Home ಕ್ರೈಂ ನ್ಯೂಸ್ ಬಿಸಿ ಬಿಸಿ ಕಜ್ಜಾಯ: ಬೆಂಗಳೂರಿನಲ್ಲಿ ಬಂಧಿತನಾದ ಆರ್‌ಜಿ ಕರ್ ಪ್ರಕರಣದ ಆರೋಪಿ ಸೋಮನಾಥ್ ಡೇ ಮೇಲೆ ಕಲ್ಲು, ಮೊಟ್ಟೆ ಎಸೆತ, ಪೊಲೀಸ್ ಠಾಣೆ ಎದುರು ಉದ್ವಿಗ್ನತೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಬಿಸಿ ಬಿಸಿ ಕಜ್ಜಾಯ: ಬೆಂಗಳೂರಿನಲ್ಲಿ ಬಂಧಿತನಾದ ಆರ್‌ಜಿ ಕರ್ ಪ್ರಕರಣದ ಆರೋಪಿ ಸೋಮನಾಥ್ ಡೇ ಮೇಲೆ ಕಲ್ಲು, ಮೊಟ್ಟೆ ಎಸೆತ, ಪೊಲೀಸ್ ಠಾಣೆ ಎದುರು ಉದ್ವಿಗ್ನತೆ!

Share
ಸೋಮನಾಥ್ ಡೇ
Share

ಕೋಲ್ಕತ್ತಾ: 2024ರ ವೈದ್ಯೆಯ ರೇಪ್ ಹಾಗೂ ಮರ್ಡರ್ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮತ್ತು ಆತುರದ ಅಂತ್ಯಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿರುವ ಪಾಣಿಹಟಿ ಪುರಸಭೆಯ ಮಾಜಿ ಅಧ್ಯಕ್ಷ, ತೃಣಮೂಲ ಕಾಂಗ್ರೆಸ್ (TMC) ನಾಯಕ ಸೋಮನಾಥ್ ಡೇ ಅವರ ಮೇಲೆ ಸಾರ್ವಜನಿಕರ ಗುಂಪೊಂದು ಕಲ್ಲು, ಇಟ್ಟಿಗೆ ಹಾಗೂ ಹಸಿ ಮೊಟ್ಟೆಗಳಿಂದ ತೀವ್ರ ದಾಳಿ ನಡೆಸಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಖಾರ್ಡಾ ಪೊಲೀಸ್ ಠಾಣೆಯ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ತಲೆಗೆ ಹೆಲ್ಮೆಟ್ ಧರಿಸಿ ಪೊಲೀಸರು ಸೋಮನಾಥ್ ಡೇ ಅವರನ್ನು ಕೋರ್ಟ್‌ಗೆ ಕರೆದೊಯ್ಯಲು ವಾಹನಕ್ಕೆ ಹತ್ತಿಸುತ್ತಿದ್ದಾಗ ಕೋಪೋದ್ರಿಕ್ತ ಸಾರ್ವಜನಿಕರ ಗುಂಪು ದಾಳಿ ನಡೆಸಿದೆ. ಈ ವೇಳೆ ಆರೋಪಿಯನ್ನು ರಕ್ಷಿಸಲು ಯತ್ನಿಸಿದ ಹಲವು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ.

ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಸೋಮನಾಥ್ ಡೇ ಅವರನ್ನು ಇತ್ತೀಚೆಗಷ್ಟೇ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ ಪಶ್ಚಿಮ ಬಂಗಾಳಕ್ಕೆ ಕರೆತಂದಿದ್ದರು. ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ವೈದ್ಯೆಯ ಹತ್ಯೆಯ ನಂತರ, ಶವವನ್ನು ಆತುರದಲ್ಲಿ ಅಂತ್ಯಕ್ರಿಯೆ ನಡೆಸಿ ಪ್ರಮುಖ ಸಾಕ್ಷ್ಯಗಳನ್ನು ನಾಶಮಾಡಲು ಯತ್ನಿಸಿದ ಆರೋಪ ಇವರ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮನಾಥ್ ಅವರನ್ನು ಬಾರಕ್‌ಪೋರ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲು ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles