Home ಕ್ರೈಂ ನ್ಯೂಸ್ ಉದ್ಯಮಿ ಭಾವಿ ಪತಿಯನ್ನೇ ಪ್ರಪಾತಕ್ಕೆ ತಳ್ಳಿ ಕೊಲೆ: ಚಾಟಿಂಗ್ ಆಧಾರದ ಮೇಲೆ ಪ್ರಮುಖ ಸೂತ್ರಧಾರ, ಮೂರನೇ ಆರೋಪಿ ರಿತೇಶ್ ಹಂಗೆ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಉದ್ಯಮಿ ಭಾವಿ ಪತಿಯನ್ನೇ ಪ್ರಪಾತಕ್ಕೆ ತಳ್ಳಿ ಕೊಲೆ: ಚಾಟಿಂಗ್ ಆಧಾರದ ಮೇಲೆ ಪ್ರಮುಖ ಸೂತ್ರಧಾರ, ಮೂರನೇ ಆರೋಪಿ ರಿತೇಶ್ ಹಂಗೆ ಬಂಧನ!

Share
ಉದ್ಯಮಿ
Share

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಲೋಹಗಡ್ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಗ್ರಾಮೀಣ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ.

ಜೂನ್ 18 ರಂದು ನಡೆದ ಈ ಚಿರಪರಿಚಿತ ಕೊಲೆ ಪ್ರಕರಣದಲ್ಲಿ, ಈಗಾಗಲೇ ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಬಂಧಿಸಲಾಗಿತ್ತು. ಇದೀಗ ಚೇತನ್‌ನ ಆಪ್ತ ಸ್ನೇಹಿತ ರಿತೇಶ್ ಹಂಗೆ ಎಂಬಾತನನ್ನು ಪೊಲೀಸರು ಬಂಧಿಸುವುದರೊಂದಿಗೆ ಈ ಕೃತ್ಯದ ಹಿಂದಿದ್ದ ಮಾಸ್ಟರ್ ಪ್ಲಾನ್ ಒಂದೊಂದಾಗಿ ಹೊರಬರುತ್ತಿದೆ.

ಸಂಚಿನ ಹಿಂದಿದ್ದ ರಿತೇಶ್ ಹಂಗೆ ಬಂಧನ:

ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಫೋನ್‌ಗಳ ಫೋರೆನ್ಸಿಕ್ ತನಿಖೆಯ ವೇಳೆ ರಿತೇಶ್ ಹಂಗೆ ಈ ಕೊಲೆಯ ಯೋಜನೆಯಲ್ಲಿ ಭಾಗಿಯಾಗಿದ್ದ ಸಾಕ್ಷ್ಯಗಳು ಸಿಕ್ಕಿವೆ. ಕೇತನ್‌ನನ್ನು ಕೋಟೆಯಿಂದ ಕೆಳಗೆ ತಳ್ಳಿ ಅಪಘಾತದಂತೆ ಬಿಂಬಿಸುವ ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವ ಕುರಿತು ಇವರು ನಡೆಸಿದ್ದ ಸಂಭಾಷಣೆಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಡಗಾಂವ್ ಮಾವಲ್ ಸೆಷನ್ಸ್ ಕೋರ್ಟ್ ರಿತೇಶ್‌ನನ್ನು ಸೆಪ್ಟೆಂಬರ್ 12 ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಸಂಶಯ ಮೂಡಿಸಿದ ಘಟನೆ ಮತ್ತು ತಂಗಿಯ ಜಾಣ್ಮೆ:

ಆರಂಭದಲ್ಲಿ ಪೊಲೀಸರು ಇದನ್ನೊಂದು ಆಕಸ್ಮಿಕ ಅಪಘಾತ (ಸಾವು) ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಘಟನೆ ನಡೆದ ನಾಲ್ಕು ದಿನಗಳ ನಂತರ ಸಂತಾಪ ಸೂಚಿಸಲು ಬಂದ ಸಿಯಾ ಗೋಯಲ್ ಅವರ ನಡೆ-ನುಡಿ ಕೇತನ್‌ನ ಸಹೋದರಿಗೆ ಅನುಮಾನ ತಂದಿತ್ತು. ಸಿಯಾ ನೀಡಿದ ಗೊಂದಲಮಯ ಹೇಳಿಕೆಗಳಿಂದ ಸಂಶಯಗೊಂಡ ಕುಟುಂಬಸ್ಥರು ಪೊಲೀಸರಿಗೆ ಮರು ತನಿಖೆ ನಡೆಸುವಂತೆ ಮನವಿ ಮಾಡಿದರು.

ಹುಡಿ ತೊಟ್ಟ ವ್ಯಕ್ತಿಯ ಸಿಸಿಟಿವಿ ಸುಳಿವು:

ತನಿಖೆ ತೀವ್ರಗೊಳಿಸಿದ ಪೊಲೀಸರಿಗೆ ಸಿಸಿಟಿವಿಯಲ್ಲಿ ಪ್ರಮುಖ ಸುಳಿವು ಸಿಕ್ಕಿತು. ಜೂನ್ ತಿಂಗಳ ಅತಿಯಾದ ಬಿಸಿಲಿನಲ್ಲೂ ಹುಡಿ (Hoodie) ಧರಿಸಿದ್ದ ಚೇತನ್ ಚೌಧರಿ, ಕೇತನ್ ಮತ್ತು ಸಿಯಾ ಅವರ ವಾಹನವನ್ನು ಹಿಂಬಾಲಿಸುತ್ತಿದ್ದುದು ಕಂಡುಬಂತು. ತನಿಖೆಯ ವೇಳೆ ಸಿಯಾ ಮತ್ತು ಚೇತನ್ ಕಳೆದ ಮೂರು ವರ್ಷಗಳಿಂದ ಸಂಪರ್ಕದಲ್ಲಿದ್ದು, ಕಳೆದ 6 ತಿಂಗಳಿನಲ್ಲಿಯೇ 2,000ಕ್ಕೂ ಹೆಚ್ಚು ಬಾರಿಗೆ ಫೋನ್ ಕರೆಗಳಲ್ಲಿ ಮಾತನಾಡಿದ್ದು ಬಯಲಿಗೆ ಬಂದಿದೆ.

ಬಾಲಿ ಶೂಟಿಂಗ್ ರದ್ದು ಹಾಗೂ ದುರಂತ ಅಂತ್ಯ:

ಕೊಲೆಗೆ 12 ದಿನಗಳ ಮೊದಲು ಜೂನ್ 6 ರಂದು ಕೇತನ್ ಮತ್ತು ಸಿಯಾ ಪ್ರಿ-ವೆಡ್ಡಿಂಗ್ ಶೂಟ್‌ಗಾಗಿ ಬಾಲಿ (ಇಂಡೋನೇಷ್ಯಾ) ಪ್ರವಾಸಕ್ಕೆ ತೆರಳಬೇಕಿತ್ತು. ಆದರೆ ವಿಮಾನ ನಿಲ್ದಾಣ ತಲುಪಿದಾಗ ಕೇತನ್ ಅವರ ಪಾಸ್‌ಪೋರ್ಟ್ ಮಾತ್ರ ನಾಪತ್ತೆಯಾಗಿತ್ತು. ಆಹಾರ ಮಳಿಗೆಯ ಬಳಿ ಸಿಯಾ ಕಾರಿಗೆ ಹಿಂತಿರುಗಿದ್ದಾಗ ಪಾಸ್‌ಪೋರ್ಟ್ ಕದ್ದಿರಬಹುದು ಎಂದು ಕೇತನ್ ತಂದೆ ವಿಶಾಲ್ ಅಗರ್ವಾಲ್ ಶಂಕಿಸಿದ್ದಾರೆ. ಈ ಯೋಜನೆ ವಿಫಲವಾದ ಕೆಲವೇ ದಿನಗಳಲ್ಲಿ, ಜೂನ್ 18 ರಂದು ಲೋಹಗಡ್ ಕೋಟೆಗೆ ಚಾರಣಕ್ಕೆ ಕರೆದೊಯ್ದು ಕೇತನ್ ಅಗರ್ವಾಲ್ ಅವರನ್ನು ಬೆಟ್ಟದ ಮೇಲಿಂದ ತಳ್ಳಿ ಹತ್ಯೆ ಮಾಡಲಾಗಿತ್ತು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles