂಚಿತರೇ ಬಹುಸಂಖ್ಯಾತರು ಇದ್ದಿದ್ದು. ಕೆಲವು ಜನಕ್ಕೆ ಮಾತ್ರ ಶಿಕ್ಷಣದ ಸೌಲಭ್ಯಗಳಿದ್ದವು. ಮೊಘಲರು, ಬ್ರಿಟಿಷರು ಬಾರದಿದ್ದರೆ ನಮಗೆ ಶಿಕ್ಷಣ ಸಹ ಸಿಗುತ್ತಿರಲಿಲ್ಲ. ಇವರು ಬರುವ ಮುನ್ನ ಈ ದೇಶದಲ್ಲಿ ಕುಡಿಯುವ ನೀರು ಮುಟ್ಟೋ ಹಕ್ಕಿರಲಿಲ್ಲ. ಶಿಕ್ಷಣ ಕಲಿಯೋ ಸ್ವಾತಂತ್ರ್ಯ ಇರಲಿಲ್ಲ. ಭೂಮಿಯ ಹಕ್ಕು ಇರಲಿಲ್ಲ. ಮಹಿಳೆಯರಿಗೆ ಭೂಮಿಯ ಹಕ್ಕು ಸಿಕ್ಕಿದ್ದೇ ಮನಮೋಹನ್ ಸಿಂಗ್ ಅವರು ಬಂದಾಗ ಎಂದು ತಿಳಿಸಿದರು.
ಬಿ. ಕೆ. ಹರಿಪ್ರಸಾದ್ ಭಾಷಣದಲ್ಲಿ ಏನೆನೆಲ್ಲಾ ಹೇಳಿದ್ರು?
ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು 1835ರಲ್ಲಿ. ಆಗ ಮಕಾಲೆ ಅವರು ಶಿಕ್ಷಣ ನೀತಿಯನ್ನ ಈ ದೇಶದಲ್ಲಿ ತಂದರು. ಆಗ ಶಿಕ್ಷಣ ನೀತಿ 3% ಮಾತ್ರ ಶಿಕ್ಷಿತರಿದ್ದರು. ಕೇವಲ 3% ಮಾತ್ರ, ಶೇಕಡ ಮೂರು ಭಾಗದಷ್ಟು ಮಾತ್ರ ಈ ದೇಶದಲ್ಲಿ ಶಿಕ್ಷಿತರಿದ್ದರು. ಒಂದು ಶಿಕ್ಷಣ ನೀತಿಯನ್ನು ತಂದು ಅದಕ್ಕೆ ಬಹಳ ವಿರೋಧ ಬಂತು. 1947 ನೇ ಇಸವಿವರೆಗೂ ಅಂದ್ರೆ ಸುಮಾರು 117 ವರ್ಷ ಕಾಲ ನಾವು 11% ಮಾತ್ರ ಶಿಕ್ಷಿತರಾಗೋಕೆ ಸಾಧ್ಯ ಆಯ್ತು. ಬ್ರಿಟಿಷರು ಬರಲಿಲ್ಲ ಅಂದ್ರೆ ಬಹಳಷ್ಟು ಜನಕ್ಕೆ ಶಿಕ್ಷಣ ಸಿಗುತ್ತಿರಲಿಲ್ಲ.
1947 ನೇ ಇಸವಿನಲ್ಲಿ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರು ಮೊದಲನೇ ಶಿಕ್ಷಣ ಸಚಿವರಾಗಿದ್ದರು. ಆಗ ನಿಧಾನವಾಗಿ ಶಿಕ್ಷಣ ನೀತಿ ಅಂತ ಇರ್ಲಿಲ್ಲ ಒಂದು ನೀತಿ ಬರಬೇಕು ಅಂತ ಹೇಳಿ ಅದನ್ನು ಪ್ರಾರಂಭ ಮಾಡಿದಾಗ 11-15 ವಿವಿಗಳು ಇದ್ದವು. ಇಂದು 500ಕ್ಕೂ ಹೆಚ್ಚು ವಿವಿಗಳಿವೆ. ಸಾಕ್ಷರತೆ 11-12% ಇದ್ದಿದ್ದು ಈಗ 76% ಗೆ ಬಂದಿದೆ. ಎಲ್ಲ ಸರ್ಕಾರಗಳು ಸಹ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು ದೇಶದ ಭವಿಷ್ಯವನ್ನ ನಿರ್ಮಾಣ ಮಾಡಬೇಕಾದರೆ, ಶಿಕ್ಷಣದ ಮೂಲಕವೇ ಮಾತ್ರ ಸಾಧ್ಯ.
ಶಿಕ್ಷಿತರಿಗೂ ಅಕ್ಷರಸ್ತರಿಗೂ ಬಹಳ ವ್ಯತ್ಯಾಸ ಇದೆ. ಸಾಕ್ಷರತೆಗೂ ಮತ್ತು ವಿದ್ಯಾವಂತರಿಗೂ ಬಹಳ ವ್ಯತ್ಯಾಸ ಇದೆ. ವಿದ್ಯಾವಂತರಾಗಬೇಕಾದರೆ ಸಾಕ್ಷರತೆ ಇರಲೇಬೇಕು ಅಂತೇನಿಲ್ಲ. ಕಾಮರಾಜ್ ಅವರು ಇದ್ದರು, ಅವರಿಗೆ ಏನು ಶಿಕ್ಷಣ ಇರಲಿಲ್ಲ. ಅವರು ಮಾಡಿದಂತ ಕೆಲಸ ತಮಿಳುನಾಡಲ್ಲಿ ಯಾರೂ ಸಹ ಮರೆಯೋ ಹಾಗಿರಲಿಲ್ಲ. ಅದೇ ರೀತಿ ಈಗ ಸಾಕ್ಷರತೆ ಅನ್ನೋದು ಏನಾಗಿದೆ ಎಂದರೆ ಕೆಲವರು BA, B.Com, MA ಅಂತ ಓದಿರ್ತಾರೆ. ಅವರನ್ನು ನೋಡಿದರೆ ಅಂಧಭಕ್ತರಾಗಿರುತ್ತಾರೆ. ಅವರಿಗೆ ನೀವು ಶಿಕ್ಷಿತರು ಅಂತ ಹೇಳಕ್ಕಾಗಲ್ಲ ಅಶಿಕ್ಷಿತರು ಅಂತ ಹೇಳಬೇಕು.
ಈ ಶಿಕ್ಷಣ ಕ್ಷೇತ್ರದಲ್ಲಿ ಕೇವಲ ಜ್ಞಾನಾರ್ಜನೆ ಮಾಡುವುದು ಮಾತ್ರ ಶಿಕ್ಷಕರ ಗುರಿಯಲ್ಲ. ಆ ಮಕ್ಕಳಿಗೆ ಒಳ್ಳೆ ಭವಿಷ್ಯವನ್ನು ರೂಪಿಸೋಕೋಸ್ಕರ ನೀವು ಮಾಡಬೇಕಾದಂತಹ ಕೆಲಸ ಬಹಳ ಇದೆ. ನೀವು ಬಂದಿರೋದೇ ಸಮಾಜವನ್ನ ಸುಧಾರಣೆ ಮಾಡಲು. ದೇಶದ ಮತ್ತು ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದರೆ ನಿಮ್ಮ ಪಾತ್ರ ಬಹಳ ದೊಡ್ಡದಿದೆ.
ಶಾಲಾ ಕಾಲೇಜುಗಳಲ್ಲಿ ದ್ವೇಷ ಹರಡುತ್ತಿದೆ. ಅದನ್ನು ನೀಗಿಸಬೇಕಾದರೆ ನೀವೆಲ್ಲರೂ ಸಹ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆಯುಬೇಕು. ಆಗ ಮಾತ್ರ ಸಾಧ್ಯವಾಗುತ್ತದೆ. ಈ ಜಗತ್ತಿನಲ್ಲಿ ಬಹಳ ದೊಡ್ಡ ಆ ಸಮಸ್ಯೆ ಏನಂದ್ರೆ ಮೂರ್ಖರು ಮತ್ತು ಮತಾಂಧರು. ಅವರ ಬಗ್ಗೆ ಅವರು ಸಂಪೂರ್ಣ ವಿಶ್ವಾಸ ಇಟ್ಟುಕೊಂಡಿರುತ್ತಾರೆ.
ಯಾವುದಾದರೂ ದೇಶ ಬಹಳ ಶಕ್ತಿಯುತ, ಬಲಾಢ್ಯ ದೇಶ ಅಂದ್ರೆ ನೀವು ಅಮೇರಿಕಾ, ರಷ್ಯಾ, ಇಂಗ್ಲೆಂಡ್, ಯುರೋಪ್ ಅಂತೀರಾ. ಆದರೆ, ವೈಲ್ಟ್ ಡ್ಯೂರಂಟ್ ಎಂಬ ಅಮೇರಿಕಾದ ದೊಡ್ಡ ತತ್ವಜ್ಞಾನಿ, “ಯಾವುದಾದರೂ ದೇಶವನ್ನು ಬಲಿಷ್ಠ ರಾಷ್ಟ್ರ ಎಂದು ಹೇಳಬೇಕಾದರೆ, ಆ ದೇಶದಲ್ಲಿ ಇರುವ ನಾಗರಿಕರು, ಮಕ್ಕಳನ್ನು ಯಾವ ರೀತಿ ನೋಡ್ತಾರೆ, ಮಹಿಳೆಯರಿಗೆ ಯಾವ ರೀತಿ ಗೌರವ ಕೊಡ್ತಾರೆ, ವಿಕಲಚೇತನ ಜನರಿಗೆ ಯಾವ ರೀತಿ ಗೌರವ ಕೊಡ್ತಾರೆ, ವಯಸ್ಸಾದವರಿಗೆ ಯಾವ ರೀತಿ ಗೌರವ ಕೊಡ್ತಾರೆ? ಈ ನಾಲ್ಕು ಅಂಶಗಳಲ್ಲೂ ಸಹ ಅವರು ಒಳ್ಳೆಯ ಸಂಖ್ಯೆಯಲ್ಲಿದ್ದರೆ ಅದಕ್ಕಿನ್ನ ದೊಡ್ಡ ದೇಶ ಬೇರೊಂದಿಲ್ಲ ಎಂದಿದ್ದಾರೆ. ನಂ 1 ಸ್ಥಾನದಲ್ಲಿರುವುದು ಸ್ವಿಜರ್ ಲೆಂಡ್, ಮಾನವ ಸಂತೋಷ ಸೂಚ್ಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ.
ಈ ಸಮಾಜದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ವಯಸ್ಸಾದವರಿಗೆ, ವಿಕಲಚೇತನರಿಗೆ ಯಾರು ಗೌರವದಿಂದ ಕಾಣುತ್ತಾರೆ, ಅವರನ್ನ ಅದೇ ದೊಡ್ಡ ಸಮಾಜ, ಶಿಕ್ಷಿತ ಸಮಾಜ, ಸುಶಿಕ್ಷಿತ ಸಮಾಜ ಮತ್ತು ನಾಗರಿಕ ಸಮಾಜ ಅಂತ ಎಂದು ಹೇಳಬೇಕು. ನಾನು ಇಡೀ ದೇಶ ಸುತ್ತಿದ್ದೀನಿ, ಇಡೀ ಪ್ರಪಂಚ ಸುತ್ತಿದ್ದೀನಿ. ಭಾರತ ದೇಶಕ್ಕಿನ್ನ ಅದ್ಭುತವಾದ ದೇಶ ಎಲ್ಲೂ ಇಲ್ಲ. ಭಾರತ ದೇಶದ ಅದ್ಭುತವಾದ ದೇಶ ಅಂದ್ರೆ, ಇಲ್ಲಿ ಏಳು ಬಹು ದೊಡ್ಡ ಧರ್ಮಗಳಿವೆ. ಹಿಂದೂ ಧರ್ಮ, ಇಸ್ಲಾಂ ಧರ್ಮ, ಕ್ರೈಸ್ತ ಧರ್ಮ, ಬೌದ್ಧ ಧರ್ಮ, ಸಿಖ್ ಧರ್ಮ, ಜೈನ ಧರ್ಮ, ಜರಸ್ತ್ರಿಯನ್ ಧರ್ಮ. ಬೇರೆ ಯಾವುದೇ ರಾಷ್ಟ್ರಕ್ಕೆ ಹೋದ್ರೆ ಇಷ್ಟೊಂದು ಧರ್ಮ ಅನ್ಯೋನ್ಯವಾಗಿ ಬಾಳಿರುವಂತಹ ದೇಶಗಳೇ ಇಲ್ಲ. ಅದು ಕೇವಲ ಭಾರತದಲ್ಲಿ ಮಾತ್ರ ಸಾಧ್ಯ.
ಸುಶಿಕ್ಷಿತ ಶಿಕ್ಷಕರಿರುವುದರಿಂದ ಮಾತ್ರ ಇದು ಸಾಧ್ಯವಾಗಿದೆ. ಸುಮಾರು ಇಪ್ಪತ್ತೆರಡು ಅಧಿಕೃತವಾದ ಭಾಷೆ ಇದೆ. “ನಮಗೂ ಅಧಿಕೃತವಾದ ಭಾಷೆಗೆ ಅವಕಾಶ ಕೊಡಿ” ಅಂತ ಇನ್ನೂ ಇಪ್ಪತ್ತಾರು ಭಾಷೆ ಸರತಿ ಸಾಲಿನಲ್ಲಿ ನಿಂತಿವೆ. ಹತ್ತೊಂಬತ್ತು ಸಾವಿರ ಆಡುಭಾಷೆಗಳಿವೆ. ಉತ್ತರ ಭಾರತದಲ್ಲಿ ಆರ್ಯನ್, ದಕ್ಷಿಣ ಭಾರತದಲ್ಲಿ ದ್ರಾವಿಡಿಯನ್, ಈಶಾನ್ಯದಲ್ಲಿ ಮಂಗೋಲಿಯನ್ ಇದ್ದಾರೆ. ಯಾವುದಾದರೂ ಬಹು ಸುಂದರವಾದ ದೇಶ ಈ ಒಂದು ಪ್ರಪಂಚದಲ್ಲಿದೆ ಅಂದ್ರೆ ಅದು ಭಾರತ ದೇಶ ಅಂತ ನಾವೆಲ್ಲರೂ ಸಹ ಹೆಮ್ಮೆ ಪಡಬೇಕು.
ಈ ಬಹುತ್ವವನ್ನು ಕಾಪಾಡತಕ್ಕಂತಹ ಕೆಲಸ ನಾವೆಲ್ಲರೂ ಸಹ ಮಾಡಬೇಕು. ಭಾರತ ಎಂದರೆ ಬಹುತ್ವದ ಆತ್ಮ. ಸಂವಿಧಾನದಲ್ಲೂ ಸಹ ಬಹುತ್ವದ ಆತ್ಮ ಅಂತ ಇದೆ. ಮೂಲಭೂತ ಹಕ್ಕು ಶಿಕ್ಷಣ ಮಕ್ಕಳಿಗೆ ಒಂದರಿಂದ ಹನ್ನೆರಡನೇ ತರಗತಿವರೆಗೂ ಶಿಕ್ಷಣ ಕೊಡಬೇಕು ಅಂತ ಅವರು ಹೇಳಿದ್ರು. ಸರ್ಕಾರಿ ಶಾಲೆಗಳು ಮುಚ್ಚುತ್ತಾ ಇದೆ, ಖಾಸಗಿ ಶಾಲೆಗಳು ಮೇಲೆ ಬರ್ತಾ ಇದೆ, ಕಾರಣ ಯಾರು ಅನ್ನೋದು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಬಹುತ್ವದ ರಾಷ್ಟ್ರ ಅಂತ ಹೇಳಿದ್ದು ನಾನು ಇದಕ್ಕೆ. ಆ ಶಿಕ್ಷಣ ನೀತಿ ಮೂಲಕ ಇರೋದನ್ನೆಲ್ಲ ಕೆಡಿಸಿದ್ದಾರೆ. ಧರ್ಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಸರ್ಕಾರ ಯಾವುದೇ ಧರ್ಮಕ್ಕೆ ಸೇರಿದಲ್ಲ. ಸರ್ಕಾರ ಸೇರಿದ್ದು ಈ ದೇಶದ ನೂರಾ ನಲವತ್ತು ಕೋಟಿ ಜನರಿಗೆ. ಎಲ್ಲರೂ ಸಹ ಇದರಲ್ಲಿ ಸೇರಿದ್ದಾರೆ. ಇದೇ ಸಂವಿಧಾನ, ಇದೇ ಜಾತ್ಯತೀತ ಅಂತ ಹೇಳಿದ್ರೆ, ಅದನ್ನು ಮೀರಿ ಮಾಡ್ತಾ ಇದ್ದಾರೆ. ಪರಿಸ್ಥಿತಿ ಹೇಗೆ ಬಂದಿದೆ ಅಂದ್ರೆ, ನೆಹರೂರು ಕ್ರೇಬ್ರೀಡ್ಜ್, ಆಕ್ಸ್ ಫಾರ್ಡ್ ಅಲ್ಲಿ ಓದಿದವರು.
ಮೌಲಾನಾ ಅಬ್ದುಲ್ ಕಲಾಂ ಆಜಾದ್, ಸರ್ವಪಲ್ಲಿ ರಾಧಾಕೃಷ್ಣನ್, ನಮ್ಮ ಬಳ್ಳಾರಿಯಾವರಾದ ಕೆಆರ್ ವಿ ರಾವ್ ಅವರು ಶಿಕ್ಷಣ ಸಚಿವರಾಗಿದ್ದರು. ಈಗ ನಾಲ್ಕನೇ ತರಗತಿ ಪಾಸ್ ಮಾಡ್ದೆ ಇರೋನು ಕೂಡ “ಪರೀಕ್ಷಾ ಪೆ ಚರ್ಚಾ” ಅಂತ ಭಾಷಣ ಮಾಡ್ತಾನೆ. ನಕಲಿ ಪ್ರಮಾಣಪತ್ರ ತೋರಿಸಿ ನಾನು ಪದವೀಧರ ಅಂತ ಪರೀಕ್ಷೆ ಪೇ ಚರ್ಚಾ ಅಂತ ಭಾಷಣ. ದೇಶದ ಪ್ರಧಾನ ಮಂತ್ರಿ ನಕಲಿ ಸರ್ಟಿಫಿಕೇಟ್ ತೋರಿಸ್ತಿದ್ದಾರೆ. ಈ ಮಕ್ಕಳಿಗೆ ಯಾವ ಸಂದೇಶ ನೀಡುತ್ತೀರಿ ಎಂದು ಬಿ. ಕೆ. ಹರಿಪ್ರಸಾದ್ ಪ್ರಶ್ನಿಸಿದರು.





Leave a comment