Home ದಾವಣಗೆರೆ ಶಾಂತಿ, ಸೌಹಾರ್ದತೆಗೆ ಹೋರಾಡಿದ್ದಕ್ಕೆ ಗೌರಿ ಲಂಕೇಶ್ ಹತ್ಯೆ ಶಿಕ್ಷಕರ ದಿನಾಚರಣೆಯಂದೇ ಕೊಲೆ ನೆನಪಿಸಿಕೊಂಡು ಬಿ. ಕೆ. ಹರಿಪ್ರಸಾದ್ ಭಾವುಕ: ಶಾಲಾ-ಕಾಲೇಜುಗಳಲ್ಲಿ ದ್ವೇಷ ತಡೆಯಲು ಶಿಕ್ಷಕರಿಗೆ ಕರೆ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಶಾಂತಿ, ಸೌಹಾರ್ದತೆಗೆ ಹೋರಾಡಿದ್ದಕ್ಕೆ ಗೌರಿ ಲಂಕೇಶ್ ಹತ್ಯೆ ಶಿಕ್ಷಕರ ದಿನಾಚರಣೆಯಂದೇ ಕೊಲೆ ನೆನಪಿಸಿಕೊಂಡು ಬಿ. ಕೆ. ಹರಿಪ್ರಸಾದ್ ಭಾವುಕ: ಶಾಲಾ-ಕಾಲೇಜುಗಳಲ್ಲಿ ದ್ವೇಷ ತಡೆಯಲು ಶಿಕ್ಷಕರಿಗೆ ಕರೆ!

Share
ಬಿ.ಕೆ. ಹರಿಪ್ರಸಾದ್
Share

ಬೆಂಗಳೂರು: ಸರ್ವಪಲ್ಲಿ ರಾಧಾಕೃಷ್ಣನ್ ರವರ ಹುಟ್ಟು ಹಬ್ಬದ ದಿವಸ ಶಿಕ್ಷಕರ ದಿನಾಚರಣೆಯನ್ನ ನಾವು ಮಾಡುತ್ತೇವೆ. ನೋವಿನ ಸಂಗತಿ ಎಂದರೆ ಇದೇ ದಿವಸ ಗೌರಿ ಲಂಕೇಶ್ ಅವರ ಕೊಲೆಯಾಗಿತ್ತು. ಇದನ್ನು ಸಹ ನೆನಪಿಸಿದಾಗ ಬಹಳ ದುಃಖವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ನೋವಿನ ಮಾತನಾಡಿದರು.

ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ನನ್ನ ಮಾತನಾಡಿದರು.

ಗೌರಿ ಲಂಕೇಶ್ ನಮ್ಮ ಮೇಷ್ಟ್ರು ಮಗಳು. ಅವರು ಪತ್ರಕರ್ತರು ಸಹ ಆಗಿದ್ದರು. ಅವರ ಒಂದೇ ಒಂದು ಕಾಳಜಿ ಏನು ಅಂದ್ರೆ, ಏನು ನಾಡಗೀತೆ ಹಾಡುವಾಗ ಸರ್ವ ಜನಾಂಗದ ಶಾಂತಿಯ ತೋಟ ಅಂತ ಹೇಳಿ ಕುವೆಂಪು ಅವರ ಕವನ ಹೇಳಿದಾಗ, ಅದನ್ನ ಈ ಕರ್ನಾಟಕ ರಾಜ್ಯ, ಇಡೀ ದೇಶ ಸರ್ವ ಜನಾಂಗದ ಶಾಂತಿಯ ತೋಟ ಆಗ್ಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ, ಮುಸಲ್ಮಾನ ಎಲ್ಲರ ಪರ ಹೋರಾಟ ಮಾಡಿದ್ದಕ್ಕೋಸ್ಕರ ಅವರ ಕೊಲೆಯಾಗಿದೆ ಎಂದು ವಿಷಾದಿಸಿದರು.

ಈ ಶಿಕ್ಷಣ ಕ್ಷೇತ್ರದಲ್ಲಿ ಕೇವಲ ಜ್ಞಾನಾರ್ಜನೆ ಮಾಡುವುದು ಮಾತ್ರ ಶಿಕ್ಷಕರ ಗುರಿಯಲ್ಲ. ಆ ಮಕ್ಕಳಿಗೆ ಒಳ್ಳೆ ಭವಿಷ್ಯವನ್ನು ರೂಪಿಸೋಕೋಸ್ಕರ ನೀವು ಮಾಡಬೇಕಾದಂತಹ ಕೆಲಸ ಬಹಳ ಇದೆ. ನೀವು ಬಂದಿರೋದೇ ಸಮಾಜವನ್ನ ಸುಧಾರಣೆ ಮಾಡಲು. ದೇಶದ ಮತ್ತು ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದರೆ ನಿಮ್ಮ ಪಾತ್ರ ಬಹಳ ದೊಡ್ಡದಿದೆ.

ಶಾಲಾ ಕಾಲೇಜುಗಳಲ್ಲಿ ದ್ವೇಷ ಹರಡುತ್ತಿದೆ. ಅದನ್ನು ನೀಗಿಸಬೇಕಾದರೆ ನೀವೆಲ್ಲರೂ ಸಹ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆಯುಬೇಕು. ಆಗ ಮಾತ್ರ ಸಾಧ್ಯವಾಗುತ್ತದೆ. ಈ ಜಗತ್ತಿನಲ್ಲಿ ಬಹಳ ದೊಡ್ಡ ಆ ಸಮಸ್ಯೆ ಏನಂದ್ರೆ ಮೂರ್ಖರು ಮತ್ತು ಮತಾಂಧರು. ಅವರ ಬಗ್ಗೆ ಅವರು ಸಂಪೂರ್ಣ ವಿಶ್ವಾಸ ಇಟ್ಟುಕೊಂಡಿರುತ್ತಾರೆ ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles