Home ದಾವಣಗೆರೆ ದೇಶಾದ್ಯಂತ ಕರ್ನಾಟಕ ಸರ್ಕಾರದಲ್ಲಿ ಮಹಿಳೆಗೆ ಸ್ಥಾನ ಇಲ್ಲವೆಂಬ ಟೀಕೆಗೆ ಎಚ್ಚೆತ್ತ ಹೈಕಮಾಂಡ್: ಮೂರ್ನಾಲ್ಕು ದಿನಗಳಲ್ಲಿ ಮಹಿಳಾ ಸಚಿವೆ ಸೇರ್ಪಡೆ ಖಚಿತ ಎಂದ್ರು ಡಿ.ಕೆ. ಶಿವಕುಮಾರ್!
ದಾವಣಗೆರೆಬೆಂಗಳೂರು

ದೇಶಾದ್ಯಂತ ಕರ್ನಾಟಕ ಸರ್ಕಾರದಲ್ಲಿ ಮಹಿಳೆಗೆ ಸ್ಥಾನ ಇಲ್ಲವೆಂಬ ಟೀಕೆಗೆ ಎಚ್ಚೆತ್ತ ಹೈಕಮಾಂಡ್: ಮೂರ್ನಾಲ್ಕು ದಿನಗಳಲ್ಲಿ ಮಹಿಳಾ ಸಚಿವೆ ಸೇರ್ಪಡೆ ಖಚಿತ ಎಂದ್ರು ಡಿ.ಕೆ. ಶಿವಕುಮಾರ್!

Share
ಕರ್ನಾಟಕ
Share

ಬೆಂಗಳೂರು: ಕರ್ನಾಟಕದ ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯವಿಲ್ಲ ಎಂಬ ವಿರೋಧ ಪಕ್ಷಗಳ ತೀವ್ರ ಟೀಕೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. “ಇನ್ನೊಂದೆರಡು ಅಥವಾ ಮೂರು ದಿನಗಳಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಖಂಡಿತವಾಗಿಯೂ ಮಹಿಳಾ ಸಚಿವೆಯನ್ನು ಸೇರ್ಪಡೆಗೊಳಿಸಲಾಗುವುದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಂಡಿಯಾ ಟುಡೇ ಕರ್ನಾಟಕ ರೌಂಡ್‌ಟೇಬಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಮಹಿಳೆಯರ ಸಬಲೀಕರಣ ಮತ್ತು ಪ್ರಾತಿನಿಧ್ಯಕ್ಕೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು. ಇತ್ತೀಚೆಗೆ ನಡೆದ 33 ಸದಸ್ಯರ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಸ್ಥಾನ ಸಿಗದಿರುವ ಬಗ್ಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿತ್ತು.

ಆರಂಭದಲ್ಲಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಸಚಿವರ ಪಟ್ಟಿಯಲ್ಲಿ ಅಂತಿಮಗೊಂಡಿತ್ತಾದರೂ, ಕೊನೆಯ ಕ್ಷಣದ ಕೆಲ ಆಡಳಿತಾತ್ಮಕ ಗೊಂದಲ ಹಾಗೂ ಉಮಾಶ್ರೀ ಅವರ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಅವರ ಪ್ರಮಾಣವಚನ ಮುಂದೂಡಲ್ಪಟ್ಟಿತ್ತು. ಇದೀಗ ಬಾಕಿ ಉಳಿದಿರುವ ಒಂದು ಸ್ಥಾನವನ್ನು ಮಹಿಳಾ ಶಾಸಕರಿಗೆ ನೀಡಲು ಹೈಕಮಾಂಡ್ ತೀರ್ಮಾನಿಸಿದೆ.

ಸಂಪುಟದಲ್ಲಿನ ಬಣ ರಾಜಕೀಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, “ನಮಗೆ ಕಾಂಗ್ರೆಸ್ ಬಣ ಒಂದೇ ಇರುವುದು, ಬೇರೆ ಯಾವುದೇ ಬಣಗಳಿಲ್ಲ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವುದಷ್ಟೇ ನಮ್ಮ ಆದ್ಯತೆ” ಎಂದು ಖಡಕ್ ಆಗಿ ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles