Home ದಾವಣಗೆರೆ ರಾಯನ ಆರ್ಭಟಕ್ಕೆ ಬಾಕ್ಸ್ ಆಫೀಸ್ ಶೇಕ್: ‘ಧುರಂಧರ್’ ದಾಖಲೆ ಮುರಿದು ಮುನ್ನುಗ್ಗಿದ ಯಶ್ ‘ಟಾಕ್ಸಿಕ್’!
ದಾವಣಗೆರೆಬೆಂಗಳೂರುಸಿನಿಮಾ

ರಾಯನ ಆರ್ಭಟಕ್ಕೆ ಬಾಕ್ಸ್ ಆಫೀಸ್ ಶೇಕ್: ‘ಧುರಂಧರ್’ ದಾಖಲೆ ಮುರಿದು ಮುನ್ನುಗ್ಗಿದ ಯಶ್ ‘ಟಾಕ್ಸಿಕ್’!

Share
ಟಾಕ್ಸಿಕ್
Share

ಬೆಂಗಳೂರು: ಟ್ರೋಲ್, ನೆಗೆಟಿವ್ ರಿವ್ಯೂ ಹಾಗೂ ವಿವಾದಗಳ ನಡುವೆಯೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic: A Fairy Tale for Grown-Ups) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸಿದೆ.

ಬಿಡುಗಡೆಯಾದ ಮೊದಲ ದಿನವೇ ಮಧ್ಯಾಹ್ನ 12 ಗಂಟೆಯ ಒಳಗಾಗಿ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾದ ಮೊದಲ ದಿನದ ಗಳಿಕೆಯನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್-ಇಂಡಿಯಾ ಚಿತ್ರಕ್ಕೆ ದೇಶಾದ್ಯಂತ ಭಾರಿ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ. ಓಣಂ ಸಾಲು ಸಾಲು ರಜೆಯ ದಿನಗಳಲ್ಲಿ ತೆರೆಕಂಡಿರುವ ಈ ಸಿನಿಮಾ, ಭಾರತದಲ್ಲಿ ಮಧ್ಯಾಹ್ನ 12.40ರ ವೇಳೆಗೆ ಬರೋಬ್ಬರಿ ₹31.76 ಕೋಟಿ ನೆಟ್ (Gross ₹37.48 ಕೋಟಿ) ಗಳಿಕೆ ಕಂಡಿದೆ. ‘ಧುರಂಧರ್’ ಸಿನಿಮಾ ತನ್ನ ಮೊದಲ ದಿನ ಒಟ್ಟು ₹28.60 ಕೋಟಿ ಗಳಿಸಿತ್ತು.

ಕರ್ನಾಟಕದಲ್ಲಿ ಕನ್ನಡಿಗರ ಕ್ರೇಜ್ ಮುಗಿಲು ಮುಟ್ಟಿದ್ದು, ಬೆಳಗಿನ ಪ್ರದರ್ಶನಗಳಲ್ಲಿ ಶೇ. 77.69 ರಷ್ಟು ಭರ್ತಿ ಕಂಡುಬಂದಿದೆ. ತೆಲುಗು (57.08%), ತಮಿಳು (45.25%), ಮಲಯಾಳಂ (40.13%) ಹಾಗೂ ಹಿಂದಿ (37.85%) ಆವೃತ್ತಿಗಳಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಪಂಚದಾದ್ಯಂತ 12,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಕಂಡಿರುವ ‘ಟಾಕ್ಸಿಕ್’ ಮೊದಲ ದಿನವೇ ₹100 ರಿಂದ ₹120 ಕೋಟಿ ಕ್ಲಬ್ ಸೇರುವ ಲಕ್ಷಣಗಳು ಗೋಚರಿಸುತ್ತಿವೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles