Home ದಾವಣಗೆರೆ ಟೆಲಿಪ್ರಾಂಪ್ಟರ್ ಇಲ್ಲದೆೇ ನರೇಂದ್ರ ಮೋದಿಗೆ ಭಾಷಣ ಮಾಡಲು ಆಗಲ್ಲ, SSLC, PUC ಪಾಸ್ ಆಗ್ದೆೇ ಇರೋರ ಶಿಕ್ಷಣ ಸಚಿವರನ್ನ ಮಾಡಿದ್ರೆ ಶಿಕ್ಷಣ ವ್ಯವಸ್ಥೆ ಏನಾಗ್ಬೇಕು? ಬಿ. ಕೆ. ಹರಿಪ್ರಸಾದ್!
ದಾವಣಗೆರೆನವದೆಹಲಿಬೆಂಗಳೂರು

ಟೆಲಿಪ್ರಾಂಪ್ಟರ್ ಇಲ್ಲದೆೇ ನರೇಂದ್ರ ಮೋದಿಗೆ ಭಾಷಣ ಮಾಡಲು ಆಗಲ್ಲ, SSLC, PUC ಪಾಸ್ ಆಗ್ದೆೇ ಇರೋರ ಶಿಕ್ಷಣ ಸಚಿವರನ್ನ ಮಾಡಿದ್ರೆ ಶಿಕ್ಷಣ ವ್ಯವಸ್ಥೆ ಏನಾಗ್ಬೇಕು? ಬಿ. ಕೆ. ಹರಿಪ್ರಸಾದ್!

Share
ನರೇಂದ್ರ ಮೋದಿ
Share

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಟೆಲಿಪ್ರಾಂಪ್ಟರ್ ಇಲ್ಲದೆ ಭಾಷಣ ಮಾಡಕ್ಕೆ ಆಗೋದಿಲ್ಲ. ಮಕ್ಕಳಿಗೆ ನಾವ್ ಹೇಳ್ತೀವಿ ನೀವು ಚರ್ಚೆ ಮಾಡಿ, ಜ್ಞಾಪಕ ಶಕ್ತಿ ಬೆಳೆಸಿಕೊಳ್ಳಿ ಎಂದು. ಸ್ಮತಿ ಇರಾನಿ, ಅವ್ರು ಕೂಡ ಎಸ್ ಎಸ್ ಎಲ್ ಸಿ ಪಾಸ್ ಮಾಡಿಲ್ಲ. ವಿಕೆ ಅಗ್ನಿರಾವ್, ಪಿ.ವಿ ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ ಇವರೆಲ್ಲಾ ಶಿಕ್ಷಣ ಸಚಿವರಿದ್ರು. ಅದು ಬಿಟ್ಟು SSLC, PUC ಪಾಸ್ ಆಗ್ದೆ ಇರೋರನ್ನು ಶಿಕ್ಷಣ ಸಚಿವರು ಮಾಡಿದ್ರೆ ದೇಶದ ಶಿಕ್ಷಣ ವ್ಯವಸ್ಥೆ ಏನಾಗ್ಬೇಕು ಅಂತ ಯೋಚನೆ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ನನ್ನ ಮಾತನಾಡಿದರು.

ಯಾಕಂದ್ರೆ, ನೀವೆಲ್ಲಾ ಅಭಿಪ್ರಾಯವನ್ನ ಸೃಷ್ಟಿ ಮಾಡ್ತಕ್ಕಂತ ಜನ. Opinion makers. ನೀವು ಸಮಾಜದಲ್ಲಿ opinion, you can create your own opinion. ಅದನ್ನ ಸಮಾಜದ ಒಳ್ಳೇದಕ್ಕಾಗಿ ಸೃಷ್ಟಿ ಮಾಡಿ ಎಂದರು.

ಎಲ್ಲಾ ಕ್ಷೇತ್ರವು ಕಲುಷಿತವಾಗಿದೆ. ರಾಜಕಾರಣ ಕೆಟ್ಟಿದ್ದಿದೆ. ಯಾಕಂದ್ರೆ ಮೊದಲು ಬ್ರಿಟಿಷರ ಕಾಲದಿಂದ ನಾವೆಲ್ಲಾ ಯುವಕರಿದ್ದಾಗ ಕಾಕಿ ಬಟ್ಟೆಗೆ ಬೀಳ್ತಾ ಇದ್ರು. ಆಮೇಲೆ ಖಾದಿ ಬಟ್ಟೆಗೂ ಬಿದ್ರು. ಈಗ ಉಳ್ದಿರೋದು ಕಾವಿ ಬಟ್ಟೆ. ಅದನ್ನ ಹಾಕೊಂಡು ರಾಜಕೀಯ ಮಾಡ್ತಾ ಇದ್ದಾರೆ. ನಾವೆಲ್ಲಾ ಕಾಲೇಜಿನಲ್ಲಿ ಇದ್ದಾಗ ಕಾವಿ ಬಟ್ಟೆ ಹಾಕೋನು, ಏನು, ಸರ್ವ ಸಂಗ ಪರಿತ್ಯಾಗಿ ಮಾತ್ರ ಸನ್ಯಾಸಿ ಆಗಬಹುದು ಅಂತ. ಈಗ ಹಿಮಾಲಯಕ್ಕೆ ಹೋಗ್ತಾ ಇಲ್ಲ, ಎಲ್ಲಾ ಅಧಿಕಾರ ಹಿಡಿಯೋಕೆ ಬಂದಿದ್ದಾರೆ. ಕಾವಿನಲ್ಲೂ ಜನ ನಂಬಿಕೆ ಕಳ್ಕೊಂಡ್ರೆ, ನಿಮಗೆ ಉಚ್ಚ ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕೋದಿಲ್ಲ, ಅಷ್ಟು ಜನ ಆಸ್ಪತ್ರೆ ಸೇರಬೇಕಾಗುತ್ತೆ. ನೀವು ಸಾಂವಿಧಾನಿಕ ಚೌಕಟ್ಟಿನಲ್ಲಿ ಏನು ನಿಮಗೆ ಅಧಿಕಾರ ಇದೆ, ಹಕ್ಕಿದೆ ಇದನ್ನ ಪಡೀಲಿಕ್ಕೆ ಹೋರಾಟ ಮಾಡಿ. ನಿಮ್ಮ ಧರ್ಮ ನೀವು ಪೂಜೆ ಮಾಡಿ, ನಮಾಜ್ ಮಾಡಿ, ಪ್ರಾರ್ಥನೆ ಮಾಡಿ, ಗುರುಗ್ರಂಥ ಓದಿ, ಏನು ಅದೆಲ್ಲ ಮನೆನಲ್ಲಿ. ಸಾರ್ವಜನಿಕ ಬಂದಾಗ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಏನ್ ಮಾಡ್ಬೇಕು ಅನ್ನೋದು ಯೋಚನೆ ಮಾಡಿದಾಗ ಮಾತ್ರ ನಿಮ್ಮ ಮಕ್ಕಳ ಭವಿಷ್ಯ, ಈ ದೇಶದ ಭವಿಷ್ಯ ಉದ್ದಾರ ಆಗುತ್ತೆ
ಎಂದು ತಿಳಿಸಿದರು.

ನಮ್ಮಲ್ಲಿ ಜಾತಿ, ಭಾಷೆ, ಧರ್ಮ ಯಾವುದೇ ಭೇದಭಾವ ಇಲ್ಲದೆ ಶಿಕ್ಷಕರು ಇದೆಲ್ಲಕ್ಕಿನ್ನ ಮೀರಿ ಮಕ್ಕಳಿಗೆ ಒಳ್ಳೆ ಭವಿಷ್ಯವನ್ನು ರೂಪಿಸಲಿಕ್ಕೋಸ್ಕರ ಕೆಲಸ ಮಾಡಿದಾಗ ಮಾತ್ರ ಕೇವಲ ಭಾರತ ದೇಶ ಅಲ್ಲ, ಪ್ರಪಂಚ ಮತ್ತು ಸಮಾಜ ಉದ್ದಾರ ಆಗುತ್ತೆ. ಮಕ್ಕಳಿಗೆ ಒಳ್ಳೆ ಭವಿಷ್ಯ ರೂಪಿಸಕ್ಕೆ ಕೆಲಸ ಮಾಡಿ. 1986 ರಾಜಿವ್ ಗಾಂಧಿಯವರು ಶಿಕ್ಷಣ ನೀತಿ ತಂದರು. 2020 ರಲ್ಲಿ National Education Policy ಅಂತ ತಂದ್ರು. ಅವರದೇನು ಅಂದ್ರೆ, ಒಂದು ರಾಷ್ಟ್ರ ಒಬ್ಬ ನಾಯಕ, ಒಂದು ರಾಷ್ಟ್ರ ಒಂದು ಧರ್ಮ, ಒಂದು ರಾಷ್ಟ್ರ ಒಂದು ಧಾನ್ಯ, ಒಂದು ದೇಶ ಒಂದು ಶಿಕ್ಷಣ. ಹೀಗೆ ಎಲ್ಲ ಒಂದೇ ಬೇಕಂತೆ ಎಂದು ಲೇವಡಿ ಮಾಡಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles