Home ಆರೆಸ್ಸೆಸ್ ಸಂಘಕ್ಕೆ ಸೇರಲು ಬಯಸುವವರಿಗೆ ಮೋಹನ್ ಭಾಗವತ್ ನೀಡಿದ ಸಂದೇಶವೇನು? ನ್ಯೂಯಾರ್ಕ್‌ನಲ್ಲಿ ಜಾಗತಿಕ ಏಕತಾ ಸಮಾವೇಶ!
Homeದಾವಣಗೆರೆನವದೆಹಲಿಬೆಂಗಳೂರು

ಆರೆಸ್ಸೆಸ್ ಸಂಘಕ್ಕೆ ಸೇರಲು ಬಯಸುವವರಿಗೆ ಮೋಹನ್ ಭಾಗವತ್ ನೀಡಿದ ಸಂದೇಶವೇನು? ನ್ಯೂಯಾರ್ಕ್‌ನಲ್ಲಿ ಜಾಗತಿಕ ಏಕತಾ ಸಮಾವೇಶ!

Share
ಮೋಹನ್ ಭಾಗವತ್
Share

ನ್ಯೂಯಾರ್ಕ್: ಧರ್ಮಗಳು ವಿಭಿನ್ನವಾಗಿರಬಹುದು, ಆದರೆ ಮಾನವೀಯತೆ ಒಂದೇ ಎಂಬ ತತ್ವವನ್ನು ನಂಬಿರುವ ಸಮಾಜದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸರಸಂಘಚಾಲಕ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.

ಅಮೆರಿಕದ ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಲಾದ ‘ಯುನಿವರ್ಸಲ್ ಒನ್‌ನೆಸ್ ಸೆಲೆಬ್ರೇಷನ್ಸ್’ (ಜಾಗತಿಕ ಏಕತಾ ಸಮಾವೇಶ) ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸೇವೆಗಾಗಿ ಬರುವುದಾದರೆ ಮಾತ್ರ ಸಂಘಕ್ಕೆ ಸೇರಿ:

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಂಘಕ್ಕೆ ಸೇರಿದರೆ ನನಗೇನು ಸಿಗುತ್ತದೆ ಎಂಬ ಪ್ರಶ್ನೆ ಸಹಜ. ಆದರೆ, ಏನನ್ನಾದರೂ ಪಡೆಯುವ ಉದ್ದೇಶದಿಂದ ಬರುವುದಾದರೆ ಸಂಘಕ್ಕೆ ಸೇರಬೇಡಿ. ಬದಲಾಗಿ, ಸಮಾಜಕ್ಕೆ ಸೇವೆ ಸಲ್ಲಿಸುವ ಇಚ್ಛೆ ಇದ್ದರೆ ಮಾತ್ರ ಬನ್ನಿ, ಅಂತಹವರಿಗೆ ಇಲ್ಲಿ ಮುಕ್ತ ಅವಕಾಶವಿದೆ” ಎಂದು ಸರಸಂಘಚಾಲಕರು ಕರೆ ನೀಡಿದರು.

ಟೈಮ್ಸ್ ಸ್ಕ್ವೇರ್‌ನಲ್ಲಿ ಭಾಗವತ್ ಚಿತ್ರ ಪ್ರದರ್ಶನ:

ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಸಮಾವೇಶಕ್ಕೂ ಮುನ್ನ ನ್ಯೂಯಾರ್ಕ್‌ನ ವಿಶ್ವಪ್ರಸಿದ್ಧ ‘ಟೈಮ್ಸ್ ಸ್ಕ್ವೇರ್’ ಡಿಜಿಟಲ್ ಬಿಲ್‌ಬೋರ್ಡ್‌ಗಳಲ್ಲಿ ಮೋಹನ್ ಭಾಗವತ್ ಅವರ ಚಿತ್ರಗಳು ಹಾಗೂ ಸಮಾವೇಶದ ಸಂದೇಶಗಳು ಪ್ರದರ್ಶನಗೊಂಡು ಗಮನ ಸೆಳೆದವು.

ಆರೆಸ್ಸೆಸ್‌ನ ಶತಮಾನೋತ್ಸವ ವರ್ಷದ ಜಾಗತಿಕ ಸಂಪರ್ಕ ಅಭಿಯಾನದ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಮೆರಿಕ, ಕೆನಡಾ ಮತ್ತು ಬ್ರಿಟನ್ ದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.

Share

Leave a comment

Leave a Reply

Your email address will not be published. Required fields are marked *

Related Articles